ಅಂತರಾಷ್ಟ್ರೀಯ

ಪಾಕ್ ನೂತನ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣವಚನ

Pinterest LinkedIn Tumblr


ಇಸ್ಲಾಮಾಬಾದ್: ಮಾಜಿ ಕ್ರಿಕೆಟಿಗ, ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ಪಕ್ಷದ ವರಿಷ್ಠ ಇಮ್ರಾನ್ ಖಾನ್ ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್(65) ನೇತೃತ್ವದ ಪಿಟಿಐ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸರ್ಕಾರ ರಚನೆಗೆ ಬೇಕಾದ ಬಹುಮತಕ್ಕಾಗಿ ಉಳಿದ ಸಣ್ಣ ಪಕ್ಷಗಳ ಜೊತೆ ಕೈಜೋಡಿಸಿದ್ದ ಖಾನ್ ಶುಕ್ರವಾರ ಸಂಸತ್ ನಲ್ಲಿ ಬಹುಮತ ಸಾಬೀತುಪಡಿಸಿದ್ದರು.

ಇಂದು ಅಧ್ಯಕ್ಷದ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಮ್ರಾನ್ ಖಾನ್ ಗೆ ಪಾಕಿಸ್ತಾನ ಅಧ್ಯಕ್ಷರಾದ ಮಾಮ್ ನೂನ್ ಹುಸೈನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜುಲೈ 25ರಂದು ಸಾರ್ವತ್ರಿಕ ಚುನಾವಣೆ ನಡೆದಿದ್ದು, ಸುಮಾರು 3 ವಾರಗಳ ಬಳಿಕ ಖಾನ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಕಿಸ್ತಾನ ಆರ್ಮಿ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ, ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ರಾಮೀಝಾ ರಾಜಾ, ವಾಸೀಂ ಅಕ್ರಮ್, ಪಂಜಾಬ್ ವಿಧಾನಸಭೆಯ ಸ್ಪೀಕರ್ ಚೌಧರಿ ಪರ್ವೇಜ್ ಎಲಾಹಿ, ಮಾಜಿ ಸ್ಪೀಕರ್ ಡಾ.ಫೆಮಿದಾ ಮಿರ್ಜಾ, ಇಮ್ರಾನ್ ಖಾನ್ ಪತ್ನಿ ಬುಸ್ರಾ ಮನೇಕಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Comments are closed.