ಅಂತರಾಷ್ಟ್ರೀಯ

ಭಾರತದಂತೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಿಲ್ಲ: ಪಾಕ್‍

Pinterest LinkedIn Tumblr

pak_flagಇಸ್ಲಾಮಾಬಾದ್: ಪಾಕಿಸ್ತಾನ ₹5,000ದ ನೋಟನ್ನು ರದ್ದು ಮಾಡುವುದಾಗಲೀ ₹40,000 ಪ್ರೈಜ್ ಬಾಂಡ್‍ಗಳನ್ನು ಹಿಂಪಡೆಯುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ವಿತ್ತ ಸಚಿವರು ಹೇಳಿದ್ದಾರೆ.

ಭಾರತ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದಂತೆ ಪಾಕಿಸ್ತಾನವೂ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಿದೆ ಎಂಬ ವದಂತಿ ಕೇಳಿಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ವಿತ್ತ ಸಚಿವ ಇಷಾಕ್ ಧಾರ್, ಇದೆಲ್ಲಾ ಸತ್ಯಕ್ಕೆ ದೂರವಾದುದು. ಇಂಥಾ ಯಾವ ರೀತಿಯ ಪ್ರಸ್ತಾಪಗಳೂ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿಶೇಷ ಸಹಾಯಕ ಹರೂನ್ ಅಖ್ತರ್ ಖಾನ್, ಪಾಕ್‌ನಲ್ಲಿ ನೋಟು ರದ್ದು ಮತ್ತು ಪ್ರೈಜ್ ಬಾಂಡ್ ರದ್ದು ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ನಿನ್ನೆ ಹೇಳಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ಅಂಥಾ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ವಿತ್ತ ಸಚಿವರು ಪ್ರತಿಕ್ರಿಯಿಸಿದ್ದಾರೆ.

Comments are closed.