ಮನೋರಂಜನೆ

ನಾನು ಸಹ ಒಬ್ಬ ಹಿಂದೂ, ಆದರೆ ಆಯ್ಕೆ ಮಾಡಿಕೊಂಡ ಮಾರ್ಗ ಬೇರೆ: ಕಮಲ್ ಹಾಸನ್

Pinterest LinkedIn Tumblr


ಚೆನ್ನೈ: ‘ತಾನು ರಾಜಕೀಯಕ್ಕೆ ಅಡಿಯಿಟ್ಟಾಗಿದೆ. ಇನ್ನು ಕೆಲವು ಕೆಲಸಗಳು ಮಾತ್ರ ಬಾಕಿ ಇವೆ’ ಎಂದು ನಟ ಕಮಲ್ ಹಾಸನ್ ಮಂಗಳವಾರ ತಿಳಿಸಿದ್ದಾರೆ. ಇಂದು ಅವರು 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡರು ಕಮಲ್.

‘ಇಂದು ಪಕ್ಷದ ವಿವರಗಳನ್ನು ಪ್ರಕಟಿಸುತ್ತೇನೆ ಎಂಬ ಸುದ್ದಿಗಳು ಬರುತ್ತಿವೆ. ನನ್ನ ತಂಡದ ಜತೆಗೆ ಬೆರೆತು ಪಕ್ಷಕ್ಕೆ ಸಂಬಂಧಿಸಿದ ಗ್ರೌಂಡ್ ವರ್ಕ್ ಮಾಡುತ್ತಿದ್ದೇನೆ. ನಾನು ರಾಜಕೀಯಕ್ಕೆ ಅಡಿಯಿಡುತ್ತೀನಾ? ಇಲ್ಲವೇ? ಎಂಬ ವಿಚಾರದಲ್ಲಿ ಯಾವುದೇ ಸಂದೇಹ ಬೇಡ. ನಾನು ಬಂದಾಗಿದೆ ಎಂದು ಹೇಳಲು ಈ ಸಮಾವೇಶವೆ ನಿದರ್ಶನ’ ಎಂದಿದ್ದಾರೆ.

ಹುಟ್ಟಿದ ಸಂದರ್ಭದ ನಿಮಿತ್ತ ‘ಮಯ್ಯಂ ವಿಜಿಲ್’ ಎಂಬ ಆ್ಯಪ್‌ ಬಿಡುಗಡೆ ಮಾಡಿರುವ ಕಮಲ್, ಈ ಆ್ಯಪ್‌ ಜನರಿಗಾಗಿ. ಜನರ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಳ್ಳುವ ಸಲುವಾಗಿ ಆ್ಯಪ್‌ ಬಿಡುಗಡೆ ಮಾಡಿದ್ದೇವೆ. ಈ ಆ್ಯಪ್‌ ಇನ್ನೂ ಟೆಸ್ಟಿಂಗ್ ಹಂತದಲ್ಲಿದೆ. 2018ರಿಂದ ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಶೀಘ್ರದಲ್ಲೆ ತಮಿಳುನಾಡಿನಾದ್ಯಂತ ಯಾತ್ರೆ ಕೈಗೊಳ್ಳುತ್ತೇನೆ. ನಮ್ಮ ತಂಡ ಎಲ್ಲಾ ಜಿಲ್ಲೆಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ನಮ್ಮ ಸಾಮಾಜಿಕ ಸೇವೆಗಳನ್ನು ಎಲ್ಲ ಪಕ್ಷಗಳು ಮೆಚ್ಚಿಕೊಳ್ಳುತ್ತಿವೆ. ಕನಸುಗಳಿಂದ ಬದಲಾವಣೆಗಳು ಬರುತ್ತವೆ. ಬದಲಾವಣೆಗಳು ಜೀವನಕ್ಕೆ ಮಾರ್ಗ ತೋರುತ್ತವೆ.

‘ಈ ಹಿಂದೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ರಾಜಕೀಯ ಮುಖಂಡರನ್ನು ನನ್ನ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ನಾನು ಹಿಂದೂಗಳ ಮನೋಭಾವನೆಗಳನ್ನು ಕೀಳಾಗಿ ಕಾಣಬೇಕು ಎಂದುಕೊಂಡಿಲ್ಲ. ನಾನು ಸಹ ಒಬ್ಬ ಹಿಂದೂ. ಆದರೆ ಬೇರೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

Comments are closed.