ಅಂತರಾಷ್ಟ್ರೀಯ

ತರಕಾರಿ ತರಲು ಹೋದ ಮಹಿಳೆ ಈಗ ಕೋಟ್ಯಾಧಿಪತಿ! 

Pinterest LinkedIn Tumblr


ಅಮೇರಿಕಾ: ಯಾರಿಗೆ ಯಾವಾಗ ಅದೃಷ್ಟ ಖುಲಾಯಿಸುತ್ತೆ ಅನ್ನೋದು ಹೇಳೋಕ್ಕೆ ಆಗೋಲ್ಲ. ಆ ದೇವರು ಸುಖ ಆಗ್ಲಿ, ದುಃಖ ಆಗ್ಲಿ ಕೊಟ್ರೆ ಕೈ ತುಂಬಾ ಕೊಡ್ತಾನೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಅಮೆರಿಕಾಡಲ್ಲಿ ತರಕಾರಿ ತರಲು ಹೋದ ಮಹಿಳೆ ಅಲ್ಲಿಂದ ಬರುವುದರೊಳಗೆ ಕೋಟ್ಯಾಧಿಪತಿ ಆಗಿದ್ದಾಳೆ!

ಹೌದು, ಅಮೇರಿಕಾದ ಮೇರಿಲ್ಯಾಂಡ್​ನ ವನ್ನೀಸಾ ಎಂಬ ಮಹಿಳೆ ತನ್ನ ತಂದೆಯೊಂದಿಗೆ ತಾಜಾ ಎಲೆಕೋಸು ತರಲು ತರಕಾರಿ ಅಂಗಡಿಗೆ ಹೋಗಿದ್ದಳು. ಅಲ್ಲಿಂದ ಬರುವಾಗ ಸ್ಪಿನ್ ವಿನ್​ ಸ್ಕ್ರಾಚ್ ಲಾಟರಿ ಟಿಕೆಟ್ ಮಾರುತ್ತಿದ್ದುದನ್ನು ಕಂಡು ತಾನೂ ಅದೃಷ್ಟ ಪರೀಕ್ಷಿಸಲು ಖರೀದಿಸಿದ್ದಾಳೆ. ಬಳಿಕ ಮನೆಗೆ ಬಂದು ನೋಡೋಣ ಅಂತ ಆ ಲಾಟರಿ ಟಿಕೆಟ್ ಸ್ಕ್ರ್ಯಾಚ್ ಮಾಡಿದ್ದಾಳೆ. ಅಲ್ಲಿ ಆಕೆಗೆ ಅಚ್ಚರಿಯೊಂದು ಕಾದಿತ್ತು. ಆಕೆ 1 ರಿಂದ 5 ಲಕ್ಷ ಡಾಲರ್ ಬಹುಮಾನ ಗೆಲ್ಲುವ ಸ್ಪಿನ್ ಗೆ ಆಯ್ಕೆ ಆಗಿದ್ದಳು.

ಅದರಂತೆ ಆಕೆ ಹೋಗಿ ಅದೃಷ್ಟದ ಗಾಲಿಯನ್ನು ತಿರುಗಿಸಿದಾಗ ಅದರಲ್ಲಿ ಆಕೆಗೆ 2,22,500 ಡಾಲರ್ ಮೊತ್ತದ ಬಹುಮಾನ‌ ಸಿಕ್ಕಿದೆ, ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 1.5 ಕೋಟಿ ರೂ. ಗೆದ್ದಿದ್ದಾಳೆ! ಈ ಬಗ್ಗೆ ಮಾತನಾಡಿರುವ ಆಕೆ, ತನಗೆ ಬಂದಿರುವ ಬಹುಮಾನದ ಹಣದಲ್ಲಿ ಡಿಸ್ನಿ ಲ್ಯಾಂಡ್ ಪ್ರವಾಸದ ಕನಸನ್ನು ಪೂರೈಸಿಕೊಳ್ಳುವುದಾಗಿಯೂ, ಉಳಿದ ಹಣವನ್ನು ನಿವೃತ್ತಿಯ ನಂತರದ ಜೀವನೋಪಾಯಕ್ಕಾಗಿ ಉಳಿಸುವುದಾಗಿ ಹೇಳಿದ್ದಾರೆ.

Comments are closed.