ಅಂತರಾಷ್ಟ್ರೀಯ

ನಿಮ್ಮ ಫೇಸ್​ಬುಕ್ ಹ್ಯಾಕ್ ಆಗಿದ್ದು ತಿಳಿಯಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ

Pinterest LinkedIn Tumblr


ಇತ್ತೀಚೆಗಷ್ಟೇ ಫೇಸ್​ಬುಕ್ ತನ್ನ 30 ಮಿಲಿಯನ್​ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಸ್ಪಷ್ಟಪಡಿಸಿತ್ತು. ಇದರಲ್ಲಿ 15 ಮಿಲಿಯನ್ ಖಾತೆದಾರರ ಪ್ರೊಫೈಲ್​ನಲ್ಲಿದ್ದ ಮೊಬೈಲ್ ನಂಬರ್, ಇಮೇಲ್ ಮತ್ತು ಹೆಸರುಗಳು ಸೇರಿದಂತೆ ಕೆಲವೊಂದು ವೈಯುಕ್ತಿಕ ಮಾಹಿತಿಗಳನ್ನು ಮಾತ್ರ ಹ್ಯಾಕರ್​​ಗಳು ಕದ್ದಿದ್ದಾರೆ ಎಂದು ಫೇಸ್​ಬುಕ್ ಸಂಸ್ಥೆ ತಿಳಿಸಿದೆ.

ಫೇಸ್​ಬುಕ್ ಮೂಲಗಳ ಪ್ರಕಾರ ಪಾಸ್​ವರ್ಡ್, ಹಣಕಾಸಿನ ಮಾಹಿತಿಯು ಈ ಸೋರಿಕೆಯಲ್ಲಿ ಒಳಪಟ್ಟಿರುವುದಿಲ್ಲ ಎಂದು ತಿಳಿಸಲಾಗಿದೆ. ಅದಾಗ್ಯೂ ಫೇಸ್​ಬುಕ್​ ಬಳಕೆದಾರರ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಮುಂದಾಗಿದ್ದು, ಇದಕ್ಕಾಗಿ ಹೊಸ ವೆಬ್​ಸೈಟ್ ಪ್ರಾರಂಭಿಸಿರುವ ಸಂಸ್ಥೆ ತನ್ನ ಬಳಕೆದಾರರ ಅಕೌಂಟ್ ಸುರಕ್ಷತೆ​ ಕುರಿತಾದ ಮಾಹಿತಿಯನ್ನು ನೀಡುತ್ತಿದೆ.

ಇಲ್ಲಿ ನಿಮ್ಮ ಫೇಸ್​ಬುಕ್​ ಖಾತೆಯು ಹ್ಯಾಕ್​ ಆಗಿದೆಯೋ, ಇಲ್ಲವೊ ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಏನೆಲ್ಲಾ ಮಾಹಿತಿ ಸೋರಿಕೆಯಾಗಿದೆ ಎಂಬುದನ್ನು ತಿಳಿಸುತ್ತದೆ. ಫೇಕ್ ಇ-ಮೇಲ್ ಮತ್ತು ಟೆಕ್ಸ್ಟ್​ಗಳನ್ನು ಹೇಗೆ ನಿಭಾಯಿಸುವುದು ಮತ್ತು ಖಾತೆಯನ್ನು ಹೇಗೆ ಸುರಕ್ಷಿತವಾಗಿಡಬಹುದು ಎಂಬ ವಿಷಯಗಳನ್ನು ಫೇಸ್​ಬುಕ್​ ತನ್ನ ಖಾತೆದಾರನಿಗೆ ನೇರವಾಗಿ ಸಂದೇಶ ಕಳುಹಿಸಿ ತಿಳಿಸುತ್ತದೆ.

Comments are closed.