
ಬ್ಯಾಂಕಾಕ್: ಸದಾ ತೆಳ್ಳಗೆ, ಸದೃಢರಾಗಿರಬೇಕೆಂಬ ಬಯಕೆ ಎಲ್ಲರಲ್ಲಿ ಇರುವುದು ಸಹಜ. ಆದರೆ, ಕೊಬ್ಬಿನಿಂದ ಕೂಡಿದ ರುಚಿಕರ ಆಹಾರ ಸೇವಿಸದೆ ಇರಲು ಮನಸ್ಸು ಒಪ್ಪುವುದಿಲ್ಲ. ಹೆಚ್ಚು ಎಣ್ಣೆ ಬಳಸಿ ಸಿದ್ಧಪಡಿಸಿದ ಆಹಾರ ಸೇವಿಸಿಯೂ ದಪ್ಪ ಗಾಗದಿರಲು ಥಾಯ್ಲೆಂಡ್ನ ಹೆಲ್ತ್ ಪ್ರೊಮೋಷನ್ ಫೌಂಡೇಷನ್ ವಿಶಿಷ್ಟ ಮಾರ್ಗ ಪತ್ತೆ ಹಚ್ಚಿದೆ.
ವಿಶೇಷ ತಂತ್ರಜ್ಞಾನದಿಂದ ಕೂಡಿದ ತಟ್ಟೆಯೊಂದನ್ನು ಅದು ಅಭಿವೃದ್ಧಿಪಡಿಸಿದ್ದು, ಈ ತಟ್ಟೆಯಲ್ಲಿ ಆಹಾರ ಸೇವಿಸಿದರೆ ಕೊಬ್ಬು ದೇಹ ಸೇರುವುದಿಲ್ಲ! ಹೌದು, ‘ಅಬ್ಸಾರ್ಬ್ ಪ್ಲೇಟ್’ ಎಂಬ ಹೆಸರಿನ ಈ ತಟ್ಟೆಯಲ್ಲಿ ಆಹಾರವನ್ನು ಹಾಕಿದ ಕೂಡಲೆ 30 ಕ್ಯಾಲೊರಿಯಷ್ಟು ಕೊಬ್ಬನ್ನು ಅದು ಹೀರಿಕೊಳ್ಳುತ್ತದೆ. ಆಹಾರದಲ್ಲಿರುವ ಎಣ್ಣೆಯ ಅಥವಾ ಜಿಡ್ಡಿನ ಅಂಶವನ್ನು ಹೀರಿಕೊಳ್ಳುವ ಮೂಲಕ ಸೇವಿಸುವವನ ಹೊಟ್ಟೆ ಸೇರದಂತೆ ನೋಡಿಕೊಳ್ಳುತ್ತದೆ.
ಅಬ್ಸಾರ್ಬ್ ಪ್ಲೇಟನ್ನು ವಿಶಿಷ್ಟ ವಿನ್ಯಾಸದಲ್ಲಿ ಅಭಿವೃದ್ಧಿಗೊಳಿಸಲಾ ಗಿದ್ದು, ಇದರಲ್ಲಿ ಸುಮಾರು 500 ಸಣ್ಣ ರಂಧ್ರಗಳನ್ನು ಕೊರೆಯಲಾಗಿದೆ. ಈ ತಟ್ಟೆಗೆ ಆಹಾರ ಹಾಕುತ್ತಿದ್ದಂತೆ ಅದರಿಂದ ಸುಮಾರು 7 ಎಂ.ಎಲ್. ಎಣ್ಣೆಯನ್ನು ಅಂದರೆ, 30 ಕ್ಯಾಲೊರಿಯಷ್ಟನ್ನು ಈ ರಂಧ್ರಗಳು ಹೀರಿಕೊಳ್ಳುತ್ತವೆ. ಥಾಯ್ಲೆಂಡ್ ಜನ ಎಣ್ಣೆ ಬಳಸಿದ ಆಹಾರವನ್ನೇ ಹೆಚ್ಚೆಚ್ಚು ಸೇವಿಸುತ್ತಿರುವುದರಿಂದ ಅಲ್ಲಿ ಬೊಜ್ಜಿನ ಸಮಸ್ಯೆ ಮಿತಿ ಮೀರಿದೆಯಂತೆ. ಇದರಿಂದಾಗಿ ರಕ್ತದ ಏರೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಜನರಲ್ಲಿ ಹೆಚ್ಚಾಗುತ್ತದೆ. ಆದರೂ ಹೆಚ್ಚು ಎಣ್ಣೆ ಬಳಸಿ ಮಾಡಿದ ಅಡುಗೆಯನ್ನೇ ಥಾಯ್ ಜನ ಇಷ್ಟಪಡುತ್ತಾರೆ. ಹೀಗಾಗಿ, ಹೆಚ್ಚು ಕೊಬ್ಬಿನಿಂದ ಕೂಡಿದ ಸೇವಿಸಿದರೂ ಅದು ದೇಹ ಸೇರದಂತೆ ಮಾಡಲು ಈ ತಟ್ಟೆ ಅಭಿವೃದ್ಧಿಪಡಿಸಲಾಗಿದೆ ಎಂದಿದೆ ಹೆಲ್ತ್ ಪ್ರೊಮೋಷನ್ ಫೌಂಡೇಷನ್.
Comments are closed.