ಅಂತರಾಷ್ಟ್ರೀಯ

ಅನಿರೀಕ್ಷಿತವಾಗಿ ಗರ್ಭಧರಿಸುವವರು ಇನ್ನು ಮುಂದೆ ಹೆದರಬೇಕಿಲ್ಲ…! ಈ ವರದಿ ಓದಿ..

Pinterest LinkedIn Tumblr

one-couple

ವಾಷಿಂಗ್ಟನ್: ದಂಪತಿಗಳು ಕೂಡಿಕೊಳ್ಳುವಾಗ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ತಮ್ಮ ಕೆಲವು ಆಸೆ, ಗುರಿಗಳು ಈಡೇರುವವರೆಗೂ ತಮಗೆ ಮಕ್ಕಳು ಬೇಡವೆಂದು. ಆದರೆ ಒತ್ತಡದ ಜೀವನದಲ್ಲಿ ಕೂಡಿಕೊಳ್ಳುವ ಸಮಯದಲ್ಲಿ ಹಲವರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದನ್ನು ಮರೆತುಬಿಡುತ್ತಾರೆ. ಮಹಿಳೆಯರಿಗೆ ಇಷ್ಟವಿಲ್ಲದಿದ್ದರೂ ಗರ್ಭವತಿಯಾಗುತ್ತಾರೆ.ಈ ರೀತಿ ಅನಿರೀಕ್ಷಿತ ಹಾಗೂ ಯೋಜಿತವಲ್ಲದೆ ಗರ್ಭಧರಿಸುವವರಿಗೆ ಸಂತಸದ ಸುದ್ದಿ ಬಂದಿದೆ.

ಅನಿರೀಕ್ಷಿತ ಗರ್ಭಧರಿಸುವುದನ್ನು ತಡೆಯಲು ನೂತನ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ನೂತನವಾಗಿ ಅಭಿವೃದ್ಧಿಪಡಿಸಿರುವ ಆ್ಯಪ್’ನ ಹೆಸರು ಡಾಟ್(DOT- Dynamic Optimal Timing) ಎಂದು. ಇದರ ಅರ್ಥ ಕ್ರಿಯಾಶೀಲ ಅನುಕೂಲಕರ ಕಾಲಮಾನ ಎಂದು. ಸೂಕ್ತ ಸಮಯದಲ್ಲಿ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿತ್ಯವು ಎಚ್ಚರಿಸುತ್ತದೆ. ಈ ಆ್ಯಪ್’ನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿದರೆ ಯೋಜಿತವಲ್ಲದೆ ಗರ್ಭಧರಿಸುವುದನ್ನು ಶೇ.96 ರಿಂದ 98ರವರೆಗೂ ತಡೆಯಬಹುದು ಎಂದು ಅಧ್ಯಯನಗಳ ವರದಿ ಬಹಿರಂಗಪಡಿಸಿದೆ.

ಅಮೆರಿಕಾದ ಜಾರ್ಜ್’ಟೌನ್ ವಿಶ್ವವಿದ್ಯಾಲಯದ ಪುನರ್’ಉತ್ಪಾದಕ ಆರೋಗ್ಯದ ವೈದ್ಯಕೀಯ ಕೇಂದ್ರಗಳ ಸಂಸ್ಥೆ ‘ಡಾಟ್’ ಆ್ಯಪ್’ಅನ್ನು ಅಭಿವೃದ್ಧಿಪಡಿಸಿದ್ದು, ಈ ಆ್ಯಪ್ ಪ್ರಸ್ತುತ ಅಮೆರಿಕಾದಲ್ಲಿ ಲಭ್ಯವಿದ್ದು, ಕೆಲವು ವರ್ಷಗಳಲ್ಲಿ ಪ್ರಪಂಚದಾದ್ಯಂತ ದೊರಕಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಲ್ಲಿ ಅಮೆರಿಕಾದ ಜಾರ್ಜ್’ಟೌನ್ ವಿಶ್ವವಿದ್ಯಾಲಯದ ಪುನರ್’ಉತ್ಪಾದಕ ಆರೋಗ್ಯದ ವೈದ್ಯಕೀಯ ಕೇಂದ್ರಗಳ ಸಂಸ್ಥೆ ಅಮೆರಿಕಾದ 1,200 ಮಹಿಳೆಯರ ಮೇಲೆ ಪ್ರಯೋಗ ನಡೆಸಿದ್ದು, 1 ಸಾವಿರಕ್ಕೂ ಹೆಚ್ಚು ಮಹಿಳೆಯರು ಡಾಟ್’ನ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಅನೀರಿಕ್ಷಿತ ಗರ್ಭಧರಿಸುವುದನ್ನು ತಡೆದಿದ್ದಾರೆ ಎಂದು ವರದಿ ನೀಡಲಾಗಿದೆ.

Comments are closed.