ಅಂತರಾಷ್ಟ್ರೀಯ

ನಿಮ್ಮ ಶಾರ್ಟ್ಸ್​ ತುಂಬಾನೇ ಚಿಕ್ಕದಾಗಿದೆ ಎಂದದ್ದಕ್ಕೆ ವಿದ್ಯಾರ್ಥಿನಿ ಮಾಡಿದ್ದೇನು ನೋಡಿ…!

Pinterest LinkedIn Tumblr

ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಬೋಧಕರಿಂದ ಅವಮಾನವಾದಾಗ ಅವರು ಪ್ರತಿಭಟಿಸುವ ಮೂಲಕ ಶಿಕ್ಷಕರಿಗೆ ಉತ್ತರಿಸುತ್ತಾರೆ. ಅದೇ ರೀತಿ ನ್ಯೂಯಾರ್ಕ್​ನಲ್ಲಿ ವಿದ್ಯಾರ್ಥಿನಿಯೋರ್ವಳು ಶಿಕ್ಷಕರಿಂದ ಅವಮಾನಕ್ಕೆ ಒಳಗಾಗಿದ್ದಳು. ಆಕೆ, ಇದನ್ನು ಪ್ರತಿಭಟಿಸಿದ ರೀತಿ ತುಂಬಾನೇ ಅಚ್ಚರಿ ಮೂಡಿಸಿದೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದೆ.

ಆಕೆಯ ಹೆಸರು ಲೆಟಿಟಿಯಾ ಚಾಯ್​. ನ್ಯೂಯಾರ್ಕ್​ನ ಇಥಾಕಾದಲ್ಲಿರುವ ಕಾರ್ನೆಲ್​ ವಿಶ್ವವಿದ್ಯಾಲಯದಲ್ಲಿ ಆಕೆ ಅಧ್ಯಯನ ನಡೆಸುತ್ತಿದ್ದಾಳೆ. ವಿಶ್ವವಿದ್ಯಾಲಯದಲ್ಲಿ ಪ್ರಬಂಧ ಮಂಡನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಚಾಯ್​ ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅವಳು ಶಾರ್ಟ್ಸ್​​ ಹಾಕಿ ಬಂದಿದ್ದಳು.

ಇದು ಅಲ್ಲಿಯ ಪ್ರಾಧ್ಯಾಪಕನ ಕೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಾಧ್ಯಾಪಕ, ‘ನಿಮ್ಮ ಶಾರ್ಟ್ಸ್​ ತುಂಬಾನೇ ಚಿಕ್ಕದಾಗಿದೆ’ ಎಂದು ಎಲ್ಲರ ಎದುರು ದೊಡ್ಡದಾಗಿ ಗದರಿ ಚಾಯ್​ಗೆ ಅವಮಾನ ಮಾಡಿದ್ದ. ಇದನ್ನು ಸಹಿಸದ ಆಕೆ, ವೇದಿಕೆಯ ಮೇಲೆ ಬಟ್ಟೆಯನ್ನು ತೆಗೆದು ಹಾಕಿದ್ದಾಳೆ. ಅಷ್ಟೇ ಅಲ್ಲ, ಒಳ ಉಡುಪಿನಲ್ಲೇ ಪ್ರಬಂಧ ಮಂಡನೆ ಮಾಡಿದ್ದಾಳೆ.

ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಚಾಯ್​, “ನಾನು ಪ್ರಾಧ್ಯಾಪಕನಿಂದ ಅವಮಾನಕ್ಕೆ ಒಳಗಾದೆ. ಹೀಗಾಗಿ, ಅರೆಬೆತ್ತಲಾಗುವ ಮೂಲಕ ಅವರಿಗೆ ಉತ್ತರಿಸಿದೆ. ನಾನು ಮಾಡಿದ್ದು ಪ್ರತಿಭಟನೆ. ನನ್ನ ಉಡುಗೆಯ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದ್ದಾಳೆ.

ಸದ್ಯ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ಕೆಲವರು ವಿದ್ಯಾರ್ಥಿನಿಯ ಪರ ವಹಿಸಿಕೊಂಡು ಮಾತನಾಡಿದರೆ, ಇನ್ನೂ ಕೆಲವರು ಶಿಕ್ಷರ ಪರವಾಗಿದ್ದಾರೆ.

Comments are closed.