ಅಂತರಾಷ್ಟ್ರೀಯ

ಟ್ರಾಫಿಕ್ ಫೈನ್ ಗೆ ರೊಚ್ಚಿಗೆದ್ದ ವ್ಯಕ್ತಿ 2 ಬಕೆಟ್ ನಾಣ್ಯ ಸುರಿದು ಫೈನ್ ಕಟ್ಟಿದ

Pinterest LinkedIn Tumblr

coin

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ನಿವಾಸಿಯೊಬ್ಬ ಟ್ರಾಫಿಕ್ ಫೈನ್ ಕಟ್ಟಲು 2 ಬಕೆಟ್ ತುಂಬ ತುಂಬಿದ್ದ ನಾಣ್ಯಗಳನ್ನು ಮುನ್ಸಿಪಲ್ ಕೋರ್ಟ್‍ನ ಕೌಂಟರ್ ಬಳಿ ಸುರಿದು ಈಗ ಇಂಟರ್ನೆಟ್ ಸೆಲೆಬ್ರಿಟಿ ಆಗಿದ್ದಾನೆ.

ಗಂಟೆಗೆ 30 ಮೈಲಿ ವೇಗದಲ್ಲಿ ಹೋಗಬೇಕಿದ್ದ ರಸ್ತೆಯಲ್ಲಿ 39 ಮೈಲಿ ವೇಗದಲ್ಲಿ ಹೋಗುತ್ತಿದ್ದ ಕಾರಣ ಬ್ರೆಟ್ ಸ್ಯಾಂಡರ್ಸ್ ಎಂಬಾತನಿಗೆ 222.60 ಡಾಲರ್(ಸುಮಾರು 15 ಸಾವಿರ ರೂ.)ಗಳ ದಂಡ ವಿಧಿಸಲಾಗಿತ್ತು. ಆದರೆ ಇದರಿಂದ ರೊಚ್ಚಿಗೆದ್ದ ಸ್ಯಾಂಡರ್ ಈ ಮೊತ್ತಕ್ಕೆ ಸಮನಾದ ನಾಣ್ಯಗಳನ್ನು ಒಟ್ಟುಗೂಡಿಸಿ ಎರಡು ಬಕೆಟ್ ತುಂಬ ತುಂಬಿ ಕೌಂಟರ್ ಮುಂದೆ ಸುರಿದು, ರಸೀದಿಯನ್ನು ಇ-ಮೇಲ್ ಮೂಲಕ ಕಳಿಸಿ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾನೆ.

ಅಲ್ಲದೆ ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದು ಇದೀಗ ಈ ವಿಡಿಯೋ 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಸ್ಯಾಂಡರ್‍ನ ಈ ಅತಿರೇಕದ ವರ್ತನೆಗೆ ಇಲ್ಲಿನ ಜನ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಸ್ಯಾಂಡರ್, ತಾನು ಅಷ್ಟು ವೇಗದಲ್ಲಿ ಬರುತ್ತಿದ್ದರೂ ಅದರಿಂದ ಯಾರಿಗೂ ಅಪಾಯವಾಗಿಲ್ಲ. ಒಂದು ವೇಳೆ ನನ್ನಿಂದ ಯಾರ ಜೀವಕ್ಕಾದರೂ ಹಾನಿಯಾಗಿದ್ದರೆ, ಆಸ್ತಿಪಾಸ್ತಿ ನಷ್ಟವಾಗಿದ್ದರೆ ಆಗ ನಾನೇ ಜವಾಬ್ದಾರಿ ಹೊರುತ್ತಿದ್ದೆ ಅಂತ ಹೇಳಿದ್ದಾನೆ. ಆದರೆ ಆತನ ಈ ವಾದವನ್ನು ಒಪ್ಪದ ನ್ಯಾಯಾಧೀಶರು ಗರಿಷ್ಠ ಮೊತ್ತದ ದಂಡ ವಿಧಿಸಿದ್ರು.

ಸ್ಯಾಂಡರ್ ದಂಡ ಕಟ್ಟಲು ತಂದ ಹಣದ ಬಕೆಟ್ ಮೇಲೆ ಸುಲಿಗೆ ಹಣ ಎಂದು ಬರೆದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದ.

Comments are closed.