ಕರಾವಳಿ

ಭಾರೀ ಮಳೆಗೆ ಬಾಲಕಿ ನಾಪತ್ತೆ ಪ್ರಕರಣ: ಮುಂದುವರಿದ ಶೋಧ ಕಾರ್ಯ

Pinterest LinkedIn Tumblr

shodhaaa

ಬೆಂಗಳೂರು, ಅ.7: ಚರಂಡಿಗೆ ಬಿದ್ದು ನಾಪತ್ತೆಯಾಗಿರುವ ಬಾಲಕಿಯನ್ನು ಪತ್ತೆ ಹಚ್ಚಲು ಬಿಬಿಎಂಪಿ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಯರ ಶೋಧ ಕಾರ್ಯ ಮುಂದುವರಿದಿದೆ. ಆದರೆ, ಆಕೆ ಇನ್ನೂ ಜೀವಂತವಾಗಿ ದ್ದಾಳೆಯೋ ಇಲ್ಲವೋ ಎಂಬುದು ಈವರೆಗೆ ಗೊತ್ತಾಗಿಲ್ಲ. ಸೋಮವಾರ ರಾತ್ರಿ ಬನ್ನೇರುಘಟ್ಟ ರಸ್ತೆಯ ಬಿಳೇಕ ಹಳ್ಳಿ ಪೈ ಹೊಟೇಲ್ ಎದುರು ಒಂಭತ್ತು ವರ್ಷದ ಗೀತಾಲಕ್ಷ್ಮಿ ಎಂಬ ಬಾಲಕಿ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ನಾಪತ್ತೆಯಾಗಿದ್ದಳು.

ಕೂಡಲೇ ಬಿಬಿಎಂಪಿ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಕೆಗಾಗಿ ತೀವ್ರ ಶೋಧ ನಡೆಸಿದರೂ ಪತ್ತೆಯಾಗಿ ರಲಿಲ್ಲ. ಇಂದು ಬೆಳಗಿನಿಂದ ಮತ್ತೆ ಶೋಧ ಕಾರ್ಯ ಚುರುಕುಗೊಂಡಿದ್ದು, ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇವರೊಂದಿಗೆ ಬಾಲಕಿಯ ತಂದೆ, ತಾಯಿ, ಅಜ್ಜಿ, ತಾತಾ ತಮಿಳುನಾಡಿನಿಂದ ಆಗಮಿಸಿದ್ದು, ಅವರ ರೋದನ ಮನ ಕಲಕುವಂತಿದೆ.

ಜೆಸಿಬಿ, ಕ್ರೇನ್‌ಗಳ ಮೂಲಕ ರಾಜ ಕಾಲುವೆಯ ಮೇಲು ಹೊದಿಕೆಗಳನ್ನು ತೆರವುಗೊಳಿಸಿ, ಬಾಲಕಿಗಾಗಿ ಶೋಧ ಕಾರ್ಯ ಕೈಗೊಂಡಿರುವ ಬಿಬಿಎಂಪಿ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ, ಈವರೆಗೆ ಸುಮಾರು ಒಂದು ಕಿಮೀ ದೂರದ ತಪಾಸಣೆಯನ್ನು ಪೂರ್ಣಗೊಳಿಸಿದ್ದಾರೆ. ಆದರೂ ಬಾಲಕಿ ಈವರೆಗೆ ಪತ್ತೆಯಾಗಿಲ್ಲ. ಸ್ಥಳೀಯರು ತಂಡೋಪತಂಡವಾಗಿ ಸ್ಥಳ್ಕಕೆ ಆಗಮಿಸಿ ತಪಾಸಣಾ ಕಾರ್ಯದಲ್ಲಿ ಪಾಲ್ಗೊಂಡಿ ದ್ದಾರೆ. ಘಟನೆಯ ಸ್ಥಳದಲ್ಲಿ ಜನ ಜಾತ್ರೆಯೇ ನೆರೆದಿದ್ದು, ಈವರೆಗೆ ಬಾಲಕಿ ಪತ್ತೆಯಾಗದಿರುವುದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ದಸರಾ ಹಬ್ಬಕ್ಕೆಂದು ನಾಲ್ಕು ದಿನದ ಹಿಂದಷ್ಟೇ ತಮಿಳುನಾಡಿನಿಂದ ತನ್ನ ಅತ್ತೆಯ ಮನೆಗೆ ಬಂದಿದ್ದ ಗೀತಾಲಕ್ಷ್ಮಿ, ಸೋಮವಾರ ರಾತ್ರಿ ಏಳು ಗಂಟೆಯ ಸಮಯದಲ್ಲಿ ಅತ್ತೆಯೊಂದಿಗೆ ಮೈಕೋ ಲೇಔಟ್‌ನ ಪರಿಚಿತರ ಮನೆಗೆ ಹೋಗಿ ವಾಪಸ್ಸಾಗುತ್ತಿದಾಗ, ಬನ್ನೇರುಘಟ್ಟ ರಸ್ತೆಯ ಪೈ ಹೊಟೇಲ್ ಮುಂಭಾಗದ ಕಾಲುವೆಗೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಳು. ಆ ಸಂದರ್ಭದಲ್ಲಿ ಮಳೆ ಜೋರಾಗಿ ಬರುತ್ತಿದ್ದುದರಿಂದ ಕ್ಷಣಾರ್ಧದಲ್ಲೇ ಕೊಚ್ಚಿ ಹೋಗಿದ್ದಳು.

Write A Comment