ಅಂತರಾಷ್ಟ್ರೀಯ

15 ಲಕ್ಷಕ್ಕೂ ಹೆಚ್ಚಿನ ವಾಹನಗಳನ್ನು ಹಿಂಪಡೆಯಲಿರುವ ನಿಸಾನ್ ಕಂಪೆನಿ..!

Pinterest LinkedIn Tumblr


ಟೋಕಿಯೊ: ಖ್ಯಾತ ವಾಹನ ತಯಾರಿಕಾ ಕಂಪೆನಿ ನಿಸಾನ್ ಸುಮಾರು 15 ಲಕ್ಷಕ್ಕಿಂತಲೂ ಹೆಚ್ಚಿನ ವಾಹನಗಳನ್ನು ವಾಪಸ್​ ಪಡೆಯುವುದಾಗಿ ತಿಳಿಸಿದೆ. ಜಪಾನ್​ನಲ್ಲಿ ಮಾರಾಟ ಮಾಡಲಾಗಿರುವ ವಾಹನಗಳಲ್ಲಿ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಂಪೆನಿಯು ಈ ನಿರ್ಧಾರಕ್ಕೆ ಬರಲಾಗಿದೆ.

ನಿಸಾನ್​ನ ಎರಡು ಘಟಕಗಳಲ್ಲಿ ತಯಾರಿಸಲಾಗಿರುವ ವಾಹನಗಳನ್ನು ಸರಿಯಾಗಿ ತಪಾಸಣೆ ನಡೆಸದೆ ಮಾರಾಟ ಮಾಡಲಾಗಿದೆ. ಇದರಿಂದ ವಾಹನದ ವಿಧಿವಿಧಾನಗಳ ಅನುಸರಣೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿದ್ದು, ಇಂತಹ ವಾಹನಗಳನ್ನು ಕಂಪೆನಿ ವಾಪಾಸ್ ಪಡೆಯುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷಾರಂಭದಿಂದ ಮಾರಾಟ ಮಾಡಲಾಗಿರುವ ವಾಹನಗಳಲ್ಲಿ ಬ್ರೇಕ್, ವೇಗ, ಮತ್ತು ವಾಹನದ ಸ್ಥಿರತೆಗಳಲ್ಲಿ ವ್ಯತ್ಯಾಸಗಳು ಪತ್ತೆ ಹಚ್ಚಲಾಗಿದೆ. ಮಾರಾಟಕ್ಕೂ ಮುನ್ನ ನಿಖರವಲ್ಲದ ತಪಾಸಣೆಯಿಂದ ಈ ರೀತಿಯ ತೊಂದರೆಗಳು ಉಂಟಾಗಿದ್ದು, ಹೀಗಾಗಿ ಈ ಎರಡು ಘಟಕಗಳಿಂದ ಮಾರಾಟ ಮಾಡಲಾದ 15 ಲಕ್ಷಕ್ಕಿಂತಲೂ ಹೆಚ್ಚಿನ ವಾಹನಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದು ನಿಸಾನ್ ತಿಳಿಸಿದೆ.

Comments are closed.