ಅಂತರಾಷ್ಟ್ರೀಯ

ಫೇಸ್’ಬುಕ್’ನಲ್ಲಿ ತಾಂತ್ರಿಕ ದೋಷ: ಕ್ಷಣಕ್ಕೊಮ್ಮೆ ಫೇಸ್’ಬುಕ್ ನೋಡಬೇಕಾದ ಅನಿವಾರ್ಯತೆ

Pinterest LinkedIn Tumblr

facebookಸಾಮಾಜಿಕ ಜಾಲಾತಾಣ ಫೇಸ್’ಬುಕ್’ನಲ್ಲಿ ತಲೆದೋರಿರುವ ತಾಂತ್ರಿಕ ದೋಷದಿಂದಾಗಿ ಜನರಿಗೆ ತಲೆ ನೋವು ಶುರುವಾಗಿದೆ. ಅಲ್ಲದೇ ಕ್ಷಣಕ್ಕೊಮ್ಮೆ ಫೇಸ್’ಬುಕ್ ನೋಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಫೇಸ್’ಬುಕ್ ಬಳಕೆದಾರನೊಬ್ಬ ‘ತನ್ನ ಹಳೆಯ ಪೋಸ್ಟ್’ಗಳು ಹಾಗೂ ಫೋಟೋಗಳು ತನ್ನ ಅನುಮತಿ ಇಲ್ಲದೆ ತನ್ನಷ್ಟಕ್ಕೇ ರೀ ಪೋಸ್ಟ್ ಆಗಿ ‘ಟೈಮ್’ಲೈನ್’ನಲ್ಲಿ ಕಾಣಲಾರಂಭಿಸಿವೆ ಎಂದು ದೂರು ನೀಡಿದ್ದಾನೆ. ಮಾಧ್ಯಮಗಳಲ್ಲೂ ಈ ಕುರಿತಾಗಿ ಸುದ್ದಿ ಪ್ರಸಾರವಾಗಿದ್ದು, ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಅನುಮತಿ ಇಲ್ಲದೆ ಫೇಸ್’ಬುಕ್’ನಲ್ಲಿ ಫೋಟೋಗಳು ಪೋಸ್ಟ್ ಆಗುತ್ತಿವೆ. ಇದರಿಂದ ಬಳಕೆದಾರರ ಕುಟುಂಬಸ್ಥರು ಹಾಗೂ ಮಿತ್ರರು ಗೊಂದಲದಲ್ಲಿದ್ದಾರೆ ಎಂದು ವರದಿ ಮಾಡಿದ್ದಾರೆ.
ಫೇಸ್’ಬುಕ್’ನ ಈ ದೋಷವನ್ನು @sarah ಎಂಬಾಕೆಯಿಂದ ತಿಳಿದು ಬಂದಿದೆ. ಈಕೆ ಈ ಮೊದಲೇ ತನ್ನ ಫೇಸ್’ಬುಕ್ ಅಕೌಂಟ್ ಡಿಲೀಟ್ ಮಾಡಿದ್ದರು. ಇದಾದ ಬಳಿಕ ಫೇಸ್’ಬುಕ್’ನಲ್ಲಿ ಇವರ 30 ಹಳೆಯ ಪೋಸ್ಟ್’ಗಳು ರೀಪೋಸ್ಟ್ ಆಗಿವೆಯಂತೆ. ಅಲ್ಲದೆ ಈ ಕುರಿತಾಗಿ ನನಗೆ ಯಾವುದೇ ಮಾಹಿತಿಯೂ ಇರಲಿಲ್ಲ. ಅಲ್ಲದೇ ನಾನು ಇದಕ್ಕೆ ಅನುಮತಿಯನ್ನೂ ನೀಡಿಲ್ಲ ಎನ್ನುತ್ತಾರೆ ಸಾರಾ.
ಈ ತಾಂತ್ರಿಕ ದೋಷದ ಪ್ರಕರಣ ವರದಿಯಾದ ಬಳಿಕ ಫೇಸ್’ಬುಕ್ ವಕ್ತಾರ ‘ಈ ಮೊದಲೂ ನಮಗೆ ಈ ತಾಂತ್ರಿಕ ದೋಷದ ಕುರಿತಾಗಿ ದೂರುಗಳು ಬಂದಿವೆ. ಬಳಕೆದಾರರ ಸಮಸ್ಯೆಗೆ ಪರಿಹಾರ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದಿದ್ದಾರೆ.
ಇದು ಫೇಸ್’ಬುಕ್’ನಲ್ಲಿ ಕಂಡುಬಂದ ಮೊದಲ ಸಮಸ್ಯೆಯಲ್ಲ, ಕೆಲ ದಿನಗಳ ಹಿಂದಷ್ಟೇ ತಾಂತ್ರಿ ದೋಷದಿಂದಾಗಿ ತನ್ನ ಕೆಲವು ಬಳಕೆದಾರರನ್ನು ಮೃತರೆಂದು ಘೋಷಿಸಿ ಶ್ರದ್ಧಾಂಜಲಿ ಸಲ್ಲಿಸಿತ್ತು. ಈ ಪಟ್ಟಿಯಲ್ಲಿ ಖುದ್ದು ಫೇಸ್’ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅಕೌಂಟ್ ಕೂಡಾ ಇತ್ತು.

Comments are closed.