ಕರಾವಳಿ

ವಿದೇಶ ಪ್ರವಾಸಗಳಲ್ಲಿ ಮೋದಿ ಸಮಯದ ಸದುಪಯೋಗ ಮಾಡುವುದು ಹೇಗೆ ಗೊತ್ತಾ?

Pinterest LinkedIn Tumblr

modi

ನವದೆಹಲಿ: ವಿದೇಶ ಪ್ರವಾಸಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಮಯವನ್ನು ಹೇಗೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕೇಳಿದರೆ ನಿಜವಾಗಿಯೂ ಅಚ್ಚರಿಯಾಗಬಹುದು!

ಬಿಡುವಿಲ್ಲದ ಪ್ರಯಾಣ, ಪ್ರಮುಖರ ಜತೆಗಿನ ಭೇಟಿ ಇವೆಲ್ಲದರ ನಡುವೆ ಮೋದಿಯವರಿಗೆ ನಿದ್ದೆ ಮಾಡಲು ಸಮಯವೆಲ್ಲಿರುತ್ತದೆ? ಎಂದು ಕೇಳಿದರೆ, ಮೋದಿ ವಿಮಾನದಲ್ಲೇ ನಿದ್ದೆ ಮಾಡುತ್ತಾರೆ ಎಂಬ ಉತ್ತರ ಸಿಗುತ್ತದೆ.

ಹೌದು, ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ ಮೋದಿಯವರು ರಾತ್ರಿ ಹೊತ್ತು ಪ್ರಯಾಣ ನಡೆಸುತ್ತಿದ್ದು, ವಿಮಾನದಲ್ಲೇ ನಿದ್ದೆ ಮಾಡುತ್ತಾರಂತೆ.

ಇತ್ತೀಚೆಗೆ ಬೆಲ್ಜಿಯಂ, ಅಮೆರಿಕ ಮತ್ತು ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಂಡ ಮೋದಿ ಮೂರು ರಾತ್ರಿಗಳನ್ನು ವಿಮಾನದಲ್ಲೇ ಕಳೆದಿದ್ದಾರೆ. ಮಾರ್ಚ್ 30ರಿಂದ ಏಪ್ರಿಲ್ 2ನೇ ತಾರೀಖಿನವರೆಗೆ ವಿದೇಶ ಪ್ರವಾಸ ಕೈಗೊಂಡಿದ್ದ ಇವರು, ಮೊದಲನೇ ದಿನ ದೆಹಲಿಯಿಂದ ಬ್ರುಸೆಲ್ಸ್ ಗೆ ಹೋಗುವ ವೇಳೆ ರಾತ್ರಿ ವಿಮಾನದಲ್ಲೇ ನಿದ್ದೆ ಮಾಡಿದ್ದ ಮೋದಿ, ಇನ್ನೊಂದು ದಿನ ಬ್ರುಸೆಲ್ಸ್ ನಿಂದ ವಾಷಿಂಗ್ಟನ್ ಡಿಸಿ ಪ್ರಯಾಣದ ವೇಳೆ ಮತ್ತು ಮೂರನೇ ದಿನ ಅಮೆರಿಕದಿಂದ ರಿಯಾದ್‌ಗೆ ಪ್ರಯಾಣ ಮಾಡುವ ವೇಳೆ ವಿಮಾನದಲ್ಲೇ ನಿದ್ದೆ ಮಾಡುವ ಮೂಲಕ ಸಮಯದ ಸದುಪಯೋಗ ಮಾಡಿಕೊಂಡಿದ್ದಾರೆ.

ಈ ಪ್ರಯಾಣದ ವೇಳೆ ಪ್ರಧಾನಿಯವರು ಅಮೆರಿಕ ಮತ್ತು ರಿಯಾದ್‌ನಲ್ಲಿ ಮಾತ್ರ ಎರಡೇ ಎರಡು ಬಾರಿ ಹೋಟೆಲ್ ನಲ್ಲಿ ತಂಗಿದ್ದಾರೆ.

Write A Comment