ಕರಾಚಿ: 6 ನಿಮಿಷಗಳ ಕಾಲ ಹೃದಯ ಸ್ತಬ್ಧಗೊಂಡು ಉಸಿರಾಟ ನಿಂತಿದ್ದ ಪಾಕಿಸ್ತಾನದ ಕ್ರಿಕೆಟಿಗ ಹನೀಫ್ ಮೊಹಮ್ಮದ್ ಅವರಿಗೆ ವೈದ್ಯರ ನಿರಂತರ ಪ್ರಯತ್ನದ ಫಲವಾಗಿ ಮತ್ತೆ ಜೀವ ಬಂದಿದೆ.
ಹನೀಫ್ ಮೊಹಮ್ಮದ್ ಅವರು ಮೃತಪಟ್ಟಿದ್ದಾರೆ ಎಂದು ಪುತ್ರ ಶೋಯೆಬ್ ಮೊಹಮ್ಮದ್ ಮಾಧ್ಯಮಕ್ಕೆ ನೀಡಿದ್ದರು. ಇದಾಗ ಕೆಲ ನಿಮಿಷಗಳಲ್ಲೇ ಶೋಯೆಬ್ ಜೀವಂತವಾಗಿದ್ದಾರೆ ಎಂದು ಅವರ ತಂದೆ ಮಾಧ್ಯಮಗಳು ಸ್ಫಷ್ಟನೆ ನೀಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹನೀಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಹನೀಫ್ ಅವರ ಹೃದಯ ಸುಮಾರು 6 ನಿಮಿಷಗಳ ಕಾಲ ಸ್ತಬ್ಧವಾಗಿತ್ತು. ಈ ವೇಳೆ ವೈದ್ಯರು ನಿರಂತರವಾಗಿ ಪ್ರಯತ್ನಿಸಿದ ನಂತರ ಅವರ ಹೃದಯ ಬಡಿತ ಪ್ರಾರಂಭವಾಗಿದೆ. ಪ್ರಸ್ತುತ ಅವರಿಗೆ ವೆಂಟಿಲೇಟರ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
Comments are closed.