ಕರಾವಳಿ

ರಮ್ಜಾನ್ ಹಬ್ಬವನ್ನು ಸೌಹಾರ್ಧಯುತವಾಗಿ ಆಚರಿಸೋಣ: ಎಸ್ಪಿ ಕೆ. ಅಣ್ಣಾಮಲೈ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಜುಲೈ 6 ರಂದು ರಮ್ಝಾನ್ ಹಬ್ಬ ನಡೆಯಲಿದ್ದು ಈ ಹಬ್ಬವನ್ನು ಸೌಹಾರ್ಧಯುತವಾಗಿ ಆಚರಿಸಿ ಯಶಸ್ವಿಗೊಳಿಸೋಣ ಎಂದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಹೇಳಿದರು.ರಮ್ಜಾನ್ ಹಬ್ಬದ ಹಿನ್ನೆಲೆ ಕುಂದಾಪುರದ ತಾಲ್ಲೂಕುಪಂಚಾಯತ್ ಸಭಾಂಗಣದಲ್ಲಿ ಗುರುವಾರ ಸಂಜೆ ಕರೆಯಲಾದ ವಿವಿಧ ಧರ್ಮಗಳ ಮುಖಂಡರ ಶಾಂತಿಸಭೆಯಲ್ಲಿ ಎಸ್ಪಿ ಅವರು ಮಾತನಾಡಿ ಮಾಹಿತಿ ನೀಡಿದರು.

Kundapura_Udupi SP Annamalai_Shanthisabhe (11) Kundapura_Udupi SP Annamalai_Shanthisabhe (1) Kundapura_Udupi SP Annamalai_Shanthisabhe (4) Kundapura_Udupi SP Annamalai_Shanthisabhe (12) Kundapura_Udupi SP Annamalai_Shanthisabhe (7) Kundapura_Udupi SP Annamalai_Shanthisabhe (15) Kundapura_Udupi SP Annamalai_Shanthisabhe (16) Kundapura_Udupi SP Annamalai_Shanthisabhe (8) Kundapura_Udupi SP Annamalai_Shanthisabhe (13) Kundapura_Udupi SP Annamalai_Shanthisabhe (14) Kundapura_Udupi SP Annamalai_Shanthisabhe (17) Kundapura_Udupi SP Annamalai_Shanthisabhe (6) Kundapura_Udupi SP Annamalai_Shanthisabhe (5) Kundapura_Udupi SP Annamalai_Shanthisabhe (10) Kundapura_Udupi SP Annamalai_Shanthisabhe (2) Kundapura_Udupi SP Annamalai_Shanthisabhe (3) Kundapura_Udupi SP Annamalai_Shanthisabhe (9)

ಅವರವರ ಧರ್ಮಗಳ ಆಚರಣೆಗಳು ಹಬ್ಬಗಳು ಅವರಿಗೆ ಬಹುಮುಖ್ಯವಾದುದು. ಹಬ್ಬಗಳನ್ನು ಆಚರಿಸಲು ಇಲಾಖೆ ಸಹಕಾರ ನೀಡಲಿದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕೆಲವು ಸೂಚನೆಗಳನ್ನು ನೀಡಿದೆ. ಕುಂದಾಪುರ ಉಪವಿಭಾಗದಲ್ಲಿ(ಬೈಂದೂರು ಸೇರಿದಂತೆ) 52 ಮಸೀದಿಗಳಿದ್ದು ಎಲ್ಲೆಡೆ ಪ್ರಾರ್ಥನೆಗಳು ನಡೆಯಲಿದೆ ಹಾಗೂ ೫ ಕಡೆಗಳಲ್ಲಿ ಮೆರವಣಿಗೆ ನಡೆಸುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮೆರವಣಿಗೆ ಸಂದರ್ಭ ಹಾಗೂ ಬ್ಯಾನರ್ ಮೊದಲಾದವುಗಳನ್ನು ಹಾಕುವಾಗ ಇಲಾಖೆಗೆ ತಿಳಿಸುವುದು ಉತ್ತಮ. ಅಗತ್ಯ ಸ್ಥಳಗಳಲ್ಲಿ ಮಾತ್ರ ಬ್ಯಾನರ್ ಅಳವಡಿಸುವ ಮೂಲಕ ಎಲ್ಲರಿಗೂ ಅನುಕೂಲವಾಗುವಂತೆ ಮಾಡಿರಿ ಎಂದರು.

ಕಳೆದ ಮೂರು ವರ್ಷಗಳಿಂದಲೂ ರಮ್ಜಾನ್ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ಬಾರದೇ ಶಾಂತಿಯುತವಾಗಿ ಹಬ್ಬ ನಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಎಲ್ಲಾ ಧರ್ಮದವರು ಪರಸ್ಪರ ಸಹಬಾಳ್ವೆ ಸಹಕಾರ ಮೂಲಕ ಹಬ್ಬಗಳನ್ನು ಆಚರಿಸುತ್ತಾ ಬಂದಿರುತ್ತಾರೆ. ಈ ಬಾರಿಯೂ ಹಬ್ಬ ಶಾಂತಿಯುತವಾಗಿ ನಡೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

ಜಿಲ್ಲಾದ್ಯಂತ ಚೆಕ್-ಪೋಸ್ಟ್ ರಚನೆ..
ಅಪರಿಚಿತ ವ್ಯಕ್ತಿಗಳು ನುಸುಳುವಿಕೆ ಮತ್ತು ಅಕ್ರಮ ಗೋಕಳ್ಳ ಸಾಗಣೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ 22 ಕಡೆಗಳಲ್ಲಿ ಚೆಕ್-ಪೋಸ್ಟ್ ರಚಿಸಲಾಗಿದೆ. ಹತ್ತು ದಿನಗಳ ಕಾಲ ಈ ಚೆಕ್-ಪೋಸ್ಟ್ ಕಾರ್ಯಾಚರಿಸಲಿದ್ದು ಜನರ ಸಹಕಾರವೂ ಅಗತ್ಯವಾಗಿ ಬೇಕಾಗಿದೆ ಎಂದರು.

ಶಾಂತಿ ಸಭೆಯಲ್ಲಿ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಗಂಗೊಳ್ಳಿಯ ಸದಾನಂದ ಶೆಣೈ, ಕುಂದಾಪುರದ ಹುಸೇನ್ ಹೈಕಾಡಿ, ತಾಲ್ಲೂಕು ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಕಂಡ್ಲೂರು ಚರ್ಚ್ ಸಂಬಂದಪಟ್ಟವರು ಮಾತನಾಡಿದರು. ಸಭೆಯಲ್ಲಿ ಜಿಲ್ಲಾಪಂಚಾಯತ್ ಸದಸ್ಯರು, ವಿವಿಧ ಧರ್ಮಗಳ ಮುಖಂಡರು, ರಿಕ್ಷಾ, ಟ್ಯಾಕ್ಸಿ ಅಸೋಸಿಯೇಶನ್ ಸಂಬಂದಪಟ್ಟವರು, ವಿವಿಧ ದೇವಸ್ಥಾನಗಳ ಮುಖ್ಯಸ್ಥರು, ಕುಂದಾಪುರ ಪೊಲೀಸ್ ಉಪವಿಭಾಗದ ಎಲ್ಲಾ ಠಾಣೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗವೀರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments are closed.