ಅಂತರಾಷ್ಟ್ರೀಯ

ಆನ್‌ಲೈನ್‌ ವೇಶ್ಯಾವಾಟಿಕೆಗೆ ಸಾಮಾಜಿಕ ಜಾಲತಾಣ ಹೇಗೆ ಸಹಾಯಕ!

Pinterest LinkedIn Tumblr

prostitutionನ್ಯೂಯಾರ್ಕ್: ವೆಬ್ ಸೈಟ್ ಮುಖಾಂತರ ನೇರವಾಗಿ ಗ್ರಾಹಕರನ್ನು ಸೆಳೆಯುತ್ತಿದ್ದ ವೇಶ್ಯಾವಾಟಿಕೆ ದಳ್ಳಾಳಿಗಳು ಇದೀಗ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ.

ವೇಶ್ಯಾವಾಟಿಕೆ ವೆಬ್ ಸೈಟ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿರುವುದರಿಂದ ದಳ್ಳಾಲಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕಾರ್ಯಕ್ಕೆ ಗ್ರಾಹಕರನ್ನು ಸೆಳೆಯುತ್ತಿದ್ದಾರೆ ಎಂಬ ಆಘಾತಕಾರಿ ಅಧ್ಯಯನವನ್ನು ಬಹಿರಂಗಗೊಂಡಿದೆ.

ಮುಖ್ಯವಾಹಿನಿಯಲ್ಲಿ ವೆಬ್ ಸೈಟ್ ಗಳನ್ನು ಬಳಸಿಕೊಳ್ಳಲು ದಳ್ಳಾಳಿಗಳು ನೂತನ ತಂತ್ರಜ್ಞಾನಗಳ ಮೂಲಕ ತಮ್ಮ ಜಾಹೀರಾತುಗಳನ್ನು ವೆಬ್ ಸೈಟ್ ಹಾಗೂ ಮೊಬೈಲ್ ಆಪ್ ಗಳ ಮೂಲಕ ಗಿರಾಕಿಗಳನ್ನು ತಲುಪುತ್ತಿದ್ದಾರೆ. ಇಂತಹ ವೆಬ್ ಸೈಟ್ ಗಳನ್ನು ಬಳಸುವವರಿಗೆ ಈ ಲಿಂಕ್ ಗಳು ತೆರೆದುಕೊಳ್ಳುತ್ತೇವೆ ಆ ಮೂಲಕ ದಳ್ಳಾಳಿಗಳು ತಮ್ಮ ಕಸುಬನ್ನು ಮುಂದುವರೆಸಿದ್ದಾರೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಅಪರಾಧ ನ್ಯಾಯ ಶಾಲೆಯ ನಿರ್ದೇಶಕ, ಬಹರಗಾರ ಮೇರಿ ಫೀನ್ ಹೇಳಿದ್ದಾರೆ.

ಅಟ್ಲಾಂಟಾ ಮತ್ತು ಚಿಕಾಗೋದ ಸುಮಾರು 71 ದಳ್ಳಾಳಿಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು, ಆನ್ ಲೈನ್ ಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಹೇಗೆ ಮಾರ್ಕೆಟಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಿದ್ದಾರೆ.

ಈ ಮೂಲಕ ದಳ್ಳಾಳಿಗಳು ವಾರ್ಷಿಕವಾಗಿ ಕನಿಷ್ಠ 75 ಸಾವಿರ ಡಾಲರ್ ಸಂಪಾದಿಸುತ್ತಿದ್ದಾರೆ. ಆನ್ ಲೈನ್ ಮೂಖಾಂತಕ ಶೇಖಡ 80ರಷ್ಟು ಗಿರಾಕಿಗಳನ್ನು ದಳ್ಳಾಳಿಗಳು ಸಂಪರ್ಕಿಸುತ್ತಿದ್ದಾರಂತೆ.

Comments are closed.