ಕರಾವಳಿ

ಯಕ್ಷ ಕಲಾ ವೃಂದ ಮೇಲೆಕ್ಕಾರು ಆಶ್ರಯದಲ್ಲಿ ಎಪ್ರಿಲ್ 14 ರಂದು ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

Pinterest LinkedIn Tumblr

;

ಯಕ್ಷ ಕಲಾ ವೃಂದ ಮೇಲೆಕ್ಕಾರು ಇದರ ಪ್ರಥಮ ವರ್ಷದ ಕಲಾಸೇವೆಯ ಅಂಗವಾಗಿ ಮೇಲೆಕ್ಕಾರು ಪದವು ಮೈದಾನದಲ್ಲಿ ಎಪ್ರಿಲ್ 14ರ ಗುರುವಾರದಂದು ಸಂಜೆ 6.30ಕ್ಕೆ ತುಳುಸಿರಿ ಐಸಿರ ದುಬೈ ಪ್ರಾಯೋಜಕತ್ವದಲ್ಲಿ ಯಕ್ಷ ಕಲಾ ವೃಂದ ಮೇಲೆಕ್ಕಾರು ಯಕ್ಷಗಾನ ಮಂಡಳಿಯ ಯುವ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಯಕ್ಷಗಾನ ಪ್ರದರ್ಶನಕ್ಕೂ ಮುನ್ನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಯಕ್ಷ ಕಲಾ ವೃಂದದ ಅಧ್ಯಕ್ಷರಾದ ಪದ್ಮರಾಜ್ ಎಕ್ಕಾರು ತಿಳಿಸಿದ್ದಾರೆ.

Write A Comment