ಅಂತರಾಷ್ಟ್ರೀಯ

ಮೆಕ್ಸಿಕೋದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಒಲಿದ ವಿಶ್ವಸುಂದರಿ ಪಟ್ಟ

Pinterest LinkedIn Tumblr


ಸಾನ್ಯಾ ಚೀನಾ: ಮೆಕ್ಸಿಕೋದ ಸುಂದರಿ ವನೆಸ್ಸಾ ಪೊನ್ಸ್ ಡೆ ಲಿಯಾನ್ 68ನೇ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದಾರೆ.ಕಳೆದ ವರ್ಷ ವಿಶ್ವಸುಂದರಿಯ ಪಟ್ಟ ಅಲಂಕರಿಸಿದ್ದ ಭಾರತೀಯಳಾದ ಮಾನುಷಿ ಚಿಲ್ಲರ್ ಅವರಿಂದ ಕಿರಿಟ್ ವನ್ನು ವನೆಸ್ಸಾ ಪೊನ್ಸ್ ಡೆ ಲಿಯಾನ್ ಗೆ ವರ್ಗಾಯಿಸಿದರು.

ಚೀನಿ ದ್ವೀಪದಲ್ಲಿರುವ ಹೈನಾನ್ ನಗರದಲ್ಲಿ ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಅವರಿಗೆ ವಿಶ್ವಸುಂದರಿ ಪಟ್ಟವನ್ನು ಅಲಂಕರಿಸಲಾಯಿತು.ಮಿಸ್ ಮೆಕ್ಸಿಕೋ ವನೆಸ್ಸಾ ಪೊನ್ಸ್ ಡೆ ಲಿಯಾನ್( 26) ಇಂಟರ್ನ್ಯಾಷನಲ್ ಬುಸಿನೆಸ್ ನಲ್ಲಿ ಪದವಿಯನ್ನು ಪಡೆದಿದ್ದು “ಮೈಂಡರೆಸ್ ಎನ್ ಎಲ್ ಕ್ಯಾಮಿನೊ” ಗೆ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವರ್ಣರಂಜಿತ ಸಮಾರಂಭದಲ್ಲಿ ಯುಎಸ್ ಟ್ರೂಪ್ ಸಿಸ್ಟರ್ ಸ್ಲೆಡ್ಜ್ ಅವರ 1979 ಡಿಸ್ಕೊ ​​ಗೀತೆ “ವೀ ಆರ್ ಫ್ಯಾಮಿಲಿ” ಯನ್ನು ಪ್ರದರ್ಶಿಸಿಸಲಾಯಿತು.ಇದೇ ವೇಳೆ ಮೊದಲ ರನ್ನರ್ ಅಪ್ ಆಗಿ ಥೈಲ್ಯಾಂಡ್ ನ ನಿಕೋಲಿನ್ ಪಿಚಪಾ ಲಿಮ್ಸ್ನುಕಾನ್, ಮತ್ತು ಮಿಸ್ ಬೆಲಾರಸ್ ಮಾರಿಯಾ ವಾಸಿಲಿವಿಚ್, ಮಿಸ್ ಜಮೈಕಾ ಕದಿಜಾ ರಾಬಿನ್ಸನ್ ಮತ್ತು ಮಿಸ್ ಉಗಾಂಡಾ ಕ್ವಿಯಿನ್ ಅಬೆನಾಕ್ಯೋ ಅವರು ಟಾಪ್ 5 ನಲ್ಲಿನ ಸುಂದರಿಯರು.ವಿಶೇಷವೆಂದರೆ ಸಾನ್ಯಾದಲ್ಲಿ ಮಿಸ್ ವರ್ಲ್ಡ್ ಫೈನಲ್ ಎಂಟನೇ ಬಾರಿಗೆ ನಡೆಯಿತು,ಈ ಹಿಂದೆ 2003 ರಲ್ಲಿ ಇಲ್ಲಿ ಆಯೋಜಿಸಲಾಗಿತ್ತು

Comments are closed.