ಕರಾವಳಿ

ಶ್ರೀಮತಿ ಶಮಿನ ಆಳ್ವರ ಮಡಿಲಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

Pinterest LinkedIn Tumblr

Shameen alva-Aug 14_2015-006

ಕರಾವಳಿ ಕರ್ನಾಟಕದ ಕಡಲ ತೀರದ ತುಳುನಾಡಿನ ಮುಲ್ಕಿಯ ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಜನ ಮಾನಸದಲ್ಲಿ ಗೌರವದ ಸ್ಥಾನ ಪಡೆದಿರುವ ಶ್ರೀಮತಿ ಶಮಿನ ಆಳ್ವ 2014-15 ನೇ ಸಾಲಿನ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಜವಬ್ಧಾರಿಯುತ ಸ್ಥಾನವನ್ನು ವಹಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆದು ತಮ್ಮ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆಯನ್ನು ಪಡೆದಿರುವ ಪ್ರಶಸಿ ಪುರಸ್ಕೃತರ ಸಾಧನೆಯ ಹಾದಿಯ ಒಂದು ಸಿಂಹಾಲೋಕನ….. ವಿಶೇಷ ಲೇಖನ….

Shameen alva-Aug 14_2015-005

Shanina Alva

ಮುಲ್ಕಿ ಶಮಿನ ಆಳ್ವ

ಕರ್ನಾಟಕ ಕಡಲ ತೀರದ ಮುಲ್ಕಿ ವಿಶ್ವ ಭೂಪಟದಲ್ಲಿ ಗುರುತಿಸಲ್ಪಟ್ಟ ಐತಿಹಾಸಿಕ , ಸಾಂಸ್ಕೃತಿಕ, ಸಾಹಿತ್ಯ, ಶೈಕ್ಷಣಿಕ ಹಾಗೂ ಬ್ಯಾಂಕಿಂಗ್ ಉಧ್ಯಮದ ಮೂಲಕ ಇಂದಿಗೂ ಸರ್ವರ ಮನದಲ್ಲಿ ಉಳಿದಿರುವ ಮುಲ್ಕಿ ಸುಂದರಾಮ ಶೆಟ್ಟಿಯವರು, ಕಾರ್ನಾಡು ಸದಾಶಿವ ರಾಯರು, ಸಂಜೀವನಾಥ ಐಕಳರು, ಸೋಮಪ್ಪ ಸುವರ್ಣ ಹಾಗೂ ಇನ್ನಿತರ ಹಲವಾರು ಗಣ್ಯರಿಗೆ ಜನ್ಮನೀಡಿದ ನಾಡಾಗಿದೆ. ಐದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಮುಲ್ಕಿಯ ಕೀರಿಟಕ್ಕೆ ಶಮಿನ ಆಳ್ವ ಮತ್ತೊಂದು ಆರ್ಯಭಟ ಪ್ರಶಸ್ತಿಯ ಗರಿಯನ್ನು ಸಿಕ್ಕಿಸಿದ್ದಾರೆ.

Shameen alva-Aug 14_2015-009

ಮುಲ್ಕಿಯ ಪ್ರತಿಷ್ಠಿತ ಬಂಟ ಮನೆತನದ ಎಳತ್ತೂರು ಗುತ್ತು ದಿ| ಸಂಕು ಶೆಟ್ಟಿ ಮತ್ತು ಬಾಳದ ಗುತ್ತು ದಿ| ಅಂಬಾ ಶೆಟ್ಟಿ ದಂಪತಿಗಳ ಏಳು ಮಂದಿ ಮಕ್ಕಳಲ್ಲಿ ಶಮಿನ ಆಳ್ವ ಕೊನೆಯ ಮಗಳು. ಸುಸಂಸ್ಕೃತ ಮನೆತನ, ಸುಂದರ ಪರಿಸರ, ತಮ್ಮ ಎಳೆಯ ವಯಸ್ಸಿನಲ್ಲೇ ಅಪ್ರತಿಮ ಪ್ರತಿಭಾಶಾಲಿಯಾಗಿ ಬೆಳೆದವರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಮುಲ್ಕಿ ಮೆಡಲಿನ್ ಗರ್ಲ್ಸ್ ಹೈಸ್ಕೂಲಿನಲ್ಲಿ ನಂತರ ಪದವಿಯನ್ನು ಮುಲ್ಕಿ ವಿಜಯಾ ಕಾಲೇಜಿನಲ್ಲಿ ಪಡೆದರು. ತಮ್ಮ ಶಾಲಾ ಅವಧಿಯಲ್ಲೆ ಉತ್ತಮ ಕ್ರೀಡಾಪಟುವಾಗಿ, ಜೊತೆಯಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡವರು.

Shameen alva-Aug 14_2015-010

ಸಾಮಾಜಿಕ ರಂಗದಲ್ಲಿ ಶಮಿನ ಆಳ್ವ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಾವು ಕಲಿತು ಶಿಕ್ಷಣ ಪಡೆದ ಸಂಸ್ಥೆಗಳ ನಂಟನ್ನು ಕಳಚಿಕೊಳ್ಳದೆ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಗೌರವದ ಸ್ಥಾನವನ್ನು ಸ್ವೀಕರಿಸಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ವಿಜಯಾ ಕಾಲೇಜ್ ಮುಲ್ಕಿ, ಶಮಿನ ಆಳ್ವರಿಗೆ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಆಯ್ಕೆ ಮಾಡಿ ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ವಿಜಯ ಕಾಲೇಜಿನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ, ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತು, ಸುವರ್ಣ ಮೊಹೋತ್ಸವದ ಯಶಸ್ಸಿನಲ್ಲಿ ಪಾಲ್ಗೊಳ್ಳುವಂತಾಯಿತು.

11

ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ನ ಸ್ತಾಪಕ ಕಾರ್ಯದರ್ಶಿಯಾಗಿ ಕ್ಲಬ್ ನ್ನು ಸಮರ್ಥವಾಗಿ ನಡೆಸಿದ ಕೀರ್ತಿ ಇವರದ್ದು. ವನಿತ ಸಮಾಜದ ಸಕ್ರೀಯಾ ಸದಸ್ಯೆಯಾಗಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Shameen alva-Aug 14_2015-004

ಮುಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ ಸ್ಥಾಪಕ ಅಧ್ಯಕ್ಷೆಯಾಗಿ, ಮಹಿಳೆಯರನ್ನು ಒಗ್ಗೂಡಿಸಿ ಪ್ರತಿಯೊಂದು ವಿಭಾಗದಲ್ಲಿ ಅವಕಾಶವನ್ನು ಕಲ್ಪಿಸಿ ಪ್ರತಿಯೊಬ್ಬ ಮಹಿಳೆಯರು ಮುಖ್ಯವಾಹಿನಿಗೆ ಬರುವಂತೆ ಮಾಡಿದ ಕೀರ್ತಿ ಶಮಿನ ಆಳ್ವರದ್ದು. ಕ್ರೀಡಾಕೂಟ, ವಿಹಾರಕೂಟ, ಸ್ನೇಹಮಿಲನ, ಇನ್ನಿತರ ಸಾಂಸ್ಕೃತಿಕಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರಕಶಕ್ತಿಯಾಗಿ ಮುನ್ನಡೆಸಿದ್ದಾರೆ.

Shameen alva-Aug 14_2015-003

ಪ್ರಸ್ತುತ ಮುಲ್ಕಿ ಮೆಡಲಿನ್ ಹೈಸ್ಕೂಲಿನ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿ, ಮುಲ್ಕಿ ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Shameen alva-Aug 14_2015-002

Shameen alva-Aug 14_2015-008

ಪ್ರಶಸ್ತಿ, ಗೌರವ, ಪುರಸ್ಕಾರಗಳು….

ಶಮಿನ ಆಳ್ವರ ಪ್ರತಿಭೆ, ಸಮಾಜಮುಖಿ ಸೇವಾಕಾರ್ಯಗಳನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಅಭಿನಂದಿಸಿ, ಸನ್ಮಾನಿಸಿ ಗೌರವಿಸಿದೆ. ಅವುಗಳಲ್ಲಿ ಪ್ರಮುಖವಾದುದು, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಹಳೆ ವಿದ್ಯಾರ್ಥಿಗಳು ಸ್ಥಾಪಿಸಿದ ಅಬುಧಾಬಿ, ದುಬಾಯಿ ಹಳೆ ವಿದ್ಯಾರ್ಥಿ ಸಂಘಗಳಲ್ಲಿ ಸನ್ಮಾನ, ಗೌರವ,  ಕುವೈಟ್ ಹಳೆ ವಿದ್ಯಾರ್ಥಿಗಳ ಸಂಘ, ಬಹರೈನ್ ಹಳೆ ವಿದ್ಯಾರ್ಥಿಗಳ ಸಂಘದಲ್ಲಿ ಸನ್ಮಾನ, ಗೌರವ. ಮುಂಬೈ ಬಂಟರ ಸಂಘದಲ್ಲಿ, ಮುಂಬೈ ಕರ್ನಾಟಕ ಸಂಘದಲ್ಲಿ ಸನ್ಮಾನ ಗೌರವ. ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಸನ್ಮಾನಿಸಿ ಗೌರವಿಸಲ್ಪಟ್ಟಿದ್ದಾರೆ.

Shameen alva-Aug 14_2015-012

ಶಮಿನ ಆಳ್ವರ ಚಿಕ್ಕ ಚೊಕ್ಕ ಸುಖೀ ಸಂಸಾರ…

Shameen alva-Aug 14_2015-007

1212

Shameen alva-Aug 14_2015-001

ಶಮಿನ ಆಳ್ವರು ತಮ್ಮ ಬಾಳಾಸಂಗಾತಿ ಮುಂಬೈಯಲ್ಲಿ ಉಧ್ಯಮಿಯಾಗಿರುವ ಶ್ರೀ ಗಣೇಶ್ ಆಳ್ವರನ್ನು ವಿವಾಹವಾಗಿ ಆರಂಭದಲ್ಲಿ ಮುಂಬೈನಲ್ಲಿ ನೆಲೆಸಿದ್ದರೂ ನಂತರದ ವರ್ಷದಲ್ಲಿ ತಮ್ಮ ಹುಟ್ಟೂರಿಗೆ ಬಂದು ನೆಲೆಸಿದರು. ತಮ್ಮ ಸಮಾಜಸೇವೆಯನ್ನು ಮುಂದುವರಿಸಲು ಇನ್ನಷ್ಟು ಸಹಕಾರಿಯಾಯಿತು. ಅಪೂರ್ವ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು. ಪುತ್ರಿ ಕು| ಸಮೃದ್ಧಿ ಆಳ್ವ, ಮಂಗಳೂರಿನ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೊನೆಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗದಲ್ಲಿದ್ದಾಳೆ. ಪುತ್ರ ಕು| ಸಂಭ್ರಮ್ ಆಳ್ವ, ಆಳ್ವಾಸ್ ನಲ್ಲಿ ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಅಪಾರ ಬಂಧುಬಳಗ, ಸ್ನೇಹಿತರು, ಹಿತೈಷಿಗಳ ಅಭಿಮಾನ, ಗೌರವ, ಪ್ರೀತಿ ವಿಶ್ವಾಸವನ್ನು ಪಡೆದಿರುವ ಶಮಿನ ಆಳ್ವರು ಒರ್ವ ಪರಿಪೂರ್ಣ ಗೃಹಿಣಿಯಾಗಿ, ಸಾಮಾಜಿಕವಾಗಿ ಹಲವು ಸಂಘ ಸಂಸ್ಥೆಗಳ ಮೂಲಕ ಮಾಡಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನ ಇವರನ್ನು ಆಯ್ಕೆಮಾಡಿ 2014-15 ಸಾಲಿನ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಿದೆ. ಈ ವಿಶೇಷ ಪುರಸ್ಕಾರ ತುಳು ನಾಡಿಗೆ ಸಂದ ಗೌರವವಾಗಿದೆ.

2015 ಅಗಸ್ಟ್ 9ನೇ ತಾರೀಕು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಸ್ಟಿಸ್ ಡಾ| ರಾಮಜೋಯಿಸ್ ಮಾಜಿ ರಾಜ್ಯಪಾಲರು, ನಾಡೊಜ ಮಹೇಶ್ ಜೋಶಿ, ರಾಷ್ಟ್ರೀಯ ದೂರದರ್ಶನ ದೆಹಲಿ, ಅಡಿಶನಲ್ ಡೈರೆಕ್ಟರ್ ಜೆನರಲ್, ಶ್ರೀ ಜ್ಯೋತಿಪ್ರಕಾಶ್ ಮಿರ್ಜಿ, ನಿವೃತ್ತ ಪೋಲೀಸ್ ಕಮೀಶನರ್ ಬೆಂಗಳೂರು, ಡಾ| ಹೆಚ್. ಎಲ್, ಎನ್. ರಾವ್ ಸ್ಥಾಪಕ ಅಧ್ಯಕ್ಷರು ಆರ್ಯಭಟ ಕಲ್ಚರಲ್ ಫೌಂಡೇಶನ್ ಇವರುಗಳ ಸಮ್ಮುಖದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 57 ಮಂದಿಗೆ ಪ್ರಶಸ್ತಿ ಪ್ರಧಾನಿಸಲಾಯಿತು.

ಪ್ರತಿಷ್ಠಿತ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಯನ್ನು ಸ್ವೀಕರಿಸಿರುವ ಶ್ರೀಮತಿ ಶಮಿನ ಆಳ್ವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರ ಸಮಾಜಸೇವೆ ನಿರಂತರವಾಗಿ ಮುನ್ನಡೆಯಲಿ ಎಂದು ಸಮಸ್ಥ ಕನ್ನಡಿಗರ ಪರವಾಗಿ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷರು- ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ

Write A Comment