ಅಂತರಾಷ್ಟ್ರೀಯ

ಸೌದಿ ಆರೇಬೀಯಾದಲ್ಲಿ ಪ್ರಾಣಿ ಹಿಂಸೆಗೆ 4 ಲಕ್ಷ ಸೌದಿ ರಿಯಾಲ್ ನಷ್ಟು ದಂಡ

Pinterest LinkedIn Tumblr

wild-animals

ಜಿದ್ದಾ :  ಜನರು ಪ್ರಾಣಿಗಳಿಗೆ ಹಿಂಸೆ ನೀಡುವ ಹಲವು ವೀಡಿಯೊಗಳು ಬಹಿರಂಗಗೊಂಡಿರುವ ಹಿನ್ನಲೆಯಲ್ಲಿ ಇಲ್ಲಿನ ಪ್ರಿನ್ಸ್ ಸೌದಿ ಅಲ್ -ಫೈಸಲ್ ಸೆಂಟರ್ ಫಾರ್ ವೈಲ್ಡ್ ಲೈಫ್ ರಿಸರ್ಚ್ ಇದರ ಮಹಾನಿರ್ದೇಶಕ ಅಹ್ಮದ್ ಅಲ್ ಬೌಖ್ ಎಚ್ಚರಿಕೆಯೊಂದನ್ನು ನೀಡಿದ್ದು, ಪ್ರಾಣಿ ಹಿಂಸೆ ನಡೆಸಿದವರಿಗೆ 4 ಲಕ್ಷ ಸೌದಿ ರಿಯಾಲ್ ನಷ್ಟು ದಂಡ ವಿಧಿಸಬಹುದಾಗಿದೆ ಎಂದು ಹೇಳಿದ್ದಾರೆ.

ವಾಟ್ಸ್‌ಅಪ್, ಸ್ನ್ಯಾಪ್ ಚಾಟ್, ಟ್ವಿಟ್ಟರ್ ಮುಂತಾದ ತಾಣಗಳಲ್ಲಿ ಪ್ರಾಣಿ ಹಿಂಸೆಯ ಹಲವು ವೀಡಿಯೋಗಳು ಕಂಡು ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳಿಲ್ಲದ ವ್ಯಕ್ತಿಗಳು ಇಂತಹ ಕೃತ್ಯಗಳನ್ನು ನಡೆಸುತ್ತಾರೆ ಎಂದು ಹೇಳಿದ್ದಾರೆ. ಪ್ರಾಣಿಗಳ ಮೇಲೆ ದಯೆ ಹಾಗೂ ಪ್ರೀತಿ ತೋರಿಸಬೇಕೆಂದು ಸೌದಿ ನಾಗರಿಕರು ಹಾಗೂ ವಲಸಿಗರಿಗೆ ವಿನಂತಿಸಿದ ಅವರು, ”ಪ್ರಾಣಿ ಹಿಂಸೆಯ ಪ್ರಕರಣಗಳು ವಿರಳವಾದರೂ ಸಾಮಾಜಿಕ ಜಾಲತಾಣಗಳಿಂದ ಅವುಗಳು ಹೊರಜಗತ್ತಿಗೆ ಹೆಚ್ಚಾಗಿ ತಿಳಿದುಬರುತ್ತವೆ” ಎಂದರು.

ಸೌದಿ ಸಮಾಜವು ಯಾವತ್ತೂ ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಂತಹ ಸಮಾಜವಾಗಿದೆ ಎಂದು ಅವರು ಹೇಳಿದರು.
ಪ್ರಾಣಿ ಹಿಂಸೆ ನಡೆಸಿದವರಿಗೆ ದಂಡದ ಹೊರತಾಗಿ ಕೆಲವರನ್ನು ಕೋರ್ಟಿಗೂ ಎಳೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಪ್ರಾಣಿ ರಕ್ಷಣಾ ತಂಡದ ‘ಹುರೈರಾಹ್’ ಅದರ ಸದಸ್ಯರೂ ಆಗಿದ್ದಾರೆ ರಿಫಲ್ ಅಲ್-ರಶೀದಿ.

Comments are closed.