ಅಂತರಾಷ್ಟ್ರೀಯ

Hydroxychloroquine ಪರೀಕ್ಷೆಯ ಮೇಲೆ ನಿರ್ಬಂಧ ವಿಧಿಸಿದ WHO

Pinterest LinkedIn Tumblr


ನವದೆಹಲಿ: ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರ ಮೇಲೆ ಮಲೇರಿಯಾ ಚಿಕಿತ್ಸೆಗಾಗಿ ಬಳಸುವ Hydroxychloroquine ಔಷಧಿ ಪ್ರಭಾವ ಬೀರುತ್ತದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ನಡೆಯುತ್ತಿರುವ ಪರೀಕ್ಷೆಗಳನ್ನು ನಿಲ್ಲಿಸುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ WHO, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಎಚ್ಐವಿ/ಏಡ್ಸ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಔಷಧಿ ಲೋಪಿನಾವಿರ್/ರಿಟೋನಾವಿರ್ ನಿಲ್ಲಿಸುವಂತೆ ಈ ಕುರಿತಾದ ಪರೀಕ್ಷೆಗಳ ಮೇಲೆ ನಿಗಾವಹಿಸಿರುವ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಹೇಳಿದೆ. ಜೊತೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಲೋಪಿನಾವಿರ್ / ರಿಟೊನಾವಿರ್ ಬಳಕೆಯು ‘ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ -19 ರೋಗಿಗಳಲ್ಲಿ ಮರಣ ಪ್ರಮಾಣ ಕಡಿಮೆ ಮಾಡಿಲ್ಲ ಅಥವಾ ಮಾಮೂಲಿ ಕಡಿಮೆ ಮಾಡಿದೆ ಎಂಬುದು ಫಲಿತಾಂಶಗಳಲ್ಲಿ ಗಮನಕ್ಕೆ ಬಂದಿದೆ ಎಂದು ಸಂಸ್ಥೆ ಹೇಳಿದೆ.

ಇನ್ನೊಂದೆಡೆ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಈ ಔಷಧಿ ನೀಡುವುದರಿಂದ ಅವರ ಮರಣ ಪ್ರಮಾಣದಲ್ಲಿ ಏರಿಕೆಯಾಗಿರುವ ಕುರಿತು ಕೂಡ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಸಂಸ್ಥೆ ಹೇಳಿದೆ. ಆದರೆ, ಇದಕ್ಕೆ ಸಂಬಂಧಿಸಿದ ಕ್ಲಿಕಿಕಲ್ ಲ್ಯಾಬ್ ಪರಿಣಾಮಗಳಲ್ಲಿ ಇದರ ಕೆಲ ಸಂಕೇತಗಳು ದೊರೆತಿವೆ. ಹೀಗಾಗಿ ಆಸ್ಪತ್ರೆಗಳಲ್ಲಿ ದಾಖಲಾಗದ ರೋಗಿಗಳ ಮೇಲಿನ ಸಂಭವನೀಯ ಪರೀಕ್ಷೆಗಳ ಮೇಲೆ ತನ್ನ ಈ ನಿರ್ಣಯ ಪ್ರಭಾವ ಬೀರುವುದಿಲ್ಲ ಎಂದು WHO ಸ್ಪಸ್ಥಪಡಿಸಿದೆ. ಅಂದರೆ ಕೊರೊನಾ ವೈರಸ್ ಸಂಪರ್ಕಕ್ಕೆ ಬಂದಿರುವ ಶಂಕೆಯ ಮೊದಲು ಈ ಔಷಧಿ ಸೇವಿಸಿರುವವರ ಮೇಲೆ ತನ್ನ ನಿರ್ಣಯದ ಪ್ರಭಾವ ಇಲ್ಲ ಎಂದು WHO ಹೇಳಿದೆ.

Comments are closed.