ಕರಾವಳಿ

ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಸಿಗದೇ ನೀವು ವೇಟಿಂಗ್ ಲಿಸ್ಟ್ ನಲ್ಲಿದ್ದರೆ ಇನ್ನು ಮುಂದೆ ಏರ್ ಇಂಡಿಯಾ ಟಿಕೆಟ್ ಸಿಗುತ್ತೆ!

Pinterest LinkedIn Tumblr

plane-train

ನವದೆಹಲಿ: ಭಾರತೀಯ ರೈಲ್ವೇಯ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಸಿಗದೇ ನೀವು ವೇಟಿಂಗ್ ಲಿಸ್ಟ್ ನಲ್ಲಿದ್ದರೆ ಇನ್ನು ಮುಂದೆ ನೀವು ಸ್ವಲ್ಪ ಹೆಚ್ಚುವರಿ ಹಣ ನೀಡಿದ್ರೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬಹುದು.

ಏರ್ ಇಂಡಿಯಾ ಮತ್ತು ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ (ಐಆರ್‍ಸಿಟಿಸಿ) ಮಧ್ಯೆ ಒಪ್ಪಂದ ನಡೆದಿದ್ದು, ಒಂದು ವಾರದ ಒಳಗಡೆ ಈ ಉದ್ದೇಶಿತ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ ಎಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೊಹನಿ ತಿಳಿಸಿದ್ದಾರೆ.

ಟಿಕೆಟ್ ಹೇಗೆ ಸಿಗುತ್ತೆ?
ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ರಾಜಾಧಾನಿಯ ದ್ವಿತೀಯ ಮತ್ತು ಮೂರನೇ ಎಸಿ ದರ್ಜೆಯ ಟೆಕೆಟ್ ತಗೆದುಕೊಂಡು ವೇಟಿಂಗ್ ಲಿಸ್ಟ್ ನಲ್ಲಿದ್ದರೆ, ಅವರು ಎಲ್ಲಿಗೆ ಹೋಗುತ್ತಾರೋ ದಾರಿಯ ಏರ್ ಇಂಡಿಯಾ ಟಿಕೆಟ್ ಐಆರ್‍ಸಿಟಿಸಿ ಮೂಲಕ ಸಿಗಲಿದೆ. ಆದರೆ ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ರಾಜಧಾನಿಯ ಟಿಕೆಟ್ ಬೆಲೆ ಜೊತೆಯಾಗಿ ಹೆಚ್ಚುವರಿಯಾಗಿ 2 ಸಾವಿರ ರೂ. ಹಣವನ್ನು ಪಾವತಿಸಬೇಕಾಗುತ್ತದೆ.

Comments are closed.