ಅಂತರಾಷ್ಟ್ರೀಯ

ಝುಕರ್‌ಬರ್ಗ್‌ ಸಹೋದರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ

Pinterest LinkedIn Tumblr


ಸಾನ್‌ ಫ್ರಾನ್ಸಿಸ್ಕೊ: ಫೇಸ್‌ಬುಕ್‌ ಸಹ ಸಂಸ್ಥಾಪಕ, ಕಾರ್ಯನಿರ್ವಹಣಾಧಿಕಾರಿ ಮಾಕ್‌ ಝುಕರ್‌ ಬರ್ಗ್‌ ಅವರ ಸಹೋದರಿ , ಫೇಸ್‌ಬುಕ್‌ನ ಮಾಜಿ ಮಾರುಕಟ್ಟೆ ಅಭಿವೃದ್ಧಿ ನಿರ್ದೇಶಕಿಯಾಗಿರುವ ರಾಂಡಿ ಝುಕರ್‌ಬರ್ಗ್‌ ಅವರಿಗೆ ಅಲಸ್ಕಾ ಏರ್‌ಲೈನ್ಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ.

ರಾಂಡಿ ಅವರು ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು,ಲಾಸ್‌ ಎಂಜಲೀಸ್‌ನಿಂದ ಮಜತ್ಲಾನ್‌ಗೆ ಪ್ರಯಾಣಿಸುವ ವೇಳೆ ತನ್ನ ಪಕ್ಕದಲ್ಲಿ ಕುಳಿತ ಪ್ರಯಾಣಿಕ ಅಸಹ್ಯವಾಗಿ ವರ್ತಿಸಿ, ಅಶ್ಲೀಲ ಪದಗಳನ್ನು ಆಡಿ ಕಿರುಕುಳ ನೀಡಿರುವುದಾಗಿ ಬರೆದುಕೊಂಡಿದ್ದಾರೆ.

‘ಅಶ್ಲೀಲ ಲೈಂಗಿಕ ಹೇಳಿಕೆಗಳನ್ನು ಆಡುತ್ತಿದ್ದ ಆತನಿಗೆ ವಿಮಾನ ಪರಿಚಾರಕಿಯರು ಏನೂ ಹೇಳದೆ ಸುಮ್ಮನಿದ್ದರು. ಕೇಳಿದರೆ ಆತ ನಿರಂತರ ವಿಮಾನದಲ್ಲಿ ಐ ಹಾರಾಡುವವನೆಂದು ಅವನ ನಡವಳಿಕೆಯಿಂದ ಹೊರಗುಳಿದರು ಮಾತ್ರವಲ್ಲದೆ ನಿರಂತರವಾಗಿ ಮದ್ಯವನ್ನುನೀಡಿದರು. ನಮ್ಮ ಸುರಕ್ಷತೆಗಿಂತ $ಆತನಡಾಲರ್‌ಗಳೆ ಹೆಚ್ಚು ಎಂದು ನಾನು ತಿಳಿದುಕೊಳ್ಳುತ್ತೇನೆ’ ಎಂದು ಬರೆದು ಆಕ್ರೋಶ ಹೊರ ಹಾಕಿದ್ದಾರೆ.

ಈ ಬಗ್ಗೆ ಏರ್‌ಲೈನ್ಸ್‌ಗೆ ದೂರನ್ನು ರಾಂಡಿ ನೀಡಿದ್ದಾರೆ. ದೂರಿಗೆ ಪ್ರತಿಕ್ರಿಯೆಯಾಗಿ ತಕ್ಷಣ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

-ಉದಯವಾಣಿ

Comments are closed.