ಅಂತರಾಷ್ಟ್ರೀಯ

ಅಲ್ಲಾಹ ಎಂದು ಉದ್ಗರಿಸಿದ್ದಕ್ಕೆ ವಿಮಾನದಿಂದ ಕೆಳಗಿಳಿಸಿದರು

Pinterest LinkedIn Tumblr

allaಷಿಕಾಗೊ: ಸುಸ್ತಾಯಿತೆಂದು ‘ಅಲ್ಲಾಹ್‌’ ಎಂದಿದ್ದಕ್ಕೆ ಪಾಕ್- ಅಮೇರಿಕನ್ ದಂಪತಿಯನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಷಿಕಾಗೊದಲ್ಲಿ ನಡೆದಿದೆ.

‘ವಿಮಾನದೊಳಗೆ ನಾವು ಸುಸ್ತಾಗಿದ್ದೆವು. ಈ ಸಂದರ್ಭದಲ್ಲಿ ನಮಗರಿವಿಲ್ಲದೆ ಅಲ್ಲಾಹ್‌ ಎಂಬ ಉದ್ಗಾರ ಬಂತು. ಈ ಕಾರಣಕ್ಕೆ ನಮ್ಮನ್ನು ಕೆಳಗೆ ಇಳಿಸಲಾಯಿತು’ ಎಂದು ನಾಝಿಯಾ ಮತ್ತು ಫೈಜಲ್ ಅಲಿ ದಂಪತಿ ಡೆಲ್ಟಾ ಏರ್‌ಲೈನ್ಸ್ ವಿರುದ್ಧ ದೂರಿದ್ದಾರೆ.

ದಂಪತಿ ಪ್ಯಾರಿಸ್‌ನಿಂದ ಓಹಿಯೋದ ಸಿನ್ಸಿನಾಟಿಗೆ ಹೊರಟಿದ್ದರು. ವಿಮಾನದೊಳಗೆ ಬಂದ ಕೂಡಲೇ ತಮ್ಮ ಶೂ ಬಿಚ್ಚಿಟ್ಟ ನಾಝಿಯಾ ತಂದೆ-ತಾಯಿಗಳಿಗೆ ಮೊಬೈಲ್ ಸಂದೇಶ ಕಳುಹಿಸಿ, ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ಒಂಬತ್ತು ಗಂಟೆಗಳ ಪ್ರಯಾಣಕ್ಕೆ ಸಿದ್ಧರಾಗುತ್ತಿದ್ದರು. ಈ ಸಂದರ್ಭದಲ್ಲೇ ವಿಮಾನದ ಸಿಬ್ಬಂದಿ ಅವರ ಬಳಿ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಮುಸ್ಲಿಂ ಮಹಿಳೆ ಸ್ಕಾರ್ಫ್‌ ಧರಿಸಿದ್ದಾಳೆ, ಆಕೆಯ ಜತೆಗಿದ್ದ ಪುರುಷ ಮೊಬೈಲ್ ಫೋನ್ ಮುಚ್ಚಿಡುತ್ತಿದ್ದಾನೆ, ಜತೆಗೆ ‘ಅಲ್ಲಾಹ್‌’ ಎನ್ನುತ್ತಿದ್ದಾನೆ. ಈ ಮುಸ್ಲಿಂ ದಂಪತಿ ಜತೆ ಪ್ರಯಾಣಿಸಲು ನಮಗೆ ಕಂಪರ್ಟೇಬಲ್ ಎನ್ನಿಸುತ್ತಿಲ್ಲ’ ಎಂದು ವಿಮಾನದ ಸಿಬ್ಬಂದಿಯೊಬ್ಬರು ಪೈಲೆಟ್‌ಗೆ ದೂರು ನೀಡಿದ್ದರು.

ಕೂಡಲೇ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿದ ಪೈಲಟ್ ಈ ಕುರಿತು ‘ಮುಸ್ಲಿಂ ದಂಪತಿಯನ್ನು ಕೆಳಗಿಳಿಸುವವರೆಗೆ ವಿಮಾನ ಹಾರಾಟ ನಡೆಸುವುದಿಲ್ಲ ಎಂದರು. ದಂಪತಿಯನ್ನು ಕೆಳಗಿಳಿಸಿ ವಿಮಾನ ಪ್ರಯಾಣವನ್ನು ಮುಂದುವರೆಸಲಾಯಿತು.

Comments are closed.