ಅಂತರಾಷ್ಟ್ರೀಯ

‘ಪೋಕಿಮಾನ್ ಗೋ’ ತಂದಿಟ್ಟ ಫಜೀತಿ

Pinterest LinkedIn Tumblr

poವಾಷಿಂಗ್ಟನ್: ಪ್ರಪಂಚದಾದ್ಯಂತ ಹುಚ್ಚೆಬ್ಬಿಸಿರುವ ಪೋಕಿಮಾನ್ ಗೋ ಆಟದ ಅಮಲಿನಲ್ಲಿ ಯುವಕರಿಬ್ಬರು ಕೆನಡಾದ ಗಡಿ ದಾಟಿ ಅಮೆರಿಕ ಪ್ರವೇಶಿಸಿ ಫಜೀತಿಗೆ ಸಿಲುಕಿದ ಘಟನೆ ನಡೆದಿದೆ.

ಇತ್ತೀಚೆಗೆ ಬಿಡುಗಡೆಯಾದ ಸ್ಥಳ ಆಧಾರಿತ ಆಟದಲ್ಲಿ ಮೈಮರೆತ ಇಬ್ಬರು ಯುವಕರು ತಮ್ಮ ಮೊಬೈಲ್ ಹಿಡಿದು ಅಮೆರಿಕ-ಕೆನೆಡಾ ಗಡಿಯ ಅಲ್‌ಬೆರ್ಟಾ ಪ್ರದೇಶದಲ್ಲಿ ಓಡಾಡುತ್ತಿರುವುದನ್ನು ಅಮೆರಿಕ ಗಡಿ ರಕ್ಷಣಾ ಪಡೆಯ ಯೋಧರು ಗಮನಿಸಿದ್ದಾರೆ. ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮೊಬೈಲ್ ಆಟದ ಹುಚ್ಚು ಈ ಕೃತ್ಯದ ಹಿಂದಿರುವುದು ಬಯಲಾಗಿದೆ. ನಂತರ ಅವರ ತಾಯಿ ಅವರನ್ನು ಸಂಪರ್ಕಿಸಿ ಯುವಕರ ವಿವರಗಳನ್ನು ಪರಿಶೀಲಿಸಿ ಬಿಡುಗಡೆ ಮಾಡಲಾಗಿದೆ.

ಕ್ಯುಬೆಕ್ ನಗರದಲ್ಲಿ ಕಾರಿನ ಚಾಲಕನು ಯದ್ವಾತದ್ವಾ ಕಾರು ಚಲಾಯಿಸಿ ಪೊಲೀಸರಿಗೆ ಗುದ್ದಿದ್ದಾನೆ. ನಂತರ ಅವನು ಪೋಕಿಮಾನ್ ಆಟದಲ್ಲಿ ಮಗ್ನನಾಗಿ ಹಾಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ಒಬ್ಬ ಮಹಿಳೆ ಆಟದಲ್ಲಿ ಮೈಮರೆತು ಮರವೇರಿದ ಪ್ರಸಂಗವೂ ನಡೆದಿದೆ. ‘ಪೋಕಿಮಾನ್ ಗೋ’ ಸ್ಥಳವನ್ನು ಆಧರಿಸಿ ಮೊಬೈಲ್ ಪರದೆಯ ಮೇಲೆ ನೈಜ ಜಗತ್ತಿನ ಚಿತ್ರಣದೊಂದಿಗೆ ಸಾಹಸ ಪಂದ್ಯಗಳನ್ನು ಆಡುತ್ತಾ ಸಾಗುವ ಆಟವಾಗಿದೆ.

Comments are closed.