ಅಂತರಾಷ್ಟ್ರೀಯ

ಪಾಕಿಸ್ತಾನದ ಮೂವರು ಹಿರಿಯ ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದ ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸೈಯದ್​ ಅಕ್ಬರುದ್ದೀನ್​

Pinterest LinkedIn Tumblr

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್​ಎಸ್​ಸಿ) ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಮೂವರು ಹಿರಿಯ ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿಶ್ವಸಂಸ್ಥೆಯ ಭಾರತೀಯ ಪ್ರತಿನಿಧಿ ಸೈಯದ್​ ಅಕ್ಬರುದ್ದೀನ್​ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಭೆಯ ಬಳಿಕ ಪಾಕಿಸ್ತಾನದ ಪ್ರತಿನಿಧಿ ಮಲೀಹಾ ಲೋಧಿ ಮತ್ತು ಚೀನಾದ ಪ್ರತಿನಿಧಿ ಜಂಗ್​ ಜುನ್​ ಅವರು ತಮ್ಮ ಹೇಳಿಕೆಯನ್ನು ಓದಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದೆ ತೆರಳಿದರು. ಆ ನಂತರ ಪತ್ರಿಕಾಗೋಷ್ಠಿ ನಡೆಸಿದ ಸೈಯದ್​ ಅಕ್ಬರುದ್ದೀನ್​ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದರು, ಯಾರೂ ಪ್ರಶ್ನೆಗೂ ಉತ್ತರಿಸಿಲ್ಲ. ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರತಿನಿಧಿಯಾದ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸದಾ ಸಿದ್ಧ ಎಂದು ತಿಳಿಸಿದರು.

ಈ ವೇಳೆ ಮೊದಲು ಪ್ರಶ್ನೆ ಕೇಳಿದ ಪಾಕಿಸ್ತಾನದ ಹಿರಿಯ ಪತ್ರಕರ್ತರು, ನೀವು ಪಾಕಿಸ್ತಾನದೊಂದಿಗೆ ಯಾವಾಗ ಮಾತುಕತೆ ಆರಂಭಿಸುತ್ತೀರಿ ಎಂದು ಸೈಯದ್​ ಅಕ್ಬರುದ್ದೀನ್​ ಅವರನ್ನು ಪ್ರಶ್ನಿಸಿದರು. ಕೂಡಲೇ ಪೋಡಿಯಂನಿಂದ ಇಳಿದು ಪತ್ರಕರ್ತರ ಬಳಿ ತೆರಳಿದ ಅಕ್ಬರುದ್ದೀನ್​ ಅವರಿಗೆ ಹಸ್ತಲಾಘವ ನೀಡಿ ಪೋಡಿಯಂಗೆ ಮರಳಿದರು.

ನಂತರ ಮಾತನಾಡಿದ ಅವರು ಭಾರತ ಸ್ನೇಹದ ಹಸ್ತವನ್ನು ಈಗಾಗಲೇ ಚಾಚಿದೆ. ನಾವು ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗಿದ್ದೇವೆ. ಪಾಕಿಸ್ತಾನದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದರು. ಈ ಮೂಲಕ ಭಾರತ ಮಾತುಕತೆಗೆ ಸದಾ ಸಿದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಮತ್ತೊಬ್ಬ ಪತ್ರಕರ್ತ ಪಾಕಿಸ್ತಾನ ಮಾತುಕತೆ ಆಹ್ವಾನ ನೀಡಿದರೂ ಭಾರತ ಅದಕ್ಕೆ ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಅಕ್ಬರುದ್ದೀನ್​ ‘ಉಗ್ರವಾದಕ್ಕೆ ತಡೆ ಹಾಕಿ ಮಾತುಕತೆ ಬನ್ನಿ. ದೇಶ ದೇಶಗಳ ನಡುವೆ ಮಾತುಕತೆ ನಡೆಸಲು ಹಲವು ರಾಜತಾಂತ್ರಿಕ ವಿಧಾನಗಳಿವೆ. ಆದರೆ, ಒಂದು ರಾಷ್ಟ್ರ ತನ್ನ ಗುರಿಯನ್ನು ತಲುಪಲು ಉಗ್ರವಾದವನ್ನು ಬಳಸಿಕೊಂಡರೆ ಅದನ್ನು ಸಾಮಾನ್ಯ ರಾಷ್ಟ್ರದ ವರ್ತನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಉಗ್ರವಾದಕ್ಕೆ ಹೆಚ್ಚಿನ ಉತ್ತೇಜನ ಸಿಗುತ್ತಿರುವಾಗ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರ ಆ ರಾಷ್ಟ್ರದೊಂದಿಗೆ ಮಾತುಕತೆ ನಡೆಸಲು ಒಪ್ಪಸಲು ಸಾಧ್ಯವಿಲ್ಲ ಎಂದು ಪಾಕ್​ ಪತ್ರಕರ್ತನ ಪ್ರಶ್ನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

Comments are closed.