ಅಂತರಾಷ್ಟ್ರೀಯ

ಒಲಿಂಪಿಕ್ಸ್‌ನಲ್ಲಿ ಮಿಂಚಲು ಭಾರತ ವಿಫಲವಾಗಿದ್ದೇಕೆ, ಕಾರಣ ಚೀನಾಗೆ ಗೊತ್ತಿದೆ

Pinterest LinkedIn Tumblr

olaಬೀಜಿಂಗ್,: ಚೀನಾ ಅತ್ಯಧಿಕ ಜನಸಂಖ್ಯೆಯೊಂದಿಗೆ ಒಲಿಂಪಿಕ್ಸ್‌ನಲ್ಲಿ ತನ್ನ ಪದಕಗಳ ಟ್ಯಾಲಿಯನ್ನು ವೃದ್ಧಿಸಲು ಶ್ರಮಪಟ್ಟು ಅದರಲ್ಲಿ ಯಶಸ್ವಿಯಾಗಿದೆ. ಚೀನಾದ ಡ್ರಾಗನ್ ಕ್ರೀಡೆಯ ಸೂಪರ್ ಪವರ್ ಆಗಲು ಹೆಚ್ಚು ಸಮಯ ಬೇಕಾಗಿಲ್ಲ. ಈಗ ಚೀನಾದ ಮಾಧ್ಯಮ ಒಲಿಂಪಿಕ್ಸ್‌ನಲ್ಲಿ ಹೊಳೆಯಲು ವಿಫಲವಾಗುತ್ತಿರುವ ಭಾರತದ ಕ್ರೀಡೆಯನ್ನು ಬಾಧಿಸುತ್ತಿರುವ ಸಮಸ್ಯೆಯನ್ನು ಕೂಡ ವಿಶ್ಲೇಷಣೆ ನಡೆಸಿದೆಯಂತೆ.

ಮೂಲಸೌಲಭ್ಯಗಳ ಕೊರತೆ, ಕಳಪೆ ಆರೋಗ್ಯ, ಬಡತನ, ಬಾಲಕಿಯರಿಗೆ ಕ್ರೀಡೆಯಲ್ಲಿ ಹೆಚ್ಚು ಅವಕಾಶವಿಲ್ಲ, ಬಾಲಕರಿಗೆ ವೈದ್ಯ ಮತ್ತು ಎಂಜಿನಿಯರ್ ಆಗುವುದಕ್ಕೆ ಒತ್ತಡ, ಅಥ್ಲೆಟಿಕ್ಸ್‌ಗಿಂತ ಕ್ರಿಕೆಟ್ ಹೆಚ್ಚು ಜನಪ್ರಿಯತೆ, ಕುಸಿಯುತ್ತಿರುವ ಹಾಕಿಯ ಗತವೈಭವ,ಗ್ರಾಮೀಣ ಪ್ರದೇಶಗಳಲ್ಲಿ ಒಲಿಂಪಿಕ್ಸ್ ಮಾಹಿತಿಯ ಕೊರತೆ.

ಭಾರತದಲ್ಲಿ 120 ಕೋಟಿ ಜನಸಂಖ್ಯೆಯಿದೆ. ಚೀನಾದ ಬಿಟ್ಟರೆ ಅತೀ ಹೆಚ್ಚು ಜನಸಾಂದ್ರತೆಯ ದೇಶ. 2012ರಲ್ಲಿ ಭಾರತಕ್ಕೆ ಕೇವಲ 6 ಪದಕಗಳು ಸಿಕ್ಕಿತ್ತು ಎಂದು ಚೀನಾ ಮಾಧ್ಯಮದ ಲೇಖನದಲ್ಲಿ ತಿಳಿಸಿದೆ.

ಕ್ರಿಕೆಟ್ ಭಾರತದ ರಾಷ್ಟ್ರೀಯ ಕ್ರೀಡೆಯಂತಾಗಿದೆ. ಭಾರತೀಯರು ಇದನ್ನು ಧರ್ಮವನ್ನು ಪ್ರೀತಿಸಿದಷ್ಟು ಪ್ರೀತಿಸುತ್ತಾರೆ. ಇದರಿಂದ ಅನೇಕ ಯುವಕರಿಗೆ ಇತರೆ ಕ್ರೀಡಾತರಬೇತಿ ಪಡೆಯುವಷ್ಟು ಧೈರ್ಯವಿಲ್ಲ. ಆದರೆ ಕ್ರಿಕೆಟ್ ಒಲಿಂಪಿಕ್ ಈವೆಂಟ್‌ನಲ್ಲಿ ಸೇರಿಲ್ಲ. ಭಾರತೀಯರು ಅದರ ನೆರವಿನಿಂದ ಚಿನ್ನದ ಪದಕ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಧ್ಯಮ ತಿಳಿಸಿದೆ.

Comments are closed.