ಅಂತರಾಷ್ಟ್ರೀಯ

ಒಂದೇ ತಿಂಗಳಿನಲ್ಲಿ 23 ಬಾರಿ ಮದುವೆ ಮತ್ತು ಡಿವೋರ್ಸ್

Pinterest LinkedIn Tumblr


ಮದುವೆಯಾದ ನಂತರ ಪತಿ-ಪತ್ನಿಯ ನಡುವೆ ಮುನಿಸು, ಸಾಮಾನ್ಯ, ಜಗಳ ತಾರಕಕ್ಕೇರಿದರೇ ವಿಚ್ಛೇದನ​ ನೀಡುವರೆಗೂ ಹೋಗುತ್ತದೆ. ಆದರೆ ಚೀನಾದಲ್ಲೊಂದು ಕುಟುಂಬದ 11 ಜನರು ಒಂದು ತಿಂಗಳಿನೊಳಗೆ 23 ಬಾರಿ ಮದುವೆಯಾಗಿ ಡಿವೋರ್ಸ್​ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ಬೀಚಿಂಗ್​​ನಲ್ಲಿ ವಾಸವಾಗಿರುವ ಕುಟುಂಬವೊಂದರ 11 ಜನರು ಆಪಾರ್ಟ್​ವೊಂದನ್ನು ಪಡೆಯಲು ಈ ರೀತಿಯ ಉಪಾಯವೊಂದನ್ನು ಮಾಡಿದ್ದಾರೆ. ಚೀನಾದ ಸರ್ಕಾರ ಅಲ್ಲಿನ ಜೇಜಿಯಾಂಗ್​ ಪ್ರದೇಶದಲ್ಲಿರುವ ಅಪಾರ್ಟ್​ಮೆಂಟ್​​​ವೊಂದನ್ನು ನೆಲಸಮ ಮಾಡಿತ್ತು. ಹಾಗಾಗಿ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸರ್ಕಾರ 40 (s.f)​ ಸ್ವಾರ್​​​​ ಫೀಟಿನ ಅಪಾರ್ಟ್​ಮೆಂಟ್​ ನೀಡುವುದಾಗಿ ಹೇಳಿತ್ತು. ಇದನ್ನು ಪಡೆಯಲು ಕುಟುಂಬವೊಂದು 23 ಬಾರಿ ಮದುವೆಯಾಗಿ ಡಿವೋರ್ಸ್​ ನೀಡಿದ್ದಾರೆ.

ಮದುವೆಯಾದ 11 ಜನರು ಜೇಜಿಯಾಂಗ್​ ಪ್ರದೇಶದ ನಿವಾಸಿಗಳಾಗಿದ್ದು, ಪನ್​ರೇ ಎಂಬ ವ್ಯಕ್ತಿ ತನ್ನ ವಿಚ್ಛೇದಿತ ಪತ್ನಿ ಶ್ರೀಯನ್ನು ಮತ್ತೊಮ್ನೆ ಮದುವೆಯಾಗಿದ್ದಾರೆ. ಪನ್​ರೇ ದಂಪತಿಗಳು 2011ರಲ್ಲಿ ಡಿವೋರ್ಸ್​ ನೀಡಿದ್ದರು. ಆದರೆ ಆಕೆಯನ್ನು ಪನ್​ರೇ ಮಾರ್ಚ್​ 6 ರಂದು ಮತ್ತೊಮ್ಮೆ ಮದುವೆಯಾಗಿದ್ದಾನೆ. ಮದುವೆಯಾದರೆ ಅಪಾರ್ಟ್​ಮೆಂಟ್​ ಆಕೆಯ ಹೆಸರಿಗೆ ಬರುತ್ತಂತೆ ಎಂದು ಮದುವೆಯಾಗಿದ್ದಾನೆ. ನಂತರ ಇಬ್ಬರು ವಿಚ್ಛೇದನ ತೆಗೆದುಕೊಂಡಿದ್ದಾರೆ.

ಪನ್​ರೇ ಅದೇ ತಿಂಗಳಿನಲ್ಲಿ ನಾದಿನಿಯನ್ನು ಮತ್ತು ಆಕೆಯ ಸಹೋದರಿಯನ್ನು ಮದುವೆಯಾಗಿ ಡಿವೋರ್ಸ್​ ನೀಡಿದ್ದಾನೆ. ಪನ್​ರೇ ತಂದೆ ಮಾತ್ರವಲ್ಲದೆ ಸಹೋದರ, ಸಹೋದರಿಯರು ಕೂಡ ಬೇರೆಯವರೊಂದಿಗೆ ಮದುವೆಯಾಗಿ ವಿಚ್ಛೇಧನ ನೀಡಿದ್ದಾರೆ. ಮಾಹಿತಿಯೊಂದರ ಮೇಲೆ ಆ ಕುಟುಂಬರ ಸಂಬಂಧಿಕರೆಲ್ಲರು ಸೇರಿದಂತೆ ಒಟ್ಟು 11 ಜನರು 23 ಬಾರಿ ಮದುವೆಯಾಗಿ ವಿಚ್ಛೇಧನ ನೀಡಿದ್ದಾರೆ ಎಂದು ತಿಳಿದುಬಂದಿದೆ.

Comments are closed.