ಅಂತರಾಷ್ಟ್ರೀಯ

ಬ್ರಿಟನ್‌ ಅರಮನೆ ಬಿಕ್ಕಟ್ಟಿಗೆ ನಿಂದನೆ ಕಾರಣ?

Pinterest LinkedIn Tumblr


ಲಂಡನ್‌: ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ಮರ್ಕೆಲ್‌ರನ್ನು ಪ್ರಿನ್ಸ್‌ ವಿಲಿಯಮ್‌ ಅವರು ಪದೇ ಪದೆ ಲೇವಡಿ ಮಾಡುತ್ತಿದ್ದರೇ? ಮೇಘನ್‌ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗುತ್ತಿತ್ತೇ?

ಯುಕೆ ಮಾಧ್ಯಮಗಳ ವರದಿಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿವ. ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ಮರ್ಕೆಲ್‌ ಅವರು ಬ್ರಿಟನ್‌ ಅರಸೊತ್ತಿಗೆಯ ಸ್ಥಾನಮಾನ ತ್ಯಜಿಸುವ ನಿರ್ಧಾರ ಘೋಷಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾಣಿ 2ನೇ ಎಲಿಜಬೆತ್‌ ಅವರು, ಹ್ಯಾರಿ ದಂಪತಿ ಹಾಗೂ ವಿಲಿಯಮ್ಸ್‌ ದಂಪತಿಯನ್ನು ಕರೆಸಿಕೊಂಡು ಮುಖಾಮುಖಿ ಮಾತುಕತೆ ನಡೆಸಿದ್ದಾರೆ. ಅವರ ನಡುವಿನ ಸಮಸ್ಯೆಗಳ ಬಗ್ಗೆ ಅರಿತು, ಮುಂದಿನ ಕ್ರಮದ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಏನೇನಾಯಿತು ಎಂಬ ಮಾಹಿತಿ ಬಹಿರಂಗಗೊಂಡಿಲ್ಲ.

ಆದರೆ, ಬ್ರಿಟನ್‌ನ ಮಾಧ್ಯಮಗಳು ಮೇಘನ್‌ ವಿರುದ್ಧ ವಿಲಿಯಮ್ಸ್‌ ಮಾಡುತ್ತಿದ್ದ ಜನಾಂಗೀಯ ನಿಂದನೆಯೇ ಈ ಎಲ್ಲ ಗೊಂದಲಗಳಿಗೆ ಕಾರಣ ಎಂದು ವರದಿ ಮಾಡಿವೆ. ಆದರೆ, ಇದನ್ನು ಸೋಮವಾರ ಸಂಪೂರ್ಣವಾಗಿ ಅಲ್ಲಗಳೆದು ಜಂಟಿ ಪ್ರಕಟನೆ ಹೊರಡಿಸಿರುವ ಹ್ಯಾರಿ ಮತ್ತು ವಿಲಿಯಮ್‌, ಇಂಥ ವರದಿಗಳು ಅವಹೇಳನಕಾರಿ ಎಂದಿದ್ದಾರೆ. ಇನ್ನು, ಯುಕೆ ಗೃಹ ಸಚಿವೆ ಪ್ರೀತಿ ಪಟೇಲ್‌ ಕೂಡ ಈ ವರದಿ ತಳ್ಳಿಹಾಕಿದ್ದಾರೆ.

ನಮ್ಮಿಬ್ಬರ ದಾರಿ ಬೇರೆ: ಈ ನಡುವೆ, ‘ಬದುಕಿನುದ್ದಕ್ಕೂ ಸೋದರನ ಹೆಗಲ ಮೇಲೆ ಕೈಹಾಕಿಕೊಂಡು ನಡೆದವನು ನಾನು. ಆದರೆ ಈಗ ನನ್ನ ದಾರಿ ಬೇರೆ, ಅವನದ್ದೇ ಬೇರೆ’ ಎಂದು ವಿಲಿಯಂ ತಮ್ಮ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು ಎಂದೂ ಮಾಧ್ಯಮಗಳು ವರದಿ ಮಾಡಿವೆ.

Comments are closed.