ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಮತ್ತು ಕೇಸರಿ ಪತ್ತೆ

Pinterest LinkedIn Tumblr

Airport_gold_safran

ಮಂಗಳೂರು, ಜು. 16: ದುಬಾಯಿನಿಂದ ಮುಂಬಯಿ ಮೂಲಕ ಮಂಗಳೂರಿಗೆ ಆಗಮಿಸಿದ ಸ್ಪೈಸ್ ಜೆಟ್ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಮತ್ತು ಕೇಸರಿ ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳಿಬ್ಬರನ್ನು ಕಸ್ಟಮ್ ಇಲಾಖೆ ಅಧಿಕಾರಿಗಳು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರಿನ ಮುಹಮ್ಮದ್ ಹನೀಫ್ ಹಾಗೂ ಕೊಡಗಿನ ಉದ್ದಪ್ಪ ಎಂದು ಗುರುತಿಸಲಾಗಿದ್ದು, ಅವರಿಬ್ಬರೂ ಈ ವಿಮಾನದ ಸಿಬಂದಿ ಎನ್ನಲಾಗಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ವಿಭಾಗದ ಅಧಿಕಾರಿಗಳು ಆರೋಪಿಗಳಿಂದ 2.5 ಕೆ.ಜಿ. ತೂಕದ 75 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 2 ಕೆ.ಜಿ. ಕೇಸರಿಯನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 1.45 ಕ್ಕೆ ದುಬೈಯಿಂದ ಮುಂಬಯಿ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದ ಸ್ಪೈಸ್ ಜೆಟ್ ವಿಮಾನದಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದರು. ಇವರನ್ನು ತಪಾಸಣೆಗೊಳಪಡಿಸಿದಾಗ ಅಕ್ರಮ ಚಿನ್ನ ಮತ್ತು ಕೇಸರಿ ಪತ್ತೆಯಾಗಿದೆ.ಚಿನ್ನವನ್ನು ವಿಮಾನದ ಸೀಟಿನಡಿ ಬಚ್ಚಿಡಲಾಗಿತ್ತು. ಈ ವಿಮಾನವು ದುಬೈಯಿಂದ ಮುಂಬಯಿಗೆ ಅಂತಾರಾಷ್ಟ್ರೀಯ ವಿಮಾನವಾಗಿ ಹಾಗೂ ಮುಂಬಯಿನಿಂದ ಮಂಗಳೂರಿಗೆ ದೇಶೀಯ ವಿಮಾನವಾಗಿ ಕಾರ್ಯಾಚರಿಸುತ್ತಿದೆ. ದೇಶೀಯ ವಿಮಾನದಲ್ಲಿ ಹೆಚ್ಚಿನ ತಪಾಸಣೆ ಇರಲಾರದು ಎಂದು ಭಾವಿಸಿ ಈ ಚಿನ್ನವನ್ನು ಸಾಗಿಸಿದ್ದಿರ ಬೇಕೆಂದು ಶಂಕಿಸಲಾಗಿದೆ.

Comments are closed.