ಅಂತರಾಷ್ಟ್ರೀಯ

ಹೊಸ ವರ್ಷಾಚರಣೆ ಪ್ರಯುಕ್ತ 63 ರಾಜಕೀಯ ಕೈದಿಗಳಿಗೆ ಮ್ಯಾನ್ಮಾರ್ ಅಧ್ಯಕ್ಷ ಹಟಿನ್ ಕ್ಷಮಾದಾನ

Pinterest LinkedIn Tumblr

manಯಂಗೊನ್,ಏ.17-ದೇಶದ ಹೊಸ ವರ್ಷಾಚರಣೆ ದಿನವಾದ ಇಂದು ಮ್ಯಾನ್ಮಾರ್ ನೂತನ ಅಧ್ಯಕ್ಷ ಹಟಿನ್‌ಕ್ಯಾವ್ ಅವರು ದೇಶದ ವಿವಿಧ ಕಾರಾಗೃಹಗಳ್ಲಲಿದ್ದ 63 ಮಂದಿ ರಾಜಕೀಯ ಕೈದಿಗಳಿಗೆ ಇಂದು ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ್ದಾರೆ. ಕಳೆದ ತಿಂಗಳು ಮ್ಯಾನ್ಮಾರ್‌ನ ಚುನಾಯಿತ ಸರ್ಕಾರದ ನೂತನ ಅಧ್ಯಕ್ಷರನ್ನಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಅಗ್ರಗಣ್ಯ ನಾಯಕಿ ಆಂಗ್ ಸಾನ್ ಸೂಕಿ ಅವರ ಆಪ್ತರೂ ಆಗಿರುವ ಹಟಿನ್ ಹಿಂದಿನ ಮಿಲಿಟರಿ ಆಡಳಿತದ ಅವಧಿಯಲ್ಲಿ ಜೈಲು ಪಾಲಾಗಿದ್ದ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಹೊಸ ಬದುಕು ನೀಡುವುದನ್ನು ಆದ್ಯತಾ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ.

ನಮ್ಮ ದಾಖಲೆಯ ಪ್ರಕಾರ ಹಟಿನ್ ಅವರು ವಿವಿಧ ಜೈಲುಗಳಲ್ಲಿದ್ದ 63 ಜನ ರಾಜಕೀಯ ಬಂದಿಗಳನ್ನು ಇಂದು ಬಿಡುಗಡೆ ಮಾಡಿದ್ದಾರೆ ಎಂದು ರಾಜಕೀಯ ಕೈದಿಗಳ ಉಸ್ತುವಾರಿ ನೋಡಿಕೊಳ್ಳುವ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 83 ರಾಜಕೀಯ ಕೈದಿಗಳ ಬಿಡುಗಡೆಗೆ ಹಟಿನ್ ಇಂದು ಮುಂಜಾನೆ ಆದೇಶಿಸಿದ್ದರು. ಆದರೆ ಇಂಥವರು ಎಷ್ಟು ಜನರಿದ್ದಾರೆ ಎಂಬುದು ಖಚಿತವಾಗದ ಕಾರಣ 63 ಜನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

Write A Comment