ಕರಾವಳಿ

ಈ ಮನೆಯಲ್ಲಿ ಕಳ್ಳರು ಅದು ಏನು ನೋಡಿದ್ದರೋ ಗೊತ್ತಿಲ್ಲ… ಆದರೆ…

Pinterest LinkedIn Tumblr

Robary_four_time_1

ಮಂಗಳೂರು :ಈ ಮನೆಯಲ್ಲಿ ಕಳ್ಳರು ಏನು ನೋಡಿದ್ದರೋ ಗೊತ್ತಿಲ್ಲ.. ಆದರೆ ಕಳೆದ ಎರಡು ವರ್ಷಗಳಲ್ಲಿ ಕಳ್ಳರು ನಾಲ್ಕು ಬಾರಿ ಈ ಒಂದೇ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ, ಮನೆಯಲ್ಲಿದ್ದ ಸೊತ್ತುಗಳನ್ನು ನಾಶ ಮಾಡಿದ್ದಾರೆ.

ಈ ಬಗ್ಗೆ ಪ್ರತೀ ಸಲ ಪೊಲೀಸರಿಗೆ ದೂರು ನೀಡಲಾಗಿದ್ದರೂ ಫಲಿತಾಂಶ ಮಾತ್ರ ಶೂನ್ಯ. ಈ ಕಳ್ಳರ ಕಾಟದಿಂದ ಬೇಸತ್ತ ಮನೆ ಮಾಲಿಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಮಾತ್ರವಲ್ಲದೇ ಕಳ್ಳರು ಮನೆಯಲ್ಲಿದ್ದ ಪೀಠೋಪಕರಣಗಳನ್ನು ಹಾಗೂ ಮನೆಯನ್ನು ಹಾಳುಗೆಡವಿದ್ದಕ್ಕೆ ಏಳು ಲಕ್ಷ ರೂ. ಪರಿಹಾರ ಕೋರಿದ್ದಾರೆ.

Robary_four_time_2

ಮೂಲತ: ಕಾಸರಗೋಡಿನವರಾದ ನಿವೃತ್ತ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಪಿ. ನಾರಾಯಣ ಎಂಬುವರು ನಗರದ ಕಪಿತಾನಿಯೊದಲ್ಲಿ ಸ್ವಂತ ಮನೆ ಹೊಂದಿದ್ದು, ಕಳೆದ ಹಲವು ವರ್ಷಗಳಿಂದ ಈ ಮನೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಈ ಮನೆಯಲ್ಲಿ ಈ ಹಿಂದೆ ಮೂರು ಬಾರಿ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರೂ ನೀಡಲಾಗಿತ್ತು. ಇತ್ತೀಚಿಗೆ ಮತ್ತೆ ಇವರ ಮನೆಯಲ್ಲಿ ಕಳವು ಯತ್ನ ನಡೆದಿದ್ದು, ಕಳ್ಳರು ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿರುವುದಲ್ಲದೆ, ನಗದು, ಒಡವೆ ಕೊಳ್ಳೆ ಹೊಡೆಯಲು ಯತ್ನಿಸಿದ್ದಾರೆ.

Robary_four_time_5 Robary_four_time_6 Robary_four_time_7 Robary_four_time_8 Robary_four_time_9 Robary_four_time_10 Robary_four_time_11 Robary_four_time_12

ಇತ್ತೀಚಿಗೆ ನಾರಾಯಣ ಅವರ ಅತ್ತೆಯವರ ಅನಾರೋಗ್ಯದ ಕಾರಣ ಮನೆಯವರೆಲ್ಲಾ ಕಾಸರಗೋಡಿಗೆ ಹೋಗಿದ್ದ ಸಂದರ್ಭ ಮತ್ತೆ ಕಳವು ಯತ್ನ ನಡೆದಿದೆ. ಇವರು ಮನೆಗೆ ಹಿಂತಿರುಗಿರುವಷ್ಟರಲ್ಲಿ ಮನೆಯ ಬಾಗಿಲು ಒಡೆದು ನುಗ್ಗಿರುವ ಕಳ್ಳರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿರುವುದಲ್ಲದೆ, ನಗದು, ಒಡವೆ ಕೊಳ್ಳೆ ಹೊಡೆಯಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಅಂದರೆ ಕಳೆದೆರಡು ವರ್ಷಗಳಲ್ಲಿ ನಾಲ್ಕು ಬಾರಿ ಈ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.

ಪ್ರತಿ ಬಾರಿ ಕಳ್ಳತನವಾದಾಗಲೂ ಮಂಗಳೂರು ಗ್ರಾಮಂತರ ಠಾಣೆಗೆ ದೂರು ನೀಡಿದ್ದೇವೆ. ಆದರೆ, ಇದರಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ಸಿಎಂಗೆ ಪತ್ರ ಬರೆದಿದ್ದೇವೆ ಎಂದು ನಾರಾಯಣ ತಿಳಿಸಿದ್ದಾರೆ.

Comments are closed.