ಅಂತರಾಷ್ಟ್ರೀಯ

ಅಮೆರಿಕದಿಂದ 11 ಉಗ್ರರ ಬಿಡುಗಡೆಗೆ ಒಪ್ಪಿಗೆ, 3 ಭಾರತೀಯ ಇಂಜಿನಿಯರ್ ಗಳು ತಾಲಿಬಾನ್ ನಿಂದ ಬಿಡುಗಡೆ

Pinterest LinkedIn Tumblr


ಇಸ್ಲಾಮಾಬಾದ್: ಅಮೆರಿಕ ಮತ್ತು ತಾಲಿಬಾನ್ ನಡುವಿನ ಸಂಧಾನ ಮಾತುಕತೆಯ ಹಿನ್ನೆಲೆಯಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಮೂವರು ಭಾರತೀಯ ಇಂಜಿನಿಯರ್ ಗಳ ಬಿಡುಗಡೆಗೆ ಒಪ್ಪಿರುವುದಾಗಿ ತಾಲಿಬಾನ್ ತಿಳಿಸಿದೆ.

ತಾಲಿಬಾನ್ ಭಯೋತ್ಪಾದನಾ ಸಂಘಟನೆಗೆ ಸೇರಿದ್ದ ಶೇಖ್ ಅಬ್ದುಲ್ ರಹೀಂ ಮತ್ತು ಮೌಲ್ವಿ ಅಬ್ದುರ್ ರಶೀದ್ ಸೇರಿದಂತೆ 11 ಮಂದಿ ಉಗ್ರರನ್ನು ಬಿಡುಗಡೆ ಮಾಡುವಂತೆ ತಾಲಿಬಾನ್ ಷರತ್ತನ್ನು ಒಪ್ಪಿಕೊಂಡಿದ್ದು, ಅದಕ್ಕೆ ಬದಲಾಗಿ 2018ರಿಂದ ತಾಲಿಬಾನ್ ವಶದಲ್ಲಿದ್ದ ಮೂವರು ಭಾರತೀಯ ಇಂಜಿನಿಯರ್ ಗಳನ್ನು ಬಿಡುಗಡೆಗೊಳಿಸುತ್ತಿರುವುದಾಗಿ ಅಫ್ಘಾನ್ ತಾಲಿಬಾನ್ ಹೇಳಿರುವುದಾಗಿ ವರದಿ ವಿವರಿಸಿದೆ.

ಭಾರತದ ಮೂವರು ಇಂಜಿನಿಯರ್ ಗಳನ್ನು ಯಾವ ಸ್ಥಳದಲ್ಲಿ ಬಂಧಮುಕ್ತಗೊಳಿಸುತ್ತಿದೆ ಎಂಬ ಸ್ಥಳದ ವಿವರನ್ನು ಬಹಿರಂಗಪಡಿಸಿಲ್ಲ ಎಂದು ದ ಎಕ್ಸ್ ಪ್ರೆಸ್ ಟ್ರೈಬ್ಯೂನ್ ತಿಳಿಸಿದೆ.

ಅಫ್ಘಾನಿಸ್ತಾನದ ಬಾಘ್ಲಾನ್ ಪ್ರಾಂತ್ಯದಲ್ಲಿನ ಪವರ್ ಪ್ಲ್ಯಾಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಭಾರತೀಯ ಇಂಜಿನಿಯರ್ ಗಳು ಕಾರ್ಯ ನಿರ್ವಹಿಸುತ್ತಿದ್ದರು. 2018ರ ಮೇನಲ್ಲಿ ಮೂವರು ಇಂಜಿನಿಯರ್ ಗಳನ್ನು ತಾಲಿಬಾನ್ ಉಗ್ರರು ಅಪಹರಿಸಿಕೊಂಡು ಹೋಗಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು. ಭಾರತೀಯ ಇಂಜಿನಿಯರ್ ಗಳನ್ನು ಅಪಹರಿಸಿಕೊಂಡು ಹೋದ ಹೊಣೆಗಾರಿಕೆಯನ್ನು ಯಾವ ಸಂಘಟನೆ ಹೊತ್ತುಕೊಂಡಿಲ್ಲವಾಗಿತ್ತು. ಇದೀಗ ಅಮೆರಿಕ, ಅಫ್ಘಾನ್ ತಾಲಿಬಾನ್ ಉಗ್ರರ ಮಾತುಕತೆ ಮೂಲಕ ಬಹಿರಂಗಗೊಂಡಿದೆ.

Comments are closed.