ಕರಾವಳಿ

ನ.1ರಂದು ಮಂಗಳೂರು ಸೀಮೆ ಎಣ್ಣೆ ಮುಕ್ತ ನಗರವಾಗಿ ಘೋಷಣೆ: ಸಚಿವ ರೈ

Pinterest LinkedIn Tumblr

Ramanatha_Rai_Press_1

ಮಂಗಳೂರು, ಸೆ.16: ಆರೋಗ್ಯಕ್ಕೆ ಹಾನಿಕರ ವಾದ ಸೀಮೆ ಎಣ್ಣೆಯನ್ನು ಅಡುಗೆ ಇಂಧನವಾಗಿ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಅಡುಗೆ ಅನಿಲವನ್ನು ಬಳಸುವ ಮೂಲಕ ಮಂಗಳೂರು ಮತ್ತು ಉಳ್ಳಾಲವನ್ನು ರಾಜ್ಯದ ಪ್ರಥಮ ಸೀಮೆಎಣ್ಣೆ ಮುಕ್ತ ನಗರವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ ಆರಂಭಿಕ ಹಂತದಲ್ಲಿ ಸೀಮೆಎಣ್ಣೆ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು. ಪ್ರಸ್ತುತ ಸೀಮೆಎಣ್ಣೆಯನ್ನು ಅಡುಗೆಗೆ ಬಳಸುವ ಪಡಿತರ ಚೀಟಿದಾರರಿಗೆ ಅಡುಗೆ ಅನಿಲ ಸಂಪರ್ಕವನ್ನು ನೀಡಲಾಗುವುದು. ಆಹಾರ ಇಲಾಖೆ, ಸ್ಥಳೀ ಯಾಡಳಿತ ಸಂಸ್ಥೆಗಳು, ತೈಲ ಕಂಪೆನಿಗಳು ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳನ್ನು ಒಳ ಗೊಂಡ ಸಮನ್ವಯ ಸಮಿತಿ ರಚಿಸಿ ಕ್ರಮ ಕೈಗೊ ಳ್ಳಲಾಗಿದೆ ಎಂದವರು ನುಡಿದರು.

ಮನಪಾ ಮತ್ತು ಉಳ್ಳಾಲ ಪುರಸಭೆ ವ್ಯಾಪ್ತಿಯೊಳಗೆ ಅಂದಾಜು 5,75,000 ಜನಸಂಖ್ಯೆ ಇದ್ದು, 73,465 ಪಡಿತರ ಚೀಟಿ ಗಳ ಪೈಕಿ 19,781 ಬಿಪಿಎಲ್ ಪಡಿತರ ಚೀಟಿದಾರರಾಗಿದ್ದಾರೆ. ಈ ಪೈಕಿ ಈಗಾಗಲೇ 12,000 ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿದ್ದು, ಇನ್ನುಳಿದ 7,500 ಬಿಪಿಎಲ್ ಪಡಿತರ ಚೀಟಿದಾರರಿಗೆ ಅಡುಗೆ ಅನಿಲ ಸಂಪರ್ಕ ನೀಡಿದ್ದಲ್ಲಿ ಮಂಗಳೂರು ಸೀಮೆ ಎಣ್ಣೆ ಮುಕ್ತ ನಗರವಾಗಲಿದೆ. ಪರಿಶಿಷ್ಟ ಜಾತಿ-ಪಂಗಡಗಳ ಅಭ್ಯುದಯಕ್ಕಾಗಿರುವ ಶೇ.22.75, ಹಿಂದುಳಿದ ವರ್ಗಗಳ ಅಲ್ಪಾದಾ ಯವುಳ್ಳ ಕುಟುಂಬಗಳಿಗೆ ಶೇ.7.25 ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿನ ಶೇ.3ರ ಅನುದಾನದಡಿ ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳಿಂದ ಸೌಲಭ್ಯ ದೊರೆಯದ ಕುಟುಂಬಗಳಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯದ ಮೂಲಕ ಅಡುಗೆ ಅನಿಲ ಸಂಪರ್ಕ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ರೈ ತಿಳಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಒಂದು ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆಯಲು ಗರಿಷ್ಠ 4,000 ರೂ. (1,450 ರೂ. ಸಿಲಿಂಡರ್ ಠೇವಣಿ, 150 ರೂ. ರೆಗ್ಯುಲೇಟರ್, 1,600 ರೂ. ಎರಡು ಬರ್ನರ್‌ಗಳ ಸ್ಟವ್, 190 ರೂ. ಟ್ಯೂಬ್, 420 ರೂ. ರಿಫಿಲ್ ವೆಚ್ಚ, 145 ರೂ. ಸುರಕ್ಷತಾ ಶುಲ್ಕ)ಗಳನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ತಿಂಗಳೊಂದರ 200 ರೂ. ಮಾಸಿಕ ಕಂತಿನೊಂದಿಗೆ ಸಾಲ ಮರುಪಾವತಿಯ ಅವಕಾಶವನ್ನು ಕಲ್ಪಿಸಲಾಗುವುದು. ಬ್ಯಾಂಕ್‌ಗಳು ಪಡಿತರ ಚೀಟಿ ಮತ್ತು ಬ್ಯಾಂಕ್ ಖಾತೆ ಆಧಾರ ದಲ್ಲಿ ಸಾಲ ಸೌಲಭ್ಯ ಒದಗಿಸಲು ಸಮ್ಮತಿಸಿವೆ. ಸ್ಥಳೀಯ ಸಂಸ್ಥೆಗಳಿಂದ ಅಡುಗೆ ಅನಿಲ ಸಂಪರ್ಕ ಪಡೆಯಲು ಬಿಪಿಎಲ್ ಪಡಿತರ ಚೀಟಿ ಮತ್ತು ಕುಟುಂಬದ ಸದಸ್ಯರು ವಿದ್ಯಾಭ್ಯಾಸ ಅಥವಾ ಇತರ ಯಾವುದೇ ಕಾರಣಕ್ಕಾಗಿ ಪಡೆದಿರುವ ಆದಾಯ ದೃಢಪತ್ರ ಹಾಗೂ ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕಾಗುತ್ತದೆ.

ಅಡುಗೆ ಅನಿಲ ಸಂಪರ್ಕ ಹೊಂದದೆ ಇರುವ ಪಡಿತರ ಚೀಟಿದಾರರ ಮಾಹಿತಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈಗಾಗಲೇ ನೀಡಲಾಗಿದೆ. ಇದಕ್ಕಾಗಿ ಅಕ್ಟೋಬರ್ 8 ಮತ್ತು 9ರಂದು ಮಂಗಳೂರು ಮನಪಾ ವ್ಯಾಪ್ತಿಯ ಲಾಲ್‌ಬಾಗ್, ಸುರತ್ಕಲ್, ಕಾವೂರು ಮತ್ತು ಉಳ್ಳಾಲ ಪುರಸಭಾ ವ್ಯಾಪ್ತಿಯಲ್ಲಿ ಪುರಸಭಾ ಕಚೇರಿಯಲ್ಲಿ ವಿಶೇಷ ಆಂದೋಲನ ರೀತಿಯಲ್ಲಿ ಶಿಬಿರ ನಡೆಸಲಾಗುವುದು. ಈ ಶಿಬಿರಗಳಲ್ಲಿ ಒಂದೂ ಅನಿಲ ಸಂಪರ್ಕ ಪಡೆಯದೇ ಇರುವವರು ಸಂಪರ್ಕ ಪಡೆಯಬಹುದಾಗಿದೆ. ದ್ವಿತೀಯ ಹಂತದಲ್ಲಿ ಅಕ್ಟೋಬರ್ 18 ಮತ್ತು 19ರಂದು ಶಿಬಿರ ನಡೆಯಲಿದೆ. ದೀಪಾವಳಿಯೊಳಗೆ ಎಲ್ಲಾ ಗ್ರಾಹಕರಿಗೆ ಸಂಪರ್ಕ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾ ೆಯ ಉಪ ನಿರ್ದೇಶಕರನ್ನು ದೂ.ಸಂ. 1077(ಉಚಿತ) ಅಥವಾ ಕಚೇರಿ ಸಂಖ್ಯೆ 2220571ನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದರು.

ಐದು ಕೆಜಿ ಅಡುಗೆ ಅನಿಲ ಸಿಲಿಂಡರ್ ಮಂಗಳೂರಿಗೆ ವಿಸ್ತರಿಸಲು ಚಿಂತನೆ
ಅಡುಗೆ ಅನಿಲ ಖಾಲಿಯಾಗುವ ತುರ್ತು ಸಂದರ್ಭಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್)ನಿಂದ 5 ಕೆಜಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಂಗಳೂರಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಂಸ್ಥೆಯ ದಿನಕರ್ ತೋನ್ಸೆ ಸುದ್ದಿಗಾರರಿಗೆ ತಿಳಿಸಿದರು.

ಸದ್ಯ ಈ ಸಿಲಿಂಡರ್ ಪೂರೈಕೆ ಕಾರ್ಯ ಬೆಂಗಳೂರು, ಮೈಸೂರುಗಳಲ್ಲಿ ಆರಂಭಿಸಲಾಗಿದ್ದು, ಪೆಟ್ರೋಲ್ ಬಂಕ್‌ಗಳಲ್ಲೇ ಇದನ್ನು ವಿತರಿಸಲಾಗುತ್ತಿದೆ. ಭಾವಚಿತ್ರ ಹೊಂದಿರುವ ಗುರುತಿನ ಚೀಟಿಯ ಮೂಲಕ ಈ ಸಿಲಿಂಡರ್ ಪಡೆಯಲು ಸಾಧ್ಯವಿದೆ. ಮಂಗಳೂರು ನಗರ ವನ್ನು ಸೀಮೆಎಣ್ಣೆ ಮುಕ್ತ ಮಾಡುವ ಸಂದರ್ಭ ಬೇರೆ ಊರುಗಳಿಂದ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಇತರ ಕಾರ್ಯಗಳ ನಿಮಿತ್ತ ಮಂಗಳೂರಿನಲ್ಲಿ ಬಂದು ತಾತ್ಕಾಲಿಕವಾಗಿ ನೆಲೆಸುವ ವರಿಗೆ ಅಡುಗೆ ಅನಿಲದ ಅಗತ್ಯವಿದ್ದಲ್ಲಿ ಈ ಸೌಲಭ್ಯ ಸಹಕಾರಿಯಾಗಲಿದೆ ಎಂದವರು ಅಭಿಪ್ರಾಯಿಸಿದ್ದಾರೆ.

Write A Comment