ಅಂತರಾಷ್ಟ್ರೀಯ

ಗರ್ಲ್ ಫ್ರೆಂಡ್ ಗಾಗಿ ಮಹಿಳಾ ವಿವಿ ಪ್ರವೇಶ ಕೋರಿದ ಯುವಕ

Pinterest LinkedIn Tumblr


ನೀವು ಶಾಲೆ ಅಥವಾ ಕಾಲೇಜು ಪ್ರವೇಶ ಪಡೆಯಲು ಅರ್ಜಿ ಹಾಕಿ ಸಂದರ್ಶನ ಅಥವಾ ಕೌನ್ಸೆಲಿಂಗ್‌ ಎದುರಿಸಿದ ದಿನಗಳನ್ನು ನೆನಪಿಸಿಕೊಳ್ಳಿ. ಸಂದರ್ಶಕರು ನಿಮಗೆ “ಇದೇ ಕಾಲೇಜು ಏಕೆ ಆರಿಸಿಕೊಳ್ಳುತ್ತಿದ್ದೀರಿ’ ಎಂದು ಪ್ರಶ್ನೆ ಕೇಳಿದ್ದಾಗ ನೀವು ಏನೆಂದು ಉತ್ತರಿಸಿದ್ದೀರಿ? ಊರಿಗೆ ಹತ್ತಿರ ಎಂದೋ, ಕಾಲೇಜು ಉತ್ತಮವಾಗಿದೆ ಎಂದೋ ಹೇಳಿರುತ್ತೀರಿ. ಚೀನಾದ ವಿದ್ಯಾರ್ಥಿಯೊಬ್ಬ ನೀಡಿದ ಉತ್ತರ ಕೇಳಿ ತಬ್ಬಿಬ್ಟಾಗುತ್ತೀರ. 18 ವರ್ಷ ವಯಸ್ಸಿನ ಯುವಕನೊಬ್ಬ ಬೀಜಿಂಗ್‌ನ ಚೀನಾ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದ. ಈತನ ಅರ್ಜಿ ಪರಿಗಣಿಸಿ ಕಾಲೇಜು ಮಂಡಳಿ ಸಂದರ್ಶನಕ್ಕೆ ಕರೆದಿತ್ತು. ಸಂದರ್ಶನದಲ್ಲಿ ಈ ಕಾಲೇಜಿನಲ್ಲಿ ನೀವು ಪ್ರವೇಶ ಪಡೆಯಲು ಕಾರಣವೇನು ಎಂದು ಆತನನ್ನು ಪ್ರಶ್ನಿಸಲಾಯಿತು. ಅದಕ್ಕೆ ಆತ, “ನನಗೆ ಗರ್ಲ್ಫ್ರೆಂಡ್‌ ಇಲ್ಲ. ನನಗೆ ಅದಷ್ಟು ಬೇಗ ಪ್ರೇಯಸಿಯನ್ನು ಹುಡುಕಿಕೊಳ್ಳಬೇಕು ಎಂಬ ಗುರಿಯಿದೆ, ಈ ಕಾಲೇಜಿನಲ್ಲಿ ಬರೀ ಹುಡುಗಿಯರೇ ಇರುವುದರಿಂದ, ಆದಷ್ಟು ಬೇಗ ನನ್ನ ಉದ್ದೇಶ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದಿದ್ದಾನೆ. ಈ ಸಂದರ್ಶನ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

-ಉದಯವಾಣಿ

Comments are closed.