ಅಂತರಾಷ್ಟ್ರೀಯ

ಹನಿಮೂನ್ ಮುಗಿಸಿ ಬಂದ ಮಗಳ ಗಂಡನನ್ನೇ ಮದುವೆಯಾದ ತಾಯಿ

Pinterest LinkedIn Tumblr


ಲಂಡನ್: ಹನಿಮೂನ್ ಮುಗಿಸಿ ಬಂದ ಮಗಳ ಪತಿಯನ್ನೇ ತಾಯಿ ಮದುವೆಯಾದ ಘಟನೆ ಲಂಡನ್‍ನಲ್ಲಿ ನಡೆದಿದೆ.

34 ವರ್ಷದ ಲಾರೆನ್ ಹಾಲ್ ತನ್ನ ಮದುವೆಯಿಂದ ತುಂಬಾ ಖುಷಿಯಾಗಿದ್ದಳು. ಇದೇ ಖುಷಿಯಲ್ಲಿ ಹನಿಮೂನ್‍ಗೆ ತನ್ನ ತಾಯಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದಳು. ಆದರೆ ಹನಿಮೂನ್ ಸಂದರ್ಭದಲ್ಲಿ ಲಾರೆನ್ ತಾಯಿ ಹಾಗೂ ಆಕೆಯ ಪತಿ ಆತ್ಮೀಯವಾಗಿದ್ದರು.

ಮದುವೆಗೂ ಮೊದಲು ನಾನು ಹಾಗೂ ನನ್ನ ಸಂಗಾತಿ ಪಾಲ್ ವೈಟ್ ಒಟ್ಟಿಗೆ ಇರುತ್ತಿದ್ದೆವು. ನಮಗೆ ಒಂದು ಮಗು ಕೂಡ ಇತ್ತು. ಬಳಿಕ 2004, ಆಗಸ್ಟ್ ನಲ್ಲಿ ನನಗೆ 19 ವರ್ಷವಾದಾಗ ನಾನು ನನ್ನ ಸಂಗಾತಿಯನ್ನು ಮದುವೆಯಾದೆ. ಮದುವೆಗಾಗಿ ನನ್ನ ತಾಯಿ ಜೂಲಿ ಬರೋಬ್ಬರಿ 14 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ ಮದುವೆಯಾದ ಎಂಟೇ ವಾರಕ್ಕೆ ನನ್ನ ಪತಿ ಪಾಲ್ ನನ್ನನ್ನು ಬಿಟ್ಟು ಹೋದರು ಎಂದು ಲಾರೆನ್ ತಿಳಿಸಿದ್ದಾಳೆ.

ಪಾಲ್ ನನ್ನನ್ನು ಬಿಟ್ಟು ನನ್ನ ತಾಯಿ ಜೊತೆ ವಾಸಿಸುತ್ತಿರುವುದು ನನಗೆ ತಿಳಿಯಿತು. ಈ ವಿಷಯ ನನಗೆ ತಿಳಿದು ನಾನು ಆಘಾತಕ್ಕೆ ಒಳಗಾದೆ. 2005ರಲ್ಲಿ ನನ್ನ ತಾಯಿ ಮಗುವಿಗೆ ಜನ್ಮ ನೀಡಿದ್ದರು. ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು. ಏಕೆಂದರೆ ನಾನು ಹೆಚ್ಚು ನಂಬಿದ್ದ ನನ್ನ ತಾಯಿ ಹಾಗೂ ಪತಿಯೇ ನನಗೆ ಮೋಸ ಮಾಡಿದ್ದರು ಎಂದು ಲಾರೆನ್ ಕಣ್ಣೀರು ಹಾಕಿದ್ದಾಳೆ.

ನನ್ನ ಹಾಗೂ ಅಳಿಯನ ನಡುವೆ ಯಾವುದೇ ಅಕ್ರಮ ಸಂಬಂಧ ಇಲ್ಲ ಎಂದು ನನ್ನ ತಾಯಿ ನನಗೆ ಹೇಳುತ್ತಿದ್ದರು. ಆದರೆ 2006ರಲ್ಲಿ ನನ್ನ ತಾಯಿ ಹಾಗೂ ಪಾಲ್ ಮದುವೆಯಾಗಿದ್ದು, ನಾನು ಅವರ ಮದುವೆಯಲ್ಲಿ ಭಾಗಿಯಾಗಿದ್ದೆ. ಇವರಿಬ್ಬರ ಮದುವೆಯಾಗಿ ಈಗ 13 ವರ್ಷವಾಗಿದ್ದು, ನನ್ನ ತಾಯಿಯೇ ನನಗೆ ಮೋಸ ಮಾಡಿದ್ದರು ಎಂಬ ನೋವು ನನಗೆ ಕಾಡುತ್ತಿದೆ ಎಂದು ಲಾರೆನ್ ತನ್ನ ನೋವನ್ನು ಹೊರ ಹಾಕಿದ್ದಾಳೆ.

ವರದಿಗಳ ಪ್ರಕಾರ, ಜೂಲಿ ಹಾಗೂ ಪಾಲ್ ಈಗಲೂ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಇತ್ತ ಲಾರೆನ್ ಹೊಸ ಸಂಗಾತಿಯನ್ನು ಹುಡುಕಿ ಮದುವೆಯಾಗಿದ್ದು, ನಾಲ್ಕನೇ ಮಗುವಿಗೆ ತಾಯಿ ಆಗುತ್ತಿದ್ದಾಳೆ. ಹಲವು ವರ್ಷಗಳ ನಂತರ ಲಾರೆನ್‍ಳ ಈ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Comments are closed.