ಅಂತರಾಷ್ಟ್ರೀಯ

ಬೊಜ್ಜು ಹೆಚ್ಚಾದರೆ ಮಿದುಳು ಮುದಿಯಾಗುವುದು!

Pinterest LinkedIn Tumblr

Brain_webಲಂಡನ್: ಬೊಜ್ಜು ಹೊಂದಿರುವ ವ್ಯಕ್ತಿಗಳ ಮಿದುಳು ಸಾಮಾನ್ಯ ದೇಹ ಹೊಂದಿರುವ ವ್ಯಕ್ತಿಗಳಿಗಿಂತ 10 ವರ್ಷ ವಯಸ್ಸಾದಂತಾಗುವುದು ಎಂದು ಯುಕೆ ಕೆಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದ ಮೂಲಕ ತಿಳಿಸಿದ್ದಾರೆ.

ವೈಟ್ ಮ್ಯಾಟರ್ ಎಂಬ ಅಂಗಾಂಶ ದೇಹ ಮತ್ತು ಮಿದುಳಿಗೆ ಸಂಪರ್ಕ ಕಲ್ಪಿಸುವ ಕೋಶವಾಗಿದ್ದು, ಮಾಹಿತಿ ವರ್ಗಾವಣೆಯ ಕಾರ್ಯವನ್ನು ನಿರ್ವಹಿಸುತ್ತದೆ. ವಯಸ್ಸಿಗೆ ತಕ್ಕಂತೆ ಕುಗ್ಗುವ ಮಾನವನ ಮಿದುಳು ದೇಹದಲ್ಲಿ ಬೊಜ್ಜು ಮೈಗೂಡಿಕೊಳ್ಳುವವರಲ್ಲಿ 10 ವರ್ಷ ಹಳೆಯದಾಗುತ್ತದೆ ಎಂಬ ಮಾಹಿತಿಯ ವರದಿಯನ್ನು 20 ರಿಂದ 87 ವರ್ಷದರೆಗಿನ 427 ಜನರನ್ನು ಎರಡು ಪಂಗಡಗಳಾಗಿ ವಿಂಗಡಿಸಿ ಅಧ್ಯಯನ ನಡೆಸುವ ಮೂಲಕ ಸಿದ್ಧಪಡಿಸಿದ್ದಾರೆ ಸಂಶೋಧಕರು.

ಮಧ್ಯ ವಯಸ್ಕರಲ್ಲಿ ಮಿದುಳು ದುರ್ಬಲವಾಗುವುದು ಸಾಮಾನ್ಯ, ಅಧ್ಯಯನದಲ್ಲಿ ಕಂಡುಕೊಂಡ ವಿಷಯವೆಂದರೆ ಮಿದುಳಿನ ಕುಗ್ಗುವಿಕೆ ಬೊಜ್ಜು ಹೊಂದಿರುವವರಲ್ಲಿ ಬೇಗನೆ ಆಗುವುದು ಮತ್ತು ಸಾಮಾನ್ಯ ಮಾನವನ ದೇಹಸ್ಥಿತಿಗಿಂತ ಬೊಜ್ಜು ಹೊಂದಿರುವವರ ಮಿದುಳು ವೈಟ್ ಮ್ಯಾಟರ್ ಅಂಗಾಂಶದೊಂದಿಗೆ ವರ್ತಿಸುವುದನ್ನು ಕಡಿಮೆ ಮಾಡಿ ಬಹುಬೇಗ ಕುಗ್ಗುವುದು ಎಂದು ಅಧ್ಯಯನ ನಡೆಸಿದ ಸಂಶೋಧಕ ಡಾ. ಲಿಸಾ ರೊನನ್ ತಿಳಿಸಿದ್ದಾರೆ.

ನ್ಯೂರೋಬಯಾಲಿಜಿ ಆಫ್ ಏಜಿಂಗ್ ಎಂಬ ಜರ್ನಲ್ನಲ್ಲಿ ಈ ಅಧ್ಯಯನದ ವಿಸ್ತ್ರತ ವರದಿ ಪ್ರಕಟಿಸಿದ್ದಾರೆ.

Comments are closed.