ಅಂತರಾಷ್ಟ್ರೀಯ

ಪ್ರಿಯತಮನ​ ತಲೆ ಕತ್ತರಿಸಿದ ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!

Pinterest LinkedIn Tumblr


ಮೆಕ್ಸಿಕೋ: ತನ್ನ ಬಾಯ್​ಫ್ರೆಂಡ್​ ತಲೆಯನ್ನು ಪ್ಲಾಸ್ಟಿಕ್​​ ಬ್ಯಾಗ್​ನಲ್ಲಿ ಇಟ್ಟುಕೊಂಡು ನಡೆದು ಹೋಗುತ್ತಿದ್ದ ಮಹಿಳೆಯೊಬ್ಬಳನ್ನು ಉದ್ರಿಕ್ತ ಗುಂಪೊಂದು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೇಂದ್ರ ಮೆಕ್ಸಿಕೋದಲ್ಲಿ ನಡೆದಿದೆ.

ಭೂತದ ವಿಚಿತ್ರ ಆಚರಣೆಯ ವೇಳೆ ತನ್ನ ತನ್ನ 70 ವರ್ಷದ ಹಿರಿಯ ಬಾಯ್​ಫ್ರೆಂಡ್​ ತಲೆಯನ್ನು ಮಹಿಳೆ ಕಡಿದಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆ ಅಮೆರಿಕದ ಮೆಕ್ಸಿಕೋ ರಾಜ್ಯದ ಸ್ಯಾಂಟಿಯಾಗೊ ಕ್ಯುಹ್ಟೆಂಕೊ ಎಂಬಲ್ಲಿ ನಡೆದಿದ್ದು, ಮಹಿಳೆ ಮೇಲೆ ಹಲ್ಲೆ ಮಾಡಿದ ಉದ್ರಿಕ್ತ ಗುಂಪನ್ನು ಪೊಲೀಸರು ಚದುರಿಸಿ ಆಕೆಯನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ವೆರೊನಿಕಾ ರಿವೆರಾ (35) ಎಂದು ಗುರುತಿಸಲಾಗಿದೆ.

ರಿವೆರಾ, ಮಚ್ಚು ಮತ್ತು ಚಾಕುವಿನಿಂದ ಬಾಯ್​ಫ್ರೆಂಡ್​ ಜಾರ್ಜ್​ ರಾಮೋಸ್ ಎಂಬಾತನ ತಲೆಯನ್ನು ಕಡಿದಿದ್ದಾಳೆ. ಬಳಿಕ ತಲೆಯನ್ನು ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಸ್ಯಾಂಟಿಯಾಗೊ ಕ್ಯುಹ್ಟೆಂಕೊ ನಗರವನ್ನೇ ತೊರೆಯಲು ಮುಂದಾಗಿದ್ದ ಆಕೆಯನ್ನು ಅಲ್ಲಿನ ನಿವಾಸಿಗಳು ತಡೆದು​ ಮಾತನಾಡಿಸಿದ್ದಾರೆ. ಒಂದಕ್ಕೊಂದು ಸಂಬಂಧವಿಲ್ಲದಂತೆ ಹಾಗೂ ಗಾಬರಿಯಿಂದ ಮಾತನಾಡಿದ ಆಕೆಯನ್ನು ಸಮಧಾನಪಡಿಸಲು ಕೆಲವರು ಮುಂದಾದಾಗ ಆಕೆ, ತಲೆ ಇದ್ದ ಪ್ಲಾಸ್ಟಿಕ್​ ಬ್ಯಾಗ್​ ಅನ್ನು ಕೆಳ ಬೀಸಾಡಿದ್ದಾಳೆ.

ಅನುಮಾನಗೊಂಡ ಸ್ಥಳೀಯರು ರಕ್ತಸಿಕ್ತ ಬ್ಯಾಗ್​ ತೆರೆದು ನೋಡಿದಾಗ ಅದರಲ್ಲಿ ರಾಮೋಸ್​ ತಲೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಕೋಪಗೊಂಡು ರಿವೆರಾ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಇದೇ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಗುಂಪಿನಿಂದ ರಿವೆರಾಳನ್ನು ರಕ್ಷಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದರ ನಡುವೆ ರಾಮೋಸ್​ ಮಗಳಾದ ಇಸಾಬೆಲ್​ ಮತ್ತು ಕುಟುಂಬದ ಇತರೆ ಸದಸ್ಯರು ಪೊಲೀಸ್​ ಠಾಣೆ ಮೆಟ್ಟಿಲೇರಿ, ದೂರು ದಾಖಲಿಸಿ, ರಿವೇರಾಳೇ ಕೊಲೆಗಾತಿ ಎಂದು ಆಪಾದಿಸಿದ್ದಾರೆ. ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

ಸದ್ಯ ಚಿಕಿತ್ಸೆ ಪಡೆಯುತ್ತಿರುವ ರಿವೇರಾ ಪೊಲೀಸ್​ ಕಸ್ಟಡಿಯಲ್ಲಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಮೋಸ್​ ದೇಹದ ಭಾಗಗಳು ತುಂಬಿದ ಮೂರು ಪ್ಲಾಸ್ಟಿಕ್​ ಬ್ಯಾಗ್​ ಅನ್ನು ವಶಪಡಿಸಿಕೊಂಡಿದ್ದಾರೆ.

Comments are closed.