ಮಂಗಳೂರು, ಆ.8: ಕರ್ನಾಟಕ ರಾಜ್ಯ ದೇವಾಡಿಗ ಸಂಘ ಹಾಗೂ ದುಬೈ ದೇವಾಡಿಗ ಸಂಘದ ಜಂಟಿ ಆಶ್ರದಲ್ಲಿ ಆಗಸ್ಟ್ 16ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಮಣ್ಣಗುಡ್ಡೆಯ ಸಮಾಜ ಭವನನದಲ್ಲಿ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜರಗಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ದೇವಾಡಿಗ ಸಂಘದ ಅಧ್ಯಕ್ಷ ವಾಮನ್ ಮರೋಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದುಬೈಯ ಉದ್ಯಮಿ, ದುಬೈ ದೇವಾಡಿಗ ಸಂಘದ ಅಧ್ಯಕ್ಷ ಹರೀಶ್ ಶೇರಿಗಾರ್, ನ್ಯುರೋ ಸರ್ಜನ್ ಡಾ.ಕೆ.ವಿ.ದೇವಾಡಿಗ, ಮಂಗಳೂರಿನ ಎಸ್‌ಡಿಎಂ ಕಾಲೇಜಿನ ನಿರ್ದೇಶಕ ಡಾ.ದೇವರಾಜ್, ಆರ್ಕಿಟೆಕ್-ಬಿಲ್ಡರ್ ಸನತ್ ಶೆಟ್ಟಿ, ದುಬೈ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ದೇವಾಡಿಗ, ದೇವಾಡಿಗ ಸಂಘದ ಕೋಶಾಧಿಕಾರಿ ರಮೇಶ್ ದೇವಾಡಿಗ, ದೇವಾಡಿಗ ಸಂಘದ ಸಂಘದ ಸಲಹೆಗಾರ ಆನಂದ ದೇವಾಡಿಗ ಭಾಗವಹಿಸಲಿದ್ದಾರೆ.