ಕುಂದಾಪುರ: ಉಪ್ಪುಂದದ ಕಟ್ಕೇರಿಯಲ್ಲಿ ಗುರುವಾರ ಕಾರ್ಯನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ತಗುಲಿ ಬೈಂದೂರಿನ ಮೆಸ್ಕಾಂ ನ ಲೈನ್ ಮ್ಯಾನ್ ರವಿರಾಜ್ ದವಾಕಾನೆ (32 ) ಮೃತರಾಗಿರುತ್ತಾರೆ.
ಇವರು ಮೂಲತ: ಬಿಜಾಪುರದವರು ಎಂಬುದು ತಿಳಿದು ಬಂದಿದೆ.
ಘಟನೆಯ ವಿವರ : ಗುರುವಾರ ಬೆಳಿಗ್ಗೆ 7.30ರ ಸುಮಾರಿಗೆ ಕಟ್ಕೇರಿಯಲ್ಲಿ ವಿದ್ಯುತ್ ಇಲ್ಲ ಎಂಬ ದೂರವಾಣಿ ಕರೆ ರವಿರಾಜ್ ಅವರಿಗೆ ಬಂದಿದ್ದು ಅವರು ಮೆಸ್ಕಾಂ ಕಛೇರಿಗೆ ತಿಳಿಸದೇ ತಕ್ಷಣ ವಿದ್ಯುತ್ ಕಂಬವನ್ನು ಹತ್ತಿ ನೋಡುವ ವೇಳೆ ಆಫ್ ಆಗಿದ್ದ ವಿದ್ಯುತ್ ಸ್ಚೀಚ್ ನ್ನು ಕಛೇರಿಯಲ್ಲಿ ಆನ್ ಮಾಡಿದಾಗ ರವಿರಾಜ್ ಕಂಬದ ಮೇಲೆ ಇದ್ದರು. ಆಗ ರವಿರಾಜ್ ಗೆ ವಿದ್ಯುತ್ ತಗಲಿ ಕೂಡಲೇ ಕಂಬದಿಂದ ಕೆಳಗೆ ಬಿದ್ದರು. ತಕ್ಷಣ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ರವಿರಾಜ್ ಸಾವನ್ನಪ್ಪಿದ್ದಾರೆ.