ಬ್ಯಾಂಕಾಕ್ : ಇಲ್ಲಿಗೆ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಬಹುವಾಗಿ ಸೆಳೆಯುವ ವೇಶ್ಯಾಗ್ರಹಗಳನ್ನುಮತ್ತು ಸ್ವಚ್ಛಂದದ ಬಾರ್‌ಗಳನ್ನು ಮುಚ್ಚಲು ಥೈಲ್ಯಾಂಡ್‌ನ ಪ್ರವಾಸೋದ್ಯಮ ಸಚಿವೆ ಆದೇಶ ನೀಡಿದ್ದು ಅದನ್ನೇ ನಂಬಿರುವ ಸಾವಿರಾರು ಮಂದಿ ವೇಶ್ಯೆಯರು ದಿಕ್ಕು ತೋಚದಾಗಿದ್ದಾರೆ.
ದೇಶದ ಮೊದಲ ಮಹಿಳಾ ಪ್ರವಾಸೋದ್ಯಮ ಸಚಿವೆಯಾಗಿರುವ ಕೋಬ್ಕಾರ್ನ್ ವಟ್ಟಾನಾವ್ರಾಂಗ್‌ಕುಲ್ ಅವರು ಥೈಲ್ಯಾಂಡ್‌ಗೆ ಕುಖ್ಯಾತಿ ತಂದಿಟ್ಟಿರುವ ಲೈಂಗಿಕ ವ್ಯಾಪಾರದಿಂದ ಮುಕ್ತ ದೇಶವನ್ನು ಮಾಡಿಸಲು ಈ ದಿಟ್ಟ ನಿರ್ಧಾರ ತಳೆದಿದ್ದಾರೆ.
ಥೈಲ್ಯಾಂಡ್‌ನಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರ ಆದರೆ ಇಲ್ಲಿಗೆ ಬರುವ ಹೆಚ್ಚಿನ ಪ್ರವಾಸಿಗರು
ವೇಶ್ಯೆಯರೊಂದಿಗೆ ಮಜಾ ಮಾಡುವ ಉದ್ದೇಶವನ್ನಿಟ್ಟುಕೊಂಡಿರುವವರಾಗಿದ್ದು ಇದುವರೆಗೆ ದಂಧೆಯನ್ನು ನಿರ್ಲಕ್ಷಿಸಲಾಗಿತ್ತು.
ಬೌದ್ಧ ಸಂಪ್ರದಾಯದ ದೇಶವಾಗಿರುವ ಥೈಲ್ಯಾಂಡ್‌ನ ಬ್ಯಾಂಕಾಕ್,ಪಟ್ಟಾಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರವಾಸಿಗರು ಗೋ ಗೋ ಬಾರ್‌ಗಳಲ್ಲಿ ಮದಿರೆಯೊಂದಿಗೆ ಮುಕ್ತ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದು ,ವೇಶ್ಯೆಯರೊಂದಿಗೆಮಜಾ ಮಾಡುವುದು,ಮಸಾಜ್ ಪಾರ್ಲರ್‌ಗಳಿಗೆ ಹೋಗುವುದು ದೊಡ್ಡ ಉದ್ಯಮವೇ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ‘ನಮ್ಮ ದೇಶಕ್ಕೆ ನಮ್ಮ ಸಂಪ್ರಾದಾಯ, ಪ್ರಕೃತಿ ಸೌಂದರ್ಯ ನೋಡುವುದಕ್ಕಾಗಿ ಪ್ರವಾಸಿಗರು ಆಗಮಿಸಲಿ ಈ ಉದ್ದೇಶಕ್ಕಾಗಿ ಬರುವುದು ಬೇಡ’ ಎಂದಿದ್ದಾರೆ.
ಥೈಲ್ಯಾಂಡ್‌ನಲ್ಲಿ 1,23,530 ಸೆಕ್ಸ್ ವರ್ಕರ್ಸ್‌ಗಳಿದ್ದಾರೆ ಎಂದು ವರದಿ ಹೇಳಿದೆ. ಸಚಿವೆಯ ಈ ನಿರ್ಧಾರ ಪೂರ್ಣ ಪ್ರಮಾಣದಲ್ಲಿ ಕಾರ್ಯ ರೂಪಕ್ಕೆ ಬರುವುದೇ ಎಂದು ಕಾದು ನೋಡಬೇಕಿದೆ.
– ಉದಯವಾಣಿ
Comments are closed.