ಅಂತರಾಷ್ಟ್ರೀಯ

ಈಕೆ ತನ್ನ ಬಾಯ್‍ಫ್ರೆಂಡ್‍ನ ರಕ್ತ ಕುಡಿಯದಿದ್ದರೆ ಬದುಕುವುದಿಲ್ಲ!

Pinterest LinkedIn Tumblr

bloodಸಿಡ್ನಿ: ಮಾಟ ಮಂತ್ರ ಮಾಡೋರು ಪ್ರಾಣಿಗಳ ರಕ್ತ ಹೀರುವ ಬಗ್ಗೆ ಕೇಳಿರ್ತಿರ. ಕೋಳಿ ಅಥವಾ ಕುರಿಯ ರಕ್ತವನ್ನ ಗಬಗಬನೆ ಕುಡಿದುಬಿಡೋದನ್ನ ಕೆಲವು ಜಾತ್ರೆಗಳಲ್ಲಿ ನೋಡಿರ್ತೀರ. ಆದರೆ ಯುವತಿಯೊಬ್ಬಳು ತನ್ನ ಬಾಯ್‍ಫ್ರೆಂಡ್‍ನ ರಕ್ತವನ್ನೇ ಕುಡಿಯುತ್ತಾಳೆ ಅಂದ್ರೆ ನೀವು ನಂಬಲೇಬೇಕು.

ಹೌದು. ಹೆಸರು ಜಾರ್ಜಿನಾ ಕಾಂಡನ್. ಈಕೆ ಆಸ್ಟ್ರೇಲಿಯಾದಲ್ಲಿ ಮೇಕಪ್ ಆರ್ಟಿಸ್ಟ್. ಈಕೆ ತನ್ನ 12 ನೇ ವಯಸ್ಸಿನಿಂದ ಮನುಷ್ಯನ ರಕ್ತ ಕುಡಿಯೋದಕ್ಕೆ ಆರಂಭಿಸಿದ್ದಾಳೆ. ಮೊದಮೊದಲು ತನ್ನ ದೇಹದ ಮೇಲಿನ ಗಾಯಗಳಿಂದ ರಕ್ತ ಕಡಿಯುತ್ತಿದ್ದಳು. ಈಕೆಗೆ 17 ವರ್ಷ ವಯಸ್ಸಾದಾಗ ಮಹಿಳಾ ರಕ್ತದಾನಿಯಿಂದ ತನಗೆ ಬೇಕಾದ ರಕ್ತ ಪಡೆಯುತ್ತಿದ್ದಳು. ಅಲ್ಲದೆ ಈಕೆ ಕಳೆದ 20 ವರ್ಷಗಳಿಂದ ಕಡು ಬಿಸಿಲಿನಲ್ಲಿ ಹೊರಗಡೆ ಹೋಗೋದನ್ನ ಕಡಿಮೆ ಮಾಡಿದ್ದಾಳೆ.

39 ವರ್ಷದ ಉದ್ಯಮಿ ಜಾರ್ಜಿನಾಗೆ ಥಲಸ್ಸೇಮಿಯಾ ಅನ್ನೋ ಅನುವಂಶಿಕ ಖಾಯಿಲೆಯಿರೋದ್ರಿಂದ ಮನುಷ್ಯನ ರಕ್ತ ಕುಡೀತಾಳೆ. ಹೀಗಾಗಿ ಈಕೆ ವಾರಕ್ಕೊಂದು ಬಾರಿ ತನ್ನ ಬಾಯ್‍ಫ್ರೆಂಡ್‍ನಿಂದ ರಕ್ತ ಪಡೆದು ಕುಡಿಯುತ್ತಾಳೆ. ಒಂದು ವೇಳೆ ರಕ್ತ ಕುಡಿಯಲಿಲ್ಲ ಅಂದ್ರೆ ಈಕೆ ಅನೀಮಿಯಾ ಹಾಗೂ ಕಬ್ಬಿಣದ ಕೊರತೆಯಿಂದ ಬಳಲುತ್ತಾಳೆ. ಈಕೆಗೆ ಸೋಲಾರ್ ಡರ್ಮಟೈಟಿಸ್ ಅನ್ನೋ ಖಾಯಿಲೆ ಕೂಡ ಇರೋದ್ರಿಂದ ಹೆಚ್ಚು ಬಿಸಿಲಿದ್ದಾಗ ಹೊರಗಡೆ ಹೋಗೋದನ್ನ ಅವಾಯ್ಡ್ ಮಾಡಬೇಕು.

ಕಳೆದ ಮೂರು ವರ್ಷದಿಂದ ಈಕೆಯ ಬಾಯ್‍ಫ್ರೆಂಡ್ ಆಗಿರೋ ಝಮೀಲ್ ಜರ್ಜಿನಾಗೆ ರಕ್ತವನ್ನು ಕೊಡುತ್ತಿದ್ದಾನೆ. ಆತನ ಚರ್ಮವನ್ನು ಸ್ಟೆರೈಲ್ ಬ್ಲೇಡ್‍ನಿಂದ ಕತ್ತರಿಸಿ ಅಲ್ಲಿಂದ ಸುರಿಯುವ ರಕ್ತವನ್ನು ಹೀರುತ್ತಾಳೆ. ಇವಳ ಈ ರಕ್ತದ ಬಯಕೆಯನ್ನ ಝಮೀಲ್ ಖುಷಿಯಾಗೇ ತಣಿಸುತ್ತಿದ್ದಾನೆ. ಬೇರೆಯವರಿಂದ ಆಕೆ ರಕ್ತ ಪಡೆದು ಕುಡಿದರೆ ಅದು ತನಗೆ ಮಾಡಿದ ಮೋಸ ಅಂತಾನಂತೆ ಝಮೀಲ್.

Comments are closed.