ಅಂತರಾಷ್ಟ್ರೀಯ

ಲ್ಯಾಬ್‌ನಿಂದಲೇ ಹರಡಿದ ಸೋಂಕು? ತನಿಖೆಗಿಳಿದ ಅಮೆರಿಕಾ ಗೂಢಚರರು

Pinterest LinkedIn Tumblr

ವಾಷಿಂಗ್ಟನ್‌: ವಿಶ್ವಾದ್ಯಂತ 22 ಲಕ್ಷಕ್ಕೂ ಅಧಿಕ ಜನರಿಗೆ ತಗುಲಿರುವ ಕೊರೊನಾ ವೈರಾಣು ಮೊದಲು ಪತ್ತೆಯಾದ ಚೀನಾದ ಹುಬೀ ಪ್ರಾಂತ್ಯದ ರಾಜಧಾನಿ ವುಹಾನ್‌ ನಗರದ ಪ್ರಯೋಗಾಲ­ಯದಿಂದ ಸೋಂಕು ಸಾರ್ವಜನಿಕರಿಗೆ ಹಬ್ಬಿದ ಬಗ್ಗೆ ಗುಪ್ತಚರರ ಮೂಲಕ ಅಮೆರಿಕ ಸರಕಾರ ಕೂಲಂಕಷ ತನಿಖೆ ನಡೆಸುತ್ತಿದೆ.

ಆ ಪ್ರಯೋಗಾಲಯ ಯಾವುದು? ಹೇಗೆ ವೈರಾಣು ಲ್ಯಾಬ್‌ನಿಂದ ಹೊರಕ್ಕೆ ಬಂತು? ಉದ್ದೇಶಪೂರ್ವಕವಾಗಿ ಹಬ್ಬಿಸ­ಲಾಯಿತೆ? ಎಂಬ ಬಗ್ಗೆ ತನಿಖೆ ನಡೆಯು­ತ್ತಿದೆ ಎಂದು ಅಮೆರಿಕದ ಸುದ್ದಿವಾಹಿನಿ­ ‘ಫಾಕ್ಸ್‌ ನ್ಯೂಸ್‌’ ವರದಿ ಮಾಡಿದೆ. ಇದಕ್ಕೆ ಪೂರಕವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, “ಕೊರನಾ ವೈರಸ್‌ ಚೀನಾ ಲ್ಯಾಬ್‌ನಿಂದ ತಪ್ಪಿಸಿ ಕೊಂಡ ಬಗ್ಗೆ ಗಮನಿಸುತ್ತಿದ್ದೇವೆ. ನಾವೊಬ್ಬರೇ ಅಲ್ಲ, ಸಾಕಷ್ಟು ಮಂದಿ ಈ ಬಗ್ಗೆ ತನಿಖೆಯಲ್ಲಿ ನಿರತರಾಗಿದ್ದಾರೆ,” ಎಂದು ತಿಳಿಸಿದ್ದಾರೆ.
ಚೀನಾ ಹೇಳಿದಂತೆ ವುಹಾನ್‌ನ ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾರುಕಟ್ಟೆಯಲ್ಲಿ ಬಾವಲಿ ಇಲ್ಲ. ಅಲ್ಲಿಂದ 40 ಮೈಲಿ ದೂರದಲ್ಲಿ ಬಾವುಲಿ ಮಾರಾಟವಾಗುತ್ತದೆ ಎಂದೂ ಸುದ್ದಿವಾಹಿನಿ ವರದಿ ಮಾಡಿದೆ.

ಆಫ್ರಿಕಾದಲ್ಲಿ 1000 ಬಲಿ

ಆಫ್ರಿಕಾ ಖಂಡದ 54 ರಾಷ್ಟ್ರಗಳ ಪೈಕಿ 52ರಲ್ಲಿ ಕೊರೊನಾ ಸೋಂಕು ಹಬ್ಬಿದ್ದು ಇದು­ವರೆಗೂ 19,800 ಮಂದಿಗೆ ವೈರಾಣು ತಗುಲಿದೆ. ಒಂದು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ನೈಜೀರಿಯಾದಲ್ಲಿಅಧ್ಯಕ್ಷರ ಸಿಬ್ಬಂದಿ ಮುಖ್ಯಸ್ಥ ಅಬ್ಬಾ ಕ್ಯಾರಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಲಸಿಕೆ ಟಾಸ್ಕ್‌ಫೋರ್ಸ್‌
16 ಸಾವಿ­ರಕ್ಕೂ ಅಧಿಕ ಮಂದಿ ಕೊರೊನಾದಿಂದ ಮೃತಪಟ್ಟಿ­ರುವ ಹಿನ್ನೆಲೆಯಲ್ಲಿ ಬ್ರಿಟನ್‌ ಸರಕಾರ ಲಸಿಕೆ ಕಂಡು ಹಿಡಿದೇ ತೀರುವ ಸಂಕಲ್ಪದೊಂದಿಗೆ ಹೊಸ ಟಾಸ್ಕ್‌ ಫೋರ್ಸ್‌ ರಚಿಸಿದೆ.
ಈ ಕಾರ್ಯಪಡೆಯಲ್ಲಿ ಸರಕಾರಿ ಅಧಿಕಾರಿಗಳು, ತಜ್ಞರು ಮತ್ತು ಉದ್ಯಮಿಗಳು ಇರಲಿದ್ದಾರೆ ಎಂಬುದಾಗಿ ವಾಣಿಜ್ಯ ಕಾರ್ಯದರ್ಶಿ ಅಲೋಕ್‌ ಶರ್ಮಾ ಹೇಳಿದ್ದಾರೆ. ಸರಕಾರ, ವಿಜ್ಞಾನಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಉದ್ಯಮ ಸಂಸ್ಥೆಗಳು ಲಸಿಕೆ ಕಂಡು ಹಿಡಿಯುವ ಏಕೈಕ ಗುರಿಯೊಂದಿಗೆ ಒಟ್ಟಿಗೆ ಕೆಲಸ ಮಾಡಲಿವೆ ಎಂಬುದಾಗಿ ಅವರು ವಿವರಿಸಿದ್ದಾರೆ.

Comments are closed.