ಅಂತರಾಷ್ಟ್ರೀಯ

ಝಾಕಿರ್ ನಾಯ್ಕ್ ಗಡಿಪಾರು ಬಗ್ಗೆ ಮೋದಿ ಏನು ಹೇಳಿದ್ದಾರೆ ? ಪ್ರತಿಕ್ರಿಯಿಸಿದ ಮಲೇಶಿಯ ಪ್ರಧಾನಿ …

Pinterest LinkedIn Tumblr

ನವದೆಹಲಿ: ಇಸ್ಲಾಂ ನ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಗಡಿಪಾರು ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು ಎಂಬ ವರದಿಗಳ ಬಗ್ಗೆ ಮಲೇಶಿಯ ಪ್ರಧಾನಿ ಮಹತೀರ್ ಮೊಹಮದ್ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಈಸ್ಟ್ರನ್ ಎಕಾನಾಮಿಕ್ ಫೋರಂ ನಲ್ಲಿ ಮಲೇಶಿಯಾ ಪ್ರಧಾನಿ ಮಹತೀರ್ ಮೊಹಮದ್ ಅವರನ್ನು ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ಮೋದಿ ಝಾಕಿರ್ ನಾಯ್ಕ್ ಗಡಿಪಾರಿಗೆ ಆಗ್ರಹಿಸಿದ್ದಾರೆ ಎಂಬ ವರದಿ ಪ್ರಕಟವಾಗಿತ್ತು. ಈಗ ಸ್ವತಃ ಮಹತೀರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

“ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಅವರೂ ಕೂಡ ಜಾಕಿರ್ ನಾಯ್ಕ್ ವಿಚಾರ ಪ್ರಸ್ತಾಪವಾಗಲಿಲ್ಲ” ಎಂದು ಮಹತೀರ್ ಹೇಳಿದ್ದಾರೆ.

Comments are closed.