ಅಂತರಾಷ್ಟ್ರೀಯ

ಡ್ರಗ್ ಸೇವಿಸಿ ನಿರಂತರ ಐದು ಗಂಟೆ ಲೈಂಗಿಕ ಕ್ರಿಯೆ ನಡೆಸಿ ಮಹಿಳೆ ಸಾವು!

Pinterest LinkedIn Tumblr


ಆಕೆಯ ವಯಸ್ಸು 32 ವರ್ಷ. ಪ್ರಿಯಕರನ ಜೊತೆ ಆಕೆ ಹೋಟೆಲ್​ನಲ್ಲಿ ರೂಮ್​ ಮಾಡಿದ್ದಳು. ಮಿತಿ ಮೀರಿ ಡ್ರಗ್​ ಸೇವನೆ ಮಾಡಿದ್ದಳು. ಅದೇ ಅಮಲಿನಲ್ಲಿ ಬರೋಬ್ಬರಿ 5 ಗಂಟೆಗಳ ಕಾಲ ನಿರಂತರವಾಗಿ ಲೈಂಗಿಕ ಪ್ರಕ್ರಿಯೆ ನಡೆಸಿದ್ದಾಳೆ! ಕೊನೆಗೆ ಹೃದಯಾಘಾತದಿಂದ ಮಹಿಳೆ ಮೃತಪಟ್ಟಿದ್ದಾಳೆ!

ಹೀಗೊಂದು ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಮಹಿಳೆ ಸಾಯುವುದಕ್ಕೂ ಮೊದಲು ಹೋಟೆಲ್​ ಒಂದರಲ್ಲಿ ರೂಮ್​ ಮಾಡಿ ಉಳಿದುಕೊಂಡಿದ್ದಳು. ಆಕೆಯ ಜೊತೆಗಾರ ಎಷ್ಟೇ ತಡೆದರೂ ಆಕೆ ಮಾತ್ರ ಮಾದಕ ವಸ್ತು ಸೇವನೆ ನಿಲ್ಲಿಸಲಿಲ್ಲ. ಕೊನೆಗೆ ಆತನಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮಹಿಳೆ ಪ್ರಚೋದಿಸಿದ್ದಾಳೆ. ನಿರಂತರವಾಗಿ ಐದು ಗಂಟೆಗಳ ಕಾಲ ಇಬ್ಬರೂ ಸಮ್ಮಿಲನ ಹೊಂದಿದ್ದಾರೆ!

ಇದ್ದಕ್ಕಿಂದಂತೆ ಮಹಿಳೆಗೆ ಹೃದಯಾಘಾತವಾಗಿದೆ. ಆಕೆ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಗೆ ತೆರಳಿದ್ದಳು. ನಂತರ ಹೋಟೆಲ್​ನಲ್ಲಿ ತುರ್ತು ಸೇವೆಗೆ ಮನವಿ ಮಾಡಲಾಯಿತಾದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ನಂತರ ಹೋಟೆಲ್​ ಸಿಬ್ಬಂದಿಗಳ ಸಹಾಯದಿಂದಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಕೊನೆ ಉಸಿರೆಳೆದಿದ್ದಳು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಐದು ಗಂಟೆ ನಿರಂತರವಾಗಿ ಸೆಕ್ಸ್​ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆಕೆಯನ್ನು ಎಲ್ಲರೂ ‘ದಿ ಬೀಸ್ಟ್​’ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು ಎನ್ನಲಾಗಿದೆ. ಮಹಿಳೆಯ ನಿಜವಾದ ಹೆಸರು ಇನ್ನೂ ಬೆಳಕಿಗೆ ಬಂದಿಲ್ಲ.

“ಇದೊಂದು ವಿಚಿತ್ರ ಪ್ರಕರಣ. ಮಾದಕ ವಸ್ತು ಸೇವನೆ ಮಾಡಿ 5 ಗಂಟೆ ಕಾಲ ನಿರಂತರವಾಗಿ ಸೆಕ್ಸ್​ ಮಾಡಿದ್ದಾರೆ ಎಂದರೆ ಅಚ್ಚರಿ ಪಡಲೇಬೇಕು. ಇದು ಸಹಜ ಸಾವೋ ಅಥವಾ ಇದರ ಹಿಂದೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ,” ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.