ಕರಾವಳಿ

ಬಿಜೆಪಿಯೊಳಗೆ ವಿಪಕ್ಷ ನಾಯಕನ ಸ್ಥಾನಕ್ಕೆ ಶುರುವಾಗಿದೆ ಲಾಬಿ ! ಲಿಂಗಾಯಿತ-ದಲಿತರಲ್ಲಿ ಯಾರಿಗೆ ಸಿಗಲಿದೆ ಪಟ್ಟ…?

Pinterest LinkedIn Tumblr

flying-bjp-flags

ಬೆಂಗಳೂರು: ನಿನ್ನೆಯಷ್ಟೇ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇದೀಗ ಅಧ್ಯಕ್ಷಗಾದಿಯ ಆಕಾಂಕ್ಷಿಗಳಿಂದ ವಿಧಾನಸಭೆ ವಿಪಕ್ಷ ನಾಯಕ ಸ್ಥಾನಕ್ಕಾಗಿ ಹೊಸ ಲಾಬಿ ಶುರುವಾಗಿದೆ.

ರಾಜ್ಯಾಧ್ಯಕ್ಷ ಸ್ಥಾನವನ್ನು ಈಗಾಗಲೇ ಲಿಂಗಾಯಿತ ಸಮುದಾಯಕ್ಕೆ ಕೊಟ್ಟಾಗಿದ್ದು, ವಿಧಾನಸಭೆ ವಿಪಕ್ಷ ಸ್ಥಾನದಲ್ಲಿರುವ ಜಗದೀಶ್ ಶೆಟ್ಟರ್ ಕೂಡ ಲಿಂಗಾಯಿತರಾಗಿದ್ದಾರೆ. ಅಲ್ಲದೆ ವಿಧಾನಪರಿಷತ್ ವಿಪಕ್ಷನಾಯಕರ ಸ್ಥಾನದಲ್ಲಿ ಹಿಂದುಳಿದ ವರ್ಗದ ಈಶ್ವರಪ್ಪ ಇದ್ದಾರೆ. ಹೀಗಾಗಿ ವಿಧಾನಸಭೆ ವಿಪಕ್ಷ ಸ್ಥಾನವನ್ನ ದಲಿತರಿಗೆ ಕೊಡುವುದರಿಂದ ದಲಿತರ ವೋಟ್ ಬ್ಯಾಂಕ್ ಮತ್ತಷ್ಟು ಗಟ್ಟಿಯಾಗಲಿದೆ ಅಥವಾ ಒಕ್ಕಲಿಗರಿಗೆ ಕೊಟ್ಟರೆ ಹಳೇ ಮೈಸೂರಿನಲ್ಲಿ ಅನುಕೂಲವಾಗಲಿದೆ ಎನ್ನುವ ಕೂಗು ಕೇಳಿ ಬಂದಿದೆ.

ಈ ನಡುವೆ ಯಡಿಯೂರಪ್ಪನವರು ಅಂಬೇಡ್ಕರ್ ಜಯಂತಿಯ ದಿನವಾದ ಏಪ್ರಿಲ್ 14 ರಂದು ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Write A Comment