ಅಂತರಾಷ್ಟ್ರೀಯ

ರಷ್ಯಾ ಸೇನಾಪಡೆಯಲ್ಲಿನ್ನು ರೊಬೋಟ್‌ ಸೈನಿಕ!

Pinterest LinkedIn Tumblr

rashyaಇಂಗ್ಲಿಷ್‌ನ ಪ್ರಸಿದ್ಧ ಚಲನಚಿತ್ರ ಟರ್ಮಿನೇಟರ್‌ ನೋಡಿದ್ದೀರಾ? ಆ ಕಾಲ್ಪನಿಕ ಚಿತ್ರದಲ್ಲಿರುವ ರೊಬೋಟ್‌ ಮಾದರಿ ಶೀಘ್ರ ನನಸಾಗಲಿದೆ! 21ನೇ ಶತಮಾನ ತಂತ್ರಜ್ಞಾನದ ಶತಮಾನ. ಯುದ್ಧ ತಾಂತ್ರಿಕತೆಗೆ ಬಂದರೆ ಈಗಾಗಲೇ ಕಂಡು ಕೇಳರಿಯದ ರೀತಿಯ ಮಾದರಿಯ ಶಸ್ತ್ರಗಳು, ವಾಹನಗಳು, ಡ್ರೋನ್‌ಗಳೆಲ್ಲ ಬಂದಿವೆ. ಇದೀಗ ಅದಕ್ಕೊಂದು ಹೊಸ ಸೇರ್ಪಡೆ ರಷ್ಯಾದ ವಿಜ್ಞಾನಿಗಳಿಂದ ಆಗಿದೆ. ಒಂದು ವೇಳೆ ಇದು ಈ ಆವಿಷ್ಕಾರ ಯಶಸ್ವಿಯಾಗಿ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗಿದ್ದೇ ಆದಲ್ಲಿ ಮತ್ತೆ ಸೈನಿಕರು ಯುದ್ಧ ಭೂಮಿಯಲ್ಲಿ ಪ್ರಾಣ ಕಳೆದುಕೊಳ್ಳಬೇಕಾದ ಪ್ರಮೇಯವೇ ಇಲ್ಲ.

ಕಾರಣ ಇದೊಂದು ರೊಬೋಟ್‌! ಭಾರೀ ಪ್ರಮಾಣದಲ್ಲಿ ನ್ಪೋಟಕ ತುಂಬಿದ ಸ್ಥಳ, ವಿಕಿರಣ, ರಾಸಾಯನಿಕ ದಾಳಿ ನಡೆಸಿದ ಸಂದರ್ಭ,ತುರ್ತು ಕಾರ್ಯಾಚರಣೆ ಇತ್ಯಾದಿಗಳಿಗೆಲ್ಲ ರೊಬೋಟ್‌ ಗಳನ್ನು ಬಳಸಲು ರಷ್ಯಾದ ವಿಜ್ಞಾನಿಗಳು ಚಿಂತಿಸಿದ್ದಾರೆ.

“ಇವಾನ್‌’ ಹೆಸರಿನ ಈ ರೊಬೋಟ್‌ ಅನ್ನು ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಿಸಲಾಗುತ್ತದೆ. ಇಡೀ ರೊಬೋಟ್‌ನಲ್ಲಿ ಸೆನ್ಸರ್‌ಗಳಿದ್ದು, ಅಣತಿಯಂತೆ ಎಂತಹ ಪ್ರತಿಕೂಲ ಸಂದರ್ಭದಲ್ಲೂ ಕಾರ್ಯನಿರ್ವಹಿಸಲಿದೆ. ಅಷ್ಟೇ ಅಲ್ಲದೇ, ವಾಹನಗಳನ್ನೂ ಚಲಾಯಿಸಬಲ್ಲದು. ರಷ್ಯಾದ “ಫೌಂಡೇಶನ್‌ ಫಾರ್‌ ಅಡ್ವಾನ್‌Õಡ್‌ ಸ್ಟಡೀಸ್‌’ ವಿಜ್ಞಾನಿಗಳು ಈ ರೊಬೋಟ್‌ ಆವಿಷ್ಕರಿಸಿದ್ದಾರೆ.

ಹಲವು ಮೈಲು ದೂರದಲ್ಲಿದ್ದು ಈ ಉಕ್ಕಿನ ರೊಬೋಟ್‌ ನಿಯಂತ್ರಿಸಬಹುದು. ಮಾನವನಂತೆಯೇ ನಡೆದಾಡುವ ಈ ರೊಬೋಟ್‌ ಬಂದೂಕು ಉಪಯೋಗಿಸುತ್ತದೆ, ಗ್ರೆನೇಡ್‌ ಕೂಡ ಎಸೆಯುತ್ತದೆ. ಆದಾಗ್ಯೂ ತನ್ನಿಂದತಾನಾಗಿಯೇ ಇದು ದಾಳಿ ಮಾಡುವಂತ ವ್ಯವಸ್ಥೆ ರೂಪಿಸಬೇಕಾದರೆ ಮತ್ತಷ್ಟು ವರ್ಷಗಳು ಬೇಕಾಗಬಹುದು ಎಂದು ಹೇಳಲಾಗಿದೆ.

ಇದೀಗ ರೊಬೋಟ್‌ಗೆ ಅತಿ ಕಷ್ಟಕರ, ಯುದ್ಧಭೂಮಿಯಲ್ಲಿ ಎದುರಾಗುವ ಸಂದರ್ಭ ರೀತಿಯ ಕೆಲಸಗಳನ್ನು ಕೊಡಲಾಗಿದ್ದು, ಅವುಗಳಲ್ಲಿ ರೊಬೋಟ್‌ ಪಾಸಾಗಿದೆಯಂತೆ. ಇನ್ನೂ ಕೆಲವೊಂದು ಪರೀಕ್ಷೆಗಳು ನಡೆಯಬೇಕಿದ್ದು, ಮತ್ತಷ್ಟೇ ರೊಬೋಟ್‌ ರಷ್ಯಾ ಸಶಸ್ತ್ರ ಪಡೆಗೆ ಸೇರಿಕೊಳ್ಳುವ ಸಾಧ್ಯತೆ ಇದೆ.
-ಉದಯವಾಣಿ

Comments are closed.