ಕರಾವಳಿ

ಶೇಖ್ ಜಾಯೆದ್ ಗೌರವಾರ್ಥವಾಗಿ ಅಬೂದಾಬಿಯಲ್ಲಿ ಮೊದಲ ವೈದ್ಯಕೀಯ ವಿಶ್ವವಿದ್ಯಾಲಯ ನಿರ್ಮಾಣ: ಡಾ.ಬಿ.ಆರ್.ಶೆಟ್ಟಿ

Pinterest LinkedIn Tumblr

B.R

ಅಬುಧಾಬಿ: ಯುಎಇ ಪಿತಾಮಹ ಶೇಖ್ ಜಾಯೆದ್ ಗೌರವಾರ್ಥವಾಗಿ ರಾಜಧಾನಿ ಅಬುಧಾಬಿಯಲ್ಲಿ ಮೊದಲ ವೈದ್ಯಕೀಯ ವಿಶ್ವವಿದ್ಯಾಲಯ ನಿರ್ಮಿಸುದಾಗಿ ಖ್ಯಾತ ಉದ್ಯಮಿ, NMC ಸಂಸ್ಥಾಪಕ ಹಾಗೂ ಯುಎಇ ಎಕ್ಸ್ಚೇಂಜ್ ನ ಮುಖ್ಯ ಕಾರ್ಯನಿರ್ವಾಹಕರಾಗಿರುವ ಡಾ.ಬಿ.ಆರ್.ಶೆಟ್ಟಿ ಘೋಷಿಸಿದ್ದಾರೆ.

ನಾನು ಅವರ ಪುಣ್ಯತಿಥಿಯಂದು ಘೋಷಿಸುತ್ತಿರುದಾಗಿ ಹೇಳಿದ ಅವರು, ಬಹಳ ಕಷ್ಟದ ಸಮಯದಲ್ಲಿ ಯುಎಇ ಕೆಲಸ ಹರಸಿಕೊಂಡು ಬಂದೆ. ಇಲ್ಲಿ ಶೇಖ್ ಜಾಯೆದ್ ಅವರ ಆಶೀರ್ವಾದಿಂದಾಗಿ ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.  ನಾನು ಯುಎಇಗೆ ಬರುವಾಗ ಏನು ತಂದಿಲ್ಲ. ಬರಿಗೈಯಲ್ಲಿ ಬಂದೆ. ಎಲ್ಲವೂ ಇಲ್ಲಿಯೇ ಮಾಡಿದ್ದು ಎಂದರು.

ವೈದ್ಯಕೀಯ ವಿಶ್ವವಿದ್ಯಾಲಯದ ಯೋಜನೆಗೆ ಸುಮಾರು $ 2 ಬಿಲಿಯನ್ ಹೂಡಿಕೆ ಮಾಡಲಾಗುದು. ಶೇಖ್ ಜಾಯೆದ್ ಕನಸಿನಂತೆ ಉತ್ತಮ ಗುಣಮಟ್ಟದ ವೈದ್ಯಕೀಯ ಮತ್ತು ಶಿಕ್ಷಣ ಒದಗಿಸಲಾಗುದು ಎಂದು ಡಾ.ಬಿ.ಆರ್.ಶೆಟ್ಟಿ ಹೇಳಿದರು.

ಇದು ನನ್ನ ಆರು ವರ್ಷಗಳ ಕನಸಾಗಿದೆ. ಈ ವಿಶ್ವವಿದ್ಯಾಲಯದ ನಿರ್ಮಿಸುವ ಮೂಲಕ ನನ್ನ ಕನಸನ್ನು ಸಾಕಾರ ಗೊಳಿಸುತ್ತೇನೆ. ಶೇಖ್ ಜಾಯೆದ್ ಅವರು ನನಗೆ ತಂದೆ, ಗುರುವಿನ ಸ್ಥಾನದಲ್ಲಿದ್ದವರು. ಅವರ ನಿಧನದ ದಿನ ಇಡೀ ವಿಶ್ವವೇ ಕಂಬನಿ ಮಿಡಿದಿತ್ತು ಎಂದು ಬಿ.ಆರ್.ಶೆಟ್ಟಿ ಹಿಂದಿನ ನೆನಪನ್ನು ಮೆಲುಕು ಹಾಕಿದರು.

Comments are closed.