ಆತ ಹತ್ತು ವರ್ಷಗಳಿಂದ ಪೆಪ್ಸಿ ಕುಡಿದದ್ದೂ ಕುಡಿದದ್ದೇ…! ಆದರೆ ಈಗ ಪ್ರಯೋಜನವಾಗಿಲ್ಲ ಅಂತ ಆತ ಕೋರ್ಟ್ಮೆಟ್ಟಿಲೇರಿದ್ದ. ಕಾರಣ ಪೆಪ್ಸಿ ಕೋ ಕಂಪನಿ ಹ್ಯಾರಿಯರ್ಯುದ್ಧ ವಿಮಾನವನ್ನು ನನಗೆ ಬಹುಮಾನವಾಗಿ ಕೊಟ್ಟಿಲ್ಲ ಎಂಬುದು ಆತನ ದೂರು! 1995ರಲ್ಲಿ ಪೆಪ್ಸಿ ಟೀವಿಯಲ್ಲಿ “ಡ್ರಿಂಕ್ಪೆಪ್ಸಿ ಗೆಟ್ಸ್ಸ್ಟಫ್’ ಜಾಹೀರಾತು ಅಡಿಯಲ್ಲಿ ಪೆಪ್ಸಿ ಕುಡಿದು ಅಂಕ ಗಳಿಸಿ. 70 ಲಕ್ಷಕ್ಕೂ ಮಿಕ್ಕಿ ಪಾಯಿಂಟ್ಸ್ಪಡೆದವರು ಹ್ಯಾರಿಯರ್ಜೆಟ್ಯುದ್ಧವಿಮಾನ ಗೆಲ್ಲಿರಿ ಎಂದು ಹೇಳಿತ್ತು.
ಅದರಂತೆ ಅಂದಿನಿಂದಲೇ ಜಾನ್ಲಿಯೋನಾರ್ಡ್ನಿರಂತರ ಪೆಪ್ಸಿ ಕುಡಿಯಲು ಶುರುಮಾಡಿದ. ಕುಡಿದೂ..ಕುಡಿದೂ.. 70 ಲಕ್ಷ ಪಾಯಿಂಟ್ಸ್ಕೂಡ ಸಿಕು¤. ನೋಡಿ ಪಾಯಿಂಟ್ಸ್ಸಿಕು¤, ವಿಮಾನ ಕೊಡಿ ಅಂದ್ರೆ ಕಂಪನಿ.. ಓ ಅದೆಲ್ಲಾ ಸುಮ್ನೆ ತಮಾಷೆರೀ.. ಅಂದಿತ್ತು. ಇದೇ ಕಾರಣಕ್ಕೆ ಆತ ಕಾನೂನು ಸಮರಕ್ಕೆ ಮುಂದಾಗಿದ್ದ. ಆದರೆ ಅದು ಫಲಕಾರಿಯಾಗಲಿಲ್ಲ. ಕಂಪನಿ ನಿರ್ದಿಷ್ಟವಾಗಿ ಹೀಗೆಂದು ಹೇಳಿಲ್ಲ ಎಂದು ಕೋರ್ಟ್ಆತನ ವಾದ ತಳ್ಳಿಹಾಕಿದೆ.