ವಾಷಿಂಗ್ಟನ್: ಪ್ರೀತಿ-ಪ್ರೇಮಕ್ಕೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ ಎಂದು ಹೇಳುತ್ತಾರೆ. ಅದೇ ರೀತಿ 27 ವಯಸ್ಸಿನ ವಧು ತನ್ನ ಸ್ನೇಹಿತೆಯ 54 ವಯಸ್ಸಿನ ತಂದೆಯ ಜೊತೆ ಮದುವೆಯಾಗಿದ್ದಾರೆ.
ಈ ಘಟನೆ ಅಮೆರಿಕಾದ ಅರಿಜೋನಾದಲ್ಲಿ ನಡೆದಿದೆ. ಕರ್ನ್ ಲೆಹಮಾನ್ ಎಂಬ ವ್ಯಕ್ತಿಯೊಂದಿಗೆ 27ರ ಟೇಲರ್ ಎಂಬವರು ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದಾರೆ.
ಪ್ರೀತಿಯಾಗಿದ್ದು ಹೇಗೆ?
ಐದು ವರ್ಷದ ಹಿಂದೆ ಬಾರ್ ಒಂದರಲ್ಲಿ ಕರ್ನ್ ಲೆಹಮಾನ್ ಮತ್ತು ಟೇಲರ್ ಇಬ್ಬರಿಗೂ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ತಿರುಗಿ ಬಳಿಕ ಈ ಜೋಡಿ ಪಾರ್ಟಿ, ಸಿನಿಮಾ, ಪ್ರವಾಸಕ್ಕೆ ಹೋಗಿ ಸುತ್ತಾಡುತ್ತಿದ್ದರು. ನಂತರ ಒಂದು ವರ್ಷದ ಹಿಂದೆ ಈ ಜೋಡಿ ವಿವಾಹವಾಗಿದ್ದಾರೆ.
ಈ ದಂಪತಿಯ ಪ್ರೀತಿ ಬಗ್ಗೆ ತಿಳಿದ ಕುಟುಂಬದವರು ಶಾಕ್ ಆಗಿದ್ದರು. ಬಳಿಕ ಎರಡು ಕುಟುಂಬದವರು ಒಪ್ಪಿಕೊಂಡಿದ್ದಾರೆ. ಆದರೆ ಮದುವೆಯಾದ ಮೇಲೆ ಒಂದು ದಿನ ಸ್ನೇಹಿತೆ ಕರ್ನ್ ಗೆ 30 ವರ್ಷದ ಅಮಾಂಡ ಎನ್ನುವ ಮಗಳಿದ್ದಾರೆ ಎಂದು ತಿಳಿದಿದೆ. ಈ ವೇಳೆ ಆಕೆ ಟೇಲರ್ ನ ಆಪ್ತ ಸ್ನೇಹಿತೆ ಎಂಬ ವಿಷಯ ಬಹಿರಂಗವಾಗಿದೆ.
ಮದುವೆಯ ಆರಂಭದಲ್ಲಿ ಈ ಸಂಬಂಧ ಉಳಿಯುವುದಿಲ್ಲ ಎಂದುಕೊಂಡಿದ್ದೆ. ಆದರೆ ನಮ್ಮಬ್ಬಿರ ಆಸಕ್ತಿ ಒಂದೇ ಆಗಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಸದ್ಯಕ್ಕೆ ಮಗಳು ಮತ್ತು ಪತ್ನಿಯೊಂದಿಗೆ ಪ್ರವಾಸ ಮಾಡಿಕೊಂಡು ಮೂವರು ಸಂತಸವಾಗಿದ್ದೇವೆ ಎಂದಿದ್ದಾನೆ ಎಂದು ಕರ್ನ್ ಹೇಳಿದ್ದಾರೆ.
ಮದ್ವೆ ವಿರೋಧಿಸಿದ್ದ ಸ್ನೇಹಿತೆ:
ಮೊದಲಿಗೆ ಟೇಲರ್ ಸ್ನೇಹಿತೆ ನನ್ನ ಮಗಳು ಈ ಮದುವೆಯನ್ನು ಒಪ್ಪಲಿಲ್ಲ. ಬಳಿಕ ತನ್ನ ಸ್ನೇಹಿತೆ ಸದಾ ತನ್ನ ಸಮಸ್ಯೆ ಮತ್ತು ಕಷ್ಟದಲ್ಲಿ ಭಾಗಿಯಾಗಿದ್ದನ್ನು ನೆನೆದಿದ್ದಾಳೆ. ಈಗ ತನ್ನ ಸ್ನೇಹಿತೆ ತಾಯಿ ಸ್ಥಾನದಲ್ಲಿರುತ್ತಾಳೆಂದು ಖುಷಿಯಿಂದ ಒಪ್ಪಿಕೊಂಡಿದ್ದಾಳೆ ಎಂದು ಕರ್ನ್ ಹೇಳಿದ್ದಾರೆ.
ನಾನು ಇವರನ್ನು ಮದುವೆಯಾಗುತ್ತೇನೆ ಎಂದು ಭಾವಿಸಿರಲಿಲ್ಲ. ಮೊದಲಿಗೆ ನಮ್ಮಿಬ್ಬರ ನಡುವೆ ಸ್ನೇಹವಿತ್ತು. ಆದರೆ ದಿನ ಕಳೆದಂತೆ ನನಗೆ ಗೊತ್ತಿಲ್ಲದೇ ಅವರನ್ನು ಪ್ರೀತಿಸಿದೆ. ಇಬ್ಬರ ಯೋಚನೆ ಒಂದೇ ರೀತಿ ಇತ್ತು. ಆದ್ದರಿಂದ ನಾವಿಬ್ಬರು ಮದುವೆಯಾಗಿದ್ದೇವೆ. ನನ್ನ ಜೀವನವನ್ನು ನಾನು ಇಷ್ಟ ಪಡುತ್ತೇನೆ. ನಾನು ಅವರೊಂದಿಗೆ ಸ್ವತಂತ್ರವಾಗಿ ಖುಷಿಯಾಗಿ ಇದ್ದೇನೆ ಎಂದು ಟೇಲರ್ ಹೇಳಿದ್ದಾರೆ.
Comments are closed.